Chikkaballapura: ‘ಓ ನಲ್ಲಾ, ನೀ ನಲ್ಲಾ ಚಿಕ್ಕಬಳ್ಳಾಪುರಕ್ಕೆ ನೀ ಲಾಯಕ್ಕಲ್ಲ’ – ಅಭ್ಯರ್ಥಿ ಡಾ. ಸುಧಾಕರ್ ವಿರುದ್ದ ತಿರುಗಿಬಿದ್ದ ಬಿಜೆಪಿ ಕಾರ್ಯಕರ್ತರು !!

Chikkaballapura: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಹೀನಾಯವಾಗಿ ಸೋತ ಡಾ. ಕೆ ಸುಧಾಕರ್ ಅವರಿಗೆ ಇದೀಗ ಅದೇ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುತ್ತಿದೆ. ಆದರೀಗ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರದ(Chikkaballapura) ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸುಧಾಕರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ: K S Eshwarappa: ಮತ್ತೊಂದು ಹೊಸ ಘೋಘಣೆ ಹೊರಡಿಸಿದ ಈಶ್ವರಪ್ಪ !!

ಹೌದು, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್(Dr K Shudhakar) ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಆದರೆ ಈ ಬೆನ್ನಲ್ಲೇ ಬೀದಿಗಿಳಿದ ಬಿಜೆಪಿ(BJP) ಕಾರ್ಯಕರ್ತರು ಸುಧಾಕರ್ ವಿರುದ್ಧ ರೊಚ್ಚಿಗೆದ್ದು, ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವೈರಲ್ ಆಗಿರುವ ಕರಿಮಣಿ ಮಾಲಿಕ ಹಾಡನ್ನು ತಿರುಚಿ ‘ಓ ನಲ್ಲಾ ನೀ ನಲ್ಲಾ, ಚಿಕ್ಕಬಳ್ಳಾಪುರಕ್ಕೆ ನೀ ಲಾಯಕ್ಕಲಾ’ ಎಂದು ಘೋಷಣೆ ಕೂಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಇದನ್ನೂ ಓದಿ: Veena Kashappanavar: ಕಾಂಗ್ರೆಸ್’ಗೆ ಮುಳುವಾದ ಕಾಂಗ್ರೆಸ್ ಶಾಸಕನ ಪತ್ನಿ !!

ಇನ್ನು ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar), ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾವುದೇ ಕಾರಣಕ್ಕೂ ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ, ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಸರಿ ನಾವು ಬಿಡುವುದಿಲ್ಲ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

Leave A Reply

Your email address will not be published.