Bank Holiday in April 2024: ಏಪ್ರಿಲ್‌ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

Bank Holiday in April 2024: ಮಾರ್ಚ್ ತಿಂಗಳು ಮುಗಿಯುವ ಹಂತದಲ್ಲಿದ್ದು ಈಗ ಏಪ್ರಿಲ್ ಆರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ 30 ದಿನಗಳಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ವಿವಿಧ ರಾಜ್ಯಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಏಪ್ರಿಲ್ 2024 ರಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ವಿವಿಧ ರಾಜ್ಯಗಳಲ್ಲಿ ಬೀಳುವ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳಿಗೆ ಅನುಗುಣವಾಗಿ ರಜೆಯ ಪಟ್ಟಿಯನ್ನು ತಯಾರಿಸಲಾಗಿದೆ. ಮುಂದಿನ ತಿಂಗಳು ನೀವು ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಬೇಕಾದರೆ, ಖಂಡಿತವಾಗಿಯೂ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ.

1 ಏಪ್ರಿಲ್ 2024- ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

5 ಏಪ್ರಿಲ್ 2024- ಬಾಬು ಜಗಜೀವನ್ ರಾಮ್ ಜನ್ಮದಿನ ಮತ್ತು ಜುಮಾತ್ ಜುಮಾತುಲ್ ವಿದಾ ಕಾರಣ ತೆಲಂಗಾಣ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

7 ಏಪ್ರಿಲ್ 2024- ಭಾನುವಾರ

9 ಏಪ್ರಿಲ್ 2024- ಗುಡಿ ಪಾಡ್ವಾ/ಯುಗಾದಿ ಹಬ್ಬ/ತೆಲುಗು ಹೊಸ ವರ್ಷ ಮತ್ತು ಮೊದಲ ನವರಾತ್ರಿಯ, ಬೇಲಾಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

10 ಏಪ್ರಿಲ್ 2024- ಈದ್

11 ಏಪ್ರಿಲ್ 2024- ಈದ್ ಕಾರಣ, ಚಂಡೀಗಢ, ಗ್ಯಾಂಗ್‌ಟಾಕ್, ಕೊಚ್ಚಿ ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.

13 ಏಪ್ರಿಲ್ 2024- ಎರಡನೇ ಶನಿವಾರ

14 ಏಪ್ರಿಲ್ 2024- ಭಾನುವಾರ

15 ಏಪ್ರಿಲ್ 2024- ಬೊಹಾಗ್ ಬಿಹು ಮತ್ತು ಹಿಮಾಚಲ ದಿನದ ಕಾರಣ ಗುವಾಹಟಿ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

17 ಏಪ್ರಿಲ್ 2024- ರಾಮ ನವಮಿಯ ಕಾರಣ, ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ, ಕಾನ್ಪುರ್, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

20 ಏಪ್ರಿಲ್ 2024- ಗರಿಯಾ ಪೂಜೆಯ ಕಾರಣ ಅಗರ್ತಲಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

21 ಏಪ್ರಿಲ್ 2024- ಭಾನುವಾರ

27 ಏಪ್ರಿಲ್ 2024- ನಾಲ್ಕನೇ ಶನಿವಾರ

28 ಏಪ್ರಿಲ್ 2024- ಭಾನುವಾರ

Leave A Reply

Your email address will not be published.