Home Karnataka State Politics Updates Vanita Raut: ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿದೇಶಿ ವಿಸ್ಕಿ, ಬಿಯರ್‌ ಭಾಗ್ಯ-ಸ್ವತಂತ್ರ ಅಭ್ಯರ್ಥಿಯಿಂದ ಘೋಷಣೆ

Vanita Raut: ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿದೇಶಿ ವಿಸ್ಕಿ, ಬಿಯರ್‌ ಭಾಗ್ಯ-ಸ್ವತಂತ್ರ ಅಭ್ಯರ್ಥಿಯಿಂದ ಘೋಷಣೆ

Hindu neighbor gifts plot of land

Hindu neighbour gifts land to Muslim journalist

Vanita Raut: 2024ರ ಲೋಕಸಭೆ ಚುನಾವಣೆಗೆ ತಮ್ಮ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಚಂದ್ರಾಪುರದ ಚಿಮೂರ್ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವುತ್ ಗೆಲ್ಲಲು ಜನರಿಗೆ ಅಗ್ಗದ ಮದ್ಯದ ಭರವಸೆ ನೀಡಿದ್ದಾರೆ. ತಾನು ಗೆದ್ದರೆ ಬಡವರಿಗೆ ಅಗ್ಗದ ದರದಲ್ಲಿ ವಿಸ್ಕಿ, ಬಿಯರ್ ನೀಡುವುದಾಗಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಅಷ್ಟೇ ಅಲ್ಲ ಅಗ್ಗದ ದರದ ಬಿಯರ್ ಬಾರ್ ತೆರೆಯುವುದಾಗಿ ಭರವಸೆ ನೀಡಿದ್ದಾರೆ. ಪ್ರತಿ ಹಳ್ಳಿಯಲ್ಲಿ ಬಿಯರ್ ಬಾರ್ ತೆರೆಯುವುದಾಗಿ ಹೇಳಿದರು.

ಮಹಾರಾಷ್ಟ್ರದ ಈ ಸ್ವತಂತ್ರ ಅಭ್ಯರ್ಥಿಯು 2024 ರ ಲೋಕಸಭಾ ಚುನಾವಣೆಗೆ ಇಂತಹ ಭರವಸೆಗಳನ್ನು ನೀಡಿದ್ದಾರೆ.

ಪಡಿತರ ವ್ಯವಸ್ಥೆಯ ಮೂಲಕ ಮದ್ಯವನ್ನು ಆಮದು ಮಾಡಿಕೊಡುತ್ತೇನೆ. ಬಡವರು ಕಷ್ಟಪಟ್ಟು ದುಡಿಯುತ್ತಾರೆ. ಮದ್ಯ ಕುಡಿದು ಸಮಾಧಾನ ಕಂಡುಕೊಳ್ಳುತ್ತಾರೆ. ಗುಣಮಟ್ಟದ ಬಿಯರ್‌, ವಿಸ್ಕಿಯನ್ನು ಅವರು ಖರೀದಿ ಮಾಡಲು ಆಗುವುದಿಲ್ಲ. ಹಳ್ಳಿಗಾಡಿನ ಮದ್ಯ ಸೇವೆ ಮಾಡುತ್ತಾರೆ ಎಂದು ಅವರು ಹೇಳಿದರು. ಅಷ್ಟು ಮಾತ್ರವಲ್ಲದೇ ಲೋಕಸಭಾ ಚುನಾವಣೆ 2024 ರಲ್ಲಿ ಅಧಿಕಾರಕ್ಕೆ ಬಂದರೆ ತಾನು ಜನರಿಗೆ ಸಬ್ಸಿಡಿ ದರದಲ್ಲಿ ವಿಸ್ಕಿ ಮತ್ತು ಬಿಯರ್‌ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿ ಹಳ್ಳಿಯಲ್ಲಿ ಬಿಯರ್‌ ಬಾರ್‌ಗಳನ್ನು ತೆರೆಯುವುದಾಗಿಯೂ, ಸಂಸದರ ನಿಧಿಯಿಂದ ಬಡವರಿಗೆ ಆಮದು ಮಾಡಿಕೊಂಡು ವಿಸ್ಕಿ ಮತ್ತು ಬಿಯರನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.