Postal Ballot: ಅಂಚೆ ಮತದಾನ ಎಂದರೇನು, ಯಾರು ಇದನ್ನು ಬಳಸಬಹುದು? ತಿಳಿದುಕೊಳ್ಳಿ
Postal Ballot: ಅಂಚೆ ಮತದಾನದ ಪದ್ಧತಿ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವಿವಿಧ ಕಾರಣಗಳಿಂದ ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಲು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ಮತದಾರರು ಈ ವ್ಯವಸ್ಥೆಯನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗವು ಈ ಮತದಾರರಿಗೆ ಅಂಚೆ ಮತದಾನದ ಮೂಲಕ ಮತದಾನ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.
ಇದನ್ನು ಓದಿ: Mallapuram: ಎರಡು ವರ್ಷದ ಬಾಲಕಿ ಮೃತ ಪ್ರಕರಣ; ತಂದೆ ಫೈಝ್ ಬಂಧನ
ಕಾಲಾನಂತರದಲ್ಲಿ ಅದರ ವ್ಯವಸ್ಥೆಗಳನ್ನು ಸಹ ನವೀಕರಿಸಲಾಗಿದೆ. ಈಗ ಇ-ಮೇಲ್ ಮತದಾನ ವ್ಯವಸ್ಥೆಯ ಮೂಲಕವೂ ಅಂಚೆ ಮತದಾನ ಮಾಡಲಾಗುತ್ತಿದೆ. ಇದರೊಂದಿಗೆ ಪ್ರತಿ ಚುನಾವಣೆಯಲ್ಲಿ ಮತಯಂತ್ರಗಳನ್ನು ಎಣಿಕೆ ಮಾಡುವಾಗ ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಚುನಾವಣಾ ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಭಾರತ ಸರ್ಕಾರದ ಸಶಸ್ತ್ರ ಪಡೆಗಳ ನೌಕರರು, ದೇಶದ ಹೊರಗೆ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು, ಸೇನಾ ಕಾಯಿದೆ 1950 ರ ಅಡಿಯಲ್ಲಿ ಎಲ್ಲಾ ಪಡೆಗಳು ಬಳಸುತ್ತಾರೆ. ಮತಗಟ್ಟೆಗೆ ತಲುಪಲು ಸಾಧ್ಯವಾಗದ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಹ ನೋಂದಾಯಿಸಿದ ನಂತರ ಮತ ಚಲಾಯಿಸಬಹುದು. ಅವರು ಈಗಾಗಲೇ ಅಂಚೆ ಕಚೇರಿಗೆ ನೋಂದಾಯಿಸಿಕೊಳ್ಳುವುದು ಅವಶ್ಯಕ.
ಇದನ್ನೂ ಓದಿ: Tiruvananthapuram: ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ
ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಫಾರ್ಮ್ 12D ಅನ್ನು ಡೌನ್‌ಲೋಡ್ ಮಾಡಬೇಕು. ಅಥವಾ ಬೂತ್‌ಮಟ್ಟದ ಅಧಿಕಾರಿಗಳಿಂದ ಪ್ರತಿಯನ್ನು ಪಡೆಯಬೇಕು. ನಂತರ ಭರ್ತಿ ಮಾಡಿ ನಂತರ ಚುನಾವಣೆಯ ಅಧಿಸೂಚನೆಯ ಐದು ದಿನಗಳಲ್ಲಿ ಬೂತ್‌ಮಟ್ಟದ ಅಧಿಕಾರಿಗೆ ಸಲ್ಲಿಸಬೇಕು. ಕೋವಿಡ್ ರೋಗಿಗಳು 12ಡಿ ಫಾರ್ಮ್ ಜೊತೆಗೆ ರೋಗದ ಮಾಹಿತಿಯನ್ನು ಸಾಬೀತುಪಡಿಸುವ ವೈದ್ಯಕೀಯ ವರದಿ ನೀಡಬೇಕು. ಅಂಗವಿಕಲರು ತಮ್ಮ ಅಂಗವೈಕಲ್ಯವನ್ನು ಸಾಬೀತುಪಡಿಸುವ ಸರಕಾರಿ ದಾಖಲೆಯನ್ನು ನೀಡಬೇಕು. ಅಂಚೆ ಮತವನ್ನು ಸಾಮಾನ್ಯವಾಗಿ ಸಹಾಯಕ ಚುನಾವಣಾಧಿಕಾರಿಯ ಮೇಲ್ಚಿಚಾರಣೆಯಲ್ಲಿ ಮತದಾನದ ಹಿಂದಿನ ದಿನದಂದು ಹಾಕಲಾಗುತ್ತದೆ. ಈ ಅಂಚೆ ಮತದಾನದಲ್ಲಿ ರಾಜಕೀಯ ಪಕ್ಷಗಳು ಮತ್ತು ಮೋರ್ಚಾಗಳು ಅಂಚೆ ಮತ ಸಂಗ್ರ ಮಾಡಲು ಅಥವಾ ಭಾಗವಹಿಸಲು ಯಾವುದೇ ಹಕ್ಕು ಇಲ್ಲ.
