Home latest Lesbians: 5 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಸುಂದರ ಸಲಿಂಗ ಜೋಡಿ !!

Lesbians: 5 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಸುಂದರ ಸಲಿಂಗ ಜೋಡಿ !!

Lesbians

Hindu neighbor gifts plot of land

Hindu neighbour gifts land to Muslim journalist

Lesbians: ಸಲಿಂಗಿಗಳ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿರುತ್ತದೆ. ಸಲಿಂಗಿ ಮದವೆ ಬಗ್ಗೆಯಂತೂ ಸಾಕಷ್ಟು ಬಾರಿ ಚರ್ಚೆಯಾಗುತ್ತಿರುತ್ತದೆ. ಅಂತೆಯೇ ಇದೀಗ ವಿಶ್ವದ ಅತ್ಯಂತ ಸುಂದರ ಸಲಿಂಗ(Lasbians) ಜೋಡಿ ಕುರಿತ ವಿಚಾರವೊಂದು ಮುನ್ನಲೆಗೆ ಬಂದಿದ್ದು ಈ ಜೋಡಿಗಳ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರೂ ದೂರಾಗಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯಲ್ಲಿ ಎನ್‌ಐಎ ದಾಳಿ

ಹೌದು, ಸುಮಾರು 5 ವರ್ಷಗಳಿಂದ ರಿಲೇಶನ್’ಶಿಪ್ ನಲ್ಲಿದ್ದ ಭಾರತ ಮೂಲದ ಅಂಜಲಿ(Anjali) ಹಾಗೂ ಪಾಕಿಸ್ತಾನ ಮೂಲದ ಸೂಫಿ ಮಲ್ಲಿಕ್(Sufi mallik) ತಮ್ಮ ಸಲಿಂಗ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದಕ್ಕೆ ಮೂಲ ಕಾರಣ ಸೂಫಿ ಬೇರೆಯವರೊಂದಿಗೆ ಸಂಬಂಧ ಹೊಂದಿರುವುದಾಗಿದೆ, ಹೀಗಾಗಿ ನಾವು ಬ್ರೇಕಪ್ ಮಾಡಿಕೊಳ್ಳುತ್ತಿರುವುದಾಗಿ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ: Postal Ballot: ಅಂಚೆ ಮತದಾನ ಎಂದರೇನು, ಯಾರು ಇದನ್ನು ಬಳಸಬಹುದು? ತಿಳಿದುಕೊಳ್ಳಿ

ಅಂದಹಾಗೆ ಇವರಿಬ್ಬರು 2019ರಲ್ಲಿ ತಮ್ಮ ಸಲಿಂಗ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದರು. ನಂತರ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಬಳಿಕ 5 ವರ್ಷ ಪರಸ್ಪರ ರಿಲೇಶನ್ ಶಿಪ್ನಲ್ಲಿ ಇದ್ದರು. ಆದರೀಗ ಮದುವೆಗೆ ಕೆಲವೇ ದಿನಗಳು ಇರುವಾಗ ಇಬ್ಬರೂ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.