Iftar Party Mangalore: ಮಂಗಳೂರು; ರಸ್ತೆ ಬಂದ್‌ ಮಾಡಿ ಇಫ್ತಾರ್‌ ಕೂಟ ಆಯೋಜನೆ; ನೋಟಿಸ್‌ ಜಾರಿ

Iftar Party Mangalore: ರಸ್ತೆ ಬಂದ್‌ ಮಾಡಿ ಇಫ್ತಾರ್‌ ಕೂಡಾ ಆಯೋಜನೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಇದೀಗ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಸಾರ್ವಜನಿಕ ರಸ್ತೆಯಲ್ಲಿ ಇಫ್ತಾರ್‌ ಕೂಟ ಆಯೋಜನೆ ಮಾಡಿದ್ದ ಅಬೂಬಕ್ಕರ್‌ ಸಿದ್ದಿಕಿಗೆ ತುರ್ತು ನೋಟಿಸನ್ನು ಚುನಾವಣಾ ಆಯೋಗ ನೀಡಿದೆ.

ಇದನ್ನೂ ಓದಿ: Bantwala Crime: ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಪಟ್ರಮೆ ಹೊಳೆಯಲ್ಲಿ ಶವವಾಗಿ ಪತ್ತೆ

ಮಂಗಳೂರು ಹೊರವಲಯದ ಮುಡಿಪು (Mudipu) ವಿನ ರಸ್ತೆಯಲ್ಲಿ ಆಟೋ ಚಾಲಕರಿಗಾಗಿ ಇಫ್ತಾರ್‌ ಕೂಟ ನಡೆಸಲಾಗಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರ ಕುರಿತು ಪರ ವಿರೋಧ ಚರ್ಚೆ ಆಗಿತ್ತು. ಇದೀಗ ಇಫ್ತಾರ್‌ ಕೂಟದಲ್ಲಿ ರಸ್ತೆ ಬಂದ್‌ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದೀರಿ ಎಂದು ಚುನಾವಣಾ ಆಯೋಗ ನೋಟಿಸನ್ನು ಆಯೋಜಕರಿಗೆ ನೀಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆ ಮಾಡಲಾಗಿದೆ ಈ ಮೂಲಕ ಎಂದು ನೋಟಿಸ್‌ ನೀಡಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Vanita Raut: ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿದೇಶಿ ವಿಸ್ಕಿ, ಬಿಯರ್‌ ಭಾಗ್ಯ-ಸ್ವತಂತ್ರ ಅಭ್ಯರ್ಥಿಯಿಂದ ಘೋಷಣೆ

Leave A Reply

Your email address will not be published.