Bengaluru: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ :‌ 13 ಸರ್ಕಾರಿ ಅಧಿಕಾರಿಗಳ 60 ಸ್ಥಳಗಳ ಮೇಲೆ ದಾಳಿ

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 13 ಸರ್ಕಾರಿ ಅಧಿಕಾರಿಗಳ 60 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Nepal Mayor Daughter: ಗೋವಾದಲ್ಲಿ ನಾಪತ್ತೆಯಾಗಿದ್ದ ನೇಪಾಳ ಮೇಯರ್ ಪುತ್ರಿ 2 ದಿನಗಳ ಬಳಿಕ ಪತ್ತೆ

ಮೈಸೂರಿನ 12 ಸ್ಥಳಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಬೆಂಗಳೂರು, ಉಡುಪಿ ಮತ್ತು ಕೋಲಾರದಲ್ಲಿ ತಲಾ ಐದು ; ಕಾರವಾರ, ಬೀದರ್, ವಿಜಯಪುರ ಮತ್ತು ಮಂಡ್ಯದಲ್ಲಿ ತಲಾ ನಾಲ್ಕು; ಬೆಳಗಾವಿಯಲ್ಲಿ ಮೂರು ; ಮತ್ತು ಕೊಡಗಿನಲ್ಲಿ ಎರಡು ಕಡೆಗಳಲ್ಲಿ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: Harish Poonja: ಶಿವರಾಜ ತಂಗಡಗಿ ಹೇಳಿಕೆಯಿಂದ ಕಾಂಗ್ರೆಸ್‌ ಚುನಾವಣೆಗೆ ಮುನ್ನವೇ ಸೋಲೊಪ್ಪಿದೆ-ಹರೀಶ್‌ ಪೂಂಜಾ

ಸರ್ಕಾರಿ ಅಧಿಕಾರಿಗಳಾದ ರಂಗನಾಥ್ ಎಸ್ಪಿ, ಮುಖ್ಯ ಇಂಜಿನಿಯರ್, ಬ್ಯಾಟರಾಯನಪುರ ಮತ್ತು ಯಲಹಂಕ ಬಿಬಿಎಂಪಿ, ಬೆಂಗಳೂರು; ರೂಪ, ಉಪ ಆಯುಕ್ತರು, ಅಬಕಾರಿ, ಉಡುಪಿ; ಪ್ರಕಾಶ್, ಕಿರಿಯ ಅಭಿಯಂತರರು, ಕಾರವಾರ; ಫಯಾಜ್ ಅಹಮದ್, ಸಹಾಯಕ ಇಂಜಿನಿಯರ್, ಮೈಸೂರು; ಯತೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ, ಬಿಡದಿ, ರಾಮನಗರ; ಮಹೇಶ ಚಂದ್ರಯ್ಯ ಹಿರೇಮಠ, ವಲಯ ಅರಣ್ಯಾಧಿಕಾರಿ.‌ ಈ ಮೇಲಿನ ಅಧಿಕಾರಿಗಳಿಗೆ ಸಂಬಂಧಿಸಿದ ಜಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಅದೇ ಸಮಯದಲ್ಲಿ ಬೀದರ್‌ನ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಸ್ವಾಮಿ ಅವರ ಆಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಲಾರ ಸಹಾಯಕ ನಿರ್ದೇಶಕ ನಾಗರಾಜಪ್ಪ ಎಚ್‌. ಷಣ್ಮುಖಪ್ಪ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಮಖಂಡಿ, ಬಾಗಲಕೋಟ; ಸದಾಶಿವಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಚಿಕ್ಕಬಳ್ಳಾಪುರ; ಕೃಷ್ಣಗೌಡ, ಎರಡನೇ ವಿಭಾಗದ ಲೆಕ್ಕ ಸಹಾಯಕರು, ಅಗಸನಪುರ ಗ್ರಾ.ಪಂ., ಮಳವಳ್ಳಿ: ಮತ್ತು ಸದಾಶಿವ ಜಯಪ್ಪ, ಪ್ರಭಾರ ಕಾರ್ಯದರ್ಶಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ನಿಡಗುಂದಿ ಗ್ರಾಮ, ಬೆಳಗಾವಿ‌ ಈ ಅಧಿಕಾರಿಗಳಿಗೆ ಸಂಬಂಧಿಸಿದ ಜಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 13 ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ), 13 ಡಿಎಸ್‌ಪಿಗಳು, 25 ಪೊಲೀಸ್ ಇನ್‌ಸ್ಪೆಕ್ಟರ್‌ಗಳು (ಪಿಐ) ಮತ್ತು 80 ಸಿಬ್ಬಂದಿ ಸೇರಿದಂತೆ ಸುಮಾರು 130 ಲೋಕಾಯುಕ್ತ ಅಧಿಕಾರಿಗಳು ಭಾಗಿಯಾಗಿದ್ದಾರೆ.

3 Comments
  1. […] ಇದನ್ನೂ ಓದಿ: Bengaluru: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್… […]

  2. […] ಇದನ್ನೂ ಓದಿ: Bengaluru: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್… […]

Leave A Reply

Your email address will not be published.