Ambani Adani Agreement: ಪರಸ್ಪರ ಸ್ಪರ್ಧಿಗಳಾಗಿದ್ದ ಮುಖೇಶ್ ಅಂಬಾನಿ-ಗೌತಮ್ ಅದಾನಿ ಒಪ್ಪಂದ !

Ambani Adani Agreement: ಬಿಲಿಯನೇರ್ ದೈತ್ಯರಿಬ್ಬರೂ ಪರಸ್ಪರ ಕೈಜೋಡಿಸಿದ್ದಾರೆ. ಮುಖೇಶ್ ಅಂಬಾನಿ (Mukhesh Ambani) ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (RIL) ( Reliance industries Limited) ತನ್ನ ಪ್ರತಿಸ್ಪರ್ಧಿ ಉದ್ಯಮಿ ಗೌತಮ್ ಅದಾನಿ (Gowtham Adani) ಗ್ರೂಪ್ ನ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶದ ಅದಾನಿ ಪವರ್‌ನ ವಿದ್ಯುತ್ ಯೋಜನೆಯಲ್ಲಿ ರಿಲಯನ್ಸ್ 26 % ರಷ್ಟು ಪಾಲನ್ನು ಖರೀದಿಸಿದ್ದು, ಭಾರತದ ಈ ಇಬ್ಬರು ಬಾರಿ ಕೈಗಾರಿಕೋದ್ಯಮಿಗಳು ಒಂದಾಗಿದ್ದು ಅಚ್ಚರಿ ಮೂಡಿಸಿದೆ.

ಈ ರೀತಿ ಇಬ್ಬರು ಪ್ರತಿಸ್ಪರ್ಧಿ ಎಂದು ಕರಿಯಲ್ಪಡುತ್ತಿರುವ ಬಿಲಿಯನೇರ್ ಕೈಗಾರಿಕೋದ್ಯಮಿಗಳ ನಡುವೆ ಈ ರೀತಿಯ ಒಂದು ಒಪ್ಪಂದ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. ಮಹಾನ್ ಎನರ್ಜೆನ್ ಲಿಮಿಟೆಡ್‌ ಅದಾನಿ ಪವರ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ. ಅಲ್ಲಿ ರಿಲಯನ್ಸ್ ‘ಕ್ಯಾಪ್ಟಿವ್ ಪವರ್ ಪ್ಲಾಂಟ್’ ನ ಅಡಿಯಲ್ಲಿ RIL ಸಂಸ್ಥೆ ತನಗೆ 50 ಕೋಟಿ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಮಾಡುವ ಘಟಕದಲ್ಲಿ ತನ್ನ ಶೇಕಡ 26 ರಷ್ಟು ಪಾಲನ್ನು ಕೊಂಡುಕೊಂಡಿದೆ. ಈ ವಿದ್ಯುತ್ ಘಟಕದ ಒಟ್ಟು ಮೌಲ್ಯ 200 ಕೋಟಿ ರೂಪಾಯಿಯಾಗಿದೆ.
ರಿಲಯನ್ಸ್ ಮುಖೇಶ್ ಅಂಬಾನಿಯವರ ಆಸಕ್ತಿ ತೈಲ ಮತ್ತು ಅನಿಲದಿಂದ ಹಿಡಿದು ಅದೀಗ ಚಿಲ್ಲರೆ ವ್ಯಾಪಾರ ಮತ್ತು ಟೆಲಿಕಾಂಗಳವರೆಗೆ ಚೆಲ್ಲಿಕೊಂಡಿದೆ. ಆದರೆ ಗೌತಮ್ ಅದಾನಿಯವರೂ ಬಂದರು, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆಗೆ ವ್ಯಾಪಿಸಿರುವ ಮೂಲಸೌಕರ್ಯಗಳ ಮೇಲೆ ಗಮನ ಹರಿಸಿದ್ದಾರೆ. ಈ ಇಬ್ಬರು ಉದ್ಯಮಿಗಳು ತಮ್ಮದೇ ಆದ ಹಾದಿಯನ್ನು ಹಿಡಿದು ಇದೀಗ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Bidar: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕುಡಿಯೋ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆ !

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಈಗ ಇದು ಕೇವಲ 50 ಕೋಟಿಗಳ ಸಣ್ಣ ಪ್ರಮಾಣದ ಒಪ್ಪಂದವಾಗಿದ್ದರೂ ಮುಂದಿನ ದಿನಗಳಲ್ಲಿ ಈ ಬೃಹತ್ ಉದ್ಯಮಿಗಳು ಪರಸ್ಪರ ಕೈಜೋಡಿಸಿ ತಮ್ಮ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮತ್ತು ಉಳಿದ ಸ್ಪರ್ಧಿಗಳನ್ನು ಹೆಮ್ಮೆಟ್ಟಿಸುವ ನಿಟ್ಟಿನಲ್ಲಿ ಕಾರ್ಯಗತವಾಗಲು ಈ ಒಪ್ಪಂದ ವೇದಿಕೆಯಾಗಲಿದೆ ಎನ್ನಲಾಗಿದೆ.

Leave A Reply

Your email address will not be published.