Parliment Election : ರಾಜ್ಯದಲ್ಲಿ ಕಾಂಗ್ರೆಸ್’ಗೆ ಎರಡಂಕಿ ಫಲಿತಾಂಶ ಪಕ್ಕಾ?! ಕಾರಣ ಹೀಗಿವೆ

Parliment Election : ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಹಾಗೂ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಕ್ಷಗಳು ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಈ ಬೆನ್ನಲ್ಲೇ ರಾಜ್ಯದಲ್ಲಿ ಎನ್ ಡಿ ಎ ಕೂಟ ಹಾಗೂ ಕಾಂಗ್ರೆಸ್ ಎಷ್ಟು ಸೀಟ್ ಗೆಲಲಬಹುದು ಎಂದು ಲೆಕ್ಕಾಚಾರ ಮಾಡಲಾಗುತ್ತಿದೆ.

ಇದನ್ನೂ ಓದಿ: Man entered the Ladies Hostel: ಹುಡುಗಿ ವೇಷದಲ್ಲಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ವಿದ್ಯಾರ್ಥಿ

ಕಳೆದ ಬಾರಿ ಲೋಕಸಭಾ ಚುನಾವಣೆ(Parliament election) ಗಿಂತ ಈ ಸಲದ ಚುನಾವಣೆ ರಾಜ್ಯದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡಲಿದೆ. ಕೇವಲ ಒಂದು ಸ್ಥಾನದೊಂದಿಗೆ ರಾಜ್ಯದಲ್ಲಿ ಖಾತೆ ಉಳಿಸಿಕೊಂಡಿರುವ ಕಾಂಗ್ರೆಸ್(Congress)ಈ ಸಲ 4-6 ಸೀಟು ಗೆಲ್ಲಲಿದೆ ಎಂದು ಹೇಳಲಾಗಿತ್ತು. ಆದರೀಗ ಅಚ್ಚರಿ ಎಂಬಂತೆ ಕಾಂಗ್ರೆಸ್ ಗೆ ಎರಡಂಕಿಯ ಫಲಿತಾಂಶ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ: Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ ಹೈಕಮಾಂಡ್‌

ಹೌದು, ಸುಮಾರು 20 ವರ್ಷಗಳಿಂದ ಒಂದಂಕಿ ಸೀಟು ಗೆಲ್ಲುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್‌ ಹಣೆಬರಹ ಈ ಬಾರಿಯಾದರೂ ಬದಲಾಗಬಹುದು ಎನ್ನಲಾಗುತ್ತಿದೆ. ಈ ಭಾರಿ ಕಾಂಗ್ರೆಸ್‌ಗೆ ಅದೃಷ್ಟ ಒಳಿಯುವುದು ಗ್ಯಾರೆಂಟಿ ಎನ್ನುತ್ತಿವೆ ರಾಜಕೀಯ ಮೂಲಗಳು. ಹೀಗಾಗಿ ಒಂದಂಕಿ ಎರಡಂಕಿಯಾಗುವುದು ಪಕ್ಕಾ ಆಗಿದೆ.

ಕಾಂಗ್ರೆಸ್ ಎರಡಂಕಿ ಗೆಲ್ಲಲು ಇರುವ ಕಾರಣಗಳು :

• ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದು ಪಕ್ಷದ ನಾಯಕರಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿಸಿದೆ.

• ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದೆ.

• ವಿಪಕ್ಷ ಬಿಜೆಪಿಯಲ್ಲಿನ ಬಂಡಾಯದ ಬಿಸಿ ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆ ಇದೆ.

• ಕಾಂಗ್ರೆಸ್ ಹೇಳಿದಂತೆ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದು ಪಕ್ಷದ ಭರವಸೆಗಳ ವರ್ಚಸ್ಸು ಹೆಚ್ಚಿಸಿಕೊಂಡಿದೆ

• ಕರ್ನಾಟಕ ಕಾಂಗ್ರೆಸ್ ಕೈಗೊಂಡ ಗ್ಯಾರನಟಿ ಜಾರಿ ನಿರ್ಧಾರ ಬೇರೆ ರಾಜ್ಯಗಳಲ್ಲೂ ಭರವಸೆ ಹುಟ್ಟು ಹಾಕಿವೆ.

• ಗ್ಯಾರಂಟಿ ಮೂಲಕ ಮಹಿಳಾ ಮತಗಳು ಸೆಳೆಯುವಲ್ಲಿ ಕಾಂಗ್ರೆಸ್‌ ಸಫಲವಾಗಿದೆ.

• ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಸಮುದಾಯ, ಹಿರಿತನ ವರ್ಚಸ್ಸು ಆಧಾರದ ಜೊತೆಗೆ ಹೆಚ್ಚು ಯುವಕರಿಗೂ ಟಿಕೆಟ್ ನೀಡುವಲ್ಲಿ ಹೆಚ್ಚು ಗಮನ ಹರಿಸಿದೆ. ಜೊತೆಗೆ ಬಂಡಾಯಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದೆ.

• ಕರ್ನಾಟಕಕ್ಕೆ ಹಾಗೂ ದಕ್ಷಿಣ ಭಾರತ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿವೆ ಎಂಬುದನ್ನು ಗಟ್ಟಿಯಾಗಿ ತಿಳಿಸಿದ ಕಾಂಗ್ರೆಸ್‌, ಈ ವಿಚಾರವನ್ನು ಮುನ್ನೆಲೆಗೆ ತಂದು ಜನರಲ್ಲಿ ಇದು ಬೇರೂರುವಂತೆ ಮಾಡಿದೆ.

• ಕಾಂಗ್ರೆಸ್‌ ಬಿಜೆಪಿ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ. ಅನ್ನಭಾಗ್ಯ, ಬರ ಪರಿಹಾರ, ಅನುದಾನ ಹಂಚಿಕೆಯ ಅಂಶಗಳನ್ನು ಕಾಂಗ್ರೆಸ್‌ ಜನರೆದುರು ಪ್ರಸ್ತಾಪಿಸಿದೆ.

• ಹಾಲಿ ಸಂಸದರಿಗೆ ಕೋಕ್ ನೀಡುವ ಮೂಲಕ ವಿಧಾನಸಭೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾಡಿದಂತಹ ಯಡವಟ್ಟನ್ನು ಲೋಕಸಭೆಯಲ್ಲೂ ಮಾಡಿದೆ. ಇದು ಮತ್ತೆ ಬಿಜೆಪಿಗೆ ಮುಳುವಾಗಬಹುದು.

• ಮೂವತಹ ಕ್ಷೇತ್ರದಲ್ಲದವರನ್ನು, ಸ್ಥಳೀಯರಲ್ಲದವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದೆ. ಉದಾಹರಣೆಗೆ ಬೆಳಗಾವಿಗೆ ಜಗದೀಶ್ ಶೆಟ್ಟರ್, ತುಮಕೂರಿಗೆ ಸೋಮಣ್ಣ, ಚಿತ್ರದುರ್ಗಕ್ಕೆ ಕಾರಜೋಳ. ಈಗಾಗಲೇ ಈ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಏರಿದೆ. ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.