Look Sabha Election 2024: ಬಿಜೆಪಿ ಸ್ಟಾರ್ ಪಟ್ಟಿ ಬಿಡುಗಡೆ: ಯಾರಿಗುಂಟು ಸ್ಥಾನ? ಯಾರಿಗಿಲ್ಲ?

Share the Article

Look Sabha Election 2024: ಲೋಕಸಭಾ ಚುನಾವಣಾ ಪ್ರಚಾರಕ್ಕೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪಿಯುಷ್ ಗೋಯಲ್, ನಿತಿನ್ ಗಡ್ಕರಿ ಸೇರಿ ಹಲವು ಪ್ರಮುಖ ನಾಯಕರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Rain: ಇಂದು ಈ ಕಡೆಗಳಲ್ಲಿ ಬೀಳಲಿದೆ ಭರ್ಜರಿ ಮಳೆ

ಮಧ್ಯಪ್ರದೇಶ ಮಾಜಿ ಸಿಎಂ ಉಮಾಭಾರತಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೊಕ್ ನೀಡಲಾಗಿದ್ದು, ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುರೇಶ್ ಪಚೌರಿಗೆ ಸ್ಥಾನ ನೀಡಲಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಿಗೆ ಸೀಮಿತವಾಗಿ ಪ್ರತ್ಯೇಕ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Price Of Cocoa: ಕೊಕ್ಕೊ ಧಾರಣೆಯಲ್ಲಿ ಹೆಚ್ಚಳ; ರೈತರ ಮುಖದಲ್ಲಿ ಸಂತಸ

Leave A Reply

Your email address will not be published.