DL, RC ಕುರಿತು ಹೊಸ ರೂಲ್ಸ್ ತಂದ RTO – ಸದ್ಯದಲ್ಲೇ ಕರ್ನಾಟದಲ್ಲೂ ಜಾರಿ !!

DL-RC : ವಾಹನ ಚಲಾವಣೆ, ರಸ್ತೆ ನಿಯಮಗಳ ಕುರಿತು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುವ ಸಾರಿಗೆ ಇಲಾಖೆಯು ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ RC ಬಗ್ಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ಇದನ್ನೂ ಓದಿ: Hook Design in Bag: ಬ್ಯಾಗ್‌ನ ಮೇಲ್ಭಾಗದಲ್ಲಿ ಕೊಕ್ಕೆ ವಿನ್ಯಾಸ ಏಕೆ ನೀಡಲಾಗಿದೆ? ಕಾರಣ ತಿಳಿದರೆ ಖಂಡಿತ ಶಾಕ್‌ ಆಗುತ್ತೀರಿ

ಹೌದು, ಏಪ್ರಿಲ್ 1 ರಿಂದ ಹಲವು ಕೇಂದ್ರ ಸರ್ಕಾರವು ಹಲವು ನಿಯಮಗಳನ್ನು ಬದಲಾವಣೆ ಮಾಡಲಿದೆ. ಇದರೊಂದಿಗೆ ಕೆಲವು ರಾಜ್ಯ ಸರ್ಕಾರಗಳು ಸಾಕಷ್ಟು ರೂಲ್ಸ್ ಗಳನ್ನು ಬದಲಾಯಿಸಲು ಮುಂದಾಗಿದ್ದು ಏಪ್ರಿಲ್ 1 2024 ರಿಂದ ರಾಜಸ್ಥಾನ(Rajasthan) ಸರ್ಕಾರ RC ಹಾಗೂ DL ಕುರಿತು ಹೊಸ ನಿಯಮ ಜಾರಿಗೆ ಮುಂದಾಗಿದೆ. ಅದೇನೆಂದರೆ ಈ ಭಾಗದಲ್ಲಿ ವಾಹನ ಚಲಾಯಿಸುವವರು ತಮ್ಮ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಅಥವಾ ಆರ್ ಸಿ (DL and RC) ಇಟ್ಟುಕೊಳ್ಳಲೇಬೇಕು ಎನ್ನುವ ಕಡ್ಡಾಯ ನಿಯಮ ಇಲ್ಲ. ಅದರ ಬದಲು ಮೊಬೈಲ್ ನಲ್ಲಿ ತಮ್ಮ ಕಾರ್ಡ್ ತೋರಿಸಬಹುದು.

ಇದನ್ನೂ ಓದಿ: Belthangady: ಬೈಕ್‌-ಪಿಕಪ್‌ ಡಿಕ್ಕಿ; ಸಹಸವಾರ ಸಾವು

ಅಷ್ಟೇ ಅಲ್ಲದೆ ಇದೇ ಬರುವ ಏಪ್ರಿಲ್ ಒಂದನೇ ತಾರೀಖಿನಿಂದ ಡಿಎಲ್ ಮತ್ತು ಆರ್ ಸಿ (DL and RC) ಗಳನ್ನು ಆನ್ಲೈನ್ನಲ್ಲಿಯೇ ಪಡೆದುಕೊಳ್ಳಬಹುದು. ಹಾಗೂ ಇ ಪ್ರಮಾಣ ಪತ್ರ ನೀಡಲಾಗುತ್ತದೆ. ಆದ್ದರಿಂದ ತಮ್ಮ ಮೊಬೈಲ