ಪ್ರತಿ ಕ್ಷೇತ್ರದಲ್ಲಿ ಅಂಚೆ ಮೂಲಕ ಮತದಾನ ಮಾಡುವವರ ಸಂಖ್ಯೆಯನ್ನು ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿದೆ. ಈ ಪ್ರಕ್ರಿಯೆಯಲ್ಲಿ, ಮೊದಲನೆಯದಾಗಿ ಖಾಲಿ ಅಂಚೆ ಮತಪತ್ರವನ್ನು ವಿದ್ಯುನ್ಮಾನವಾಗಿ ಮತದಾರರಿಗೆ ತಲುಪಿಸಲಾಗುತ್ತದೆ. ಮತದಾರರು ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಲಾಗದ ಸ್ಥಳದಲ್ಲಿದ್ದರೆ, ನಂತರ ಮತಪತ್ರವನ್ನು ಅಂಚೆ ಸೇವೆಯ ಮೂಲಕ ಕಳುಹಿಸಲಾಗುತ್ತದೆ. ಕೆಲವು ಕಾರಣಗಳಿಂದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗದಿದ್ದರೆ, ಮತಪತ್ರವನ್ನು ಹಿಂತಿರುಗಿಸಲಾಗುತ್ತದೆ.
ಅಕ್ಟೋಬರ್ 21, 2016 ರಂದು, ಚುನಾವಣಾ ನಿಯಮಗಳು, 1961 ರ ನಿಯಮ 23 ಅನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಮತದಾರರಿಗೆ ಅಧಿಸೂಚನೆಯನ್ನು ನೀಡುವ ಮೂಲಕ ಭಾರತ ಸರ್ಕಾರವು ಈ ಸೇವೆಯನ್ನು ಪ್ರಾರಂಭಿಸಿತು. ಇದಾದ ಬಳಿಕ ಇ-ಮೇಲ್ ಮೂಲಕ ಮತದಾನ ಮಾಡುವ ಸೌಲಭ್ಯ ಆರಂಭವಾಯಿತು.
ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಮೊದಲು ಅಂಚೆ ಮತಗಳ ಎಣಿಕೆ ಪ್ರಾರಂಭವಾಗುತ್ತದೆ. ಇದಾದ ಬಳಿಕ ಇವಿಎಂನಲ್ಲಿ ದಾಖಲಾದ ಮತಗಳನ್ನು ಎಣಿಸಲಾಗುತ್ತದೆ. ಅಂಚೆ ಮತಪತ್ರಗಳ ಸಂಖ್ಯೆ ಕಡಿಮೆ ಮತ್ತು ಅವು ಕಾಗದದ ಮತಪತ್ರಗಳಾಗಿವೆ, ಆದ್ದರಿಂದ ಅವುಗಳನ್ನು ಸುಲಭವಾಗಿ ಎಣಿಸಲಾಗುತ್ತದೆ.
ಯಾರಿಗೆ ಮತ್ತು ಎಷ್ಟು ಜನರಿಗೆ ಅಂಚೆ ಮತಪತ್ರಗಳನ್ನು ನೀಡಬೇಕು ಎಂಬುದನ್ನು ಚುನಾವಣಾ ಆಯೋಗವು ಮುಂಚಿತವಾಗಿ ನಿರ್ಧರಿಸುತ್ತದೆ. ಇದಾದ ನಂತರ, ಕಾಗದದ ಮೇಲೆ ಮುದ್ರಿಸಲಾದ ವಿಶೇಷ ಮತಪತ್ರವನ್ನು ಈ ಜನರಿಗೆ ಕಳುಹಿಸಲಾಗುತ್ತದೆ, ಅದು ಅಂಚೆ ಮತಪತ್ರವಾಗಿದೆ. ಈ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ಇಟಿಪಿಬಿಎಸ್). ಈ ಮತಪತ್ರವನ್ನು ಸ್ವೀಕರಿಸುವ ನಾಗರಿಕನು ತನ್ನ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾನೆ ಮತ್ತು ಅದನ್ನು ವಿದ್ಯುನ್ಮಾನ ಅಥವಾ ಅಂಚೆ ಮೂಲಕ ಚುನಾವಣಾ ಆಯೋಗಕ್ಕೆ ಹಿಂದಿರುಗಿಸುತ್ತಾನೆ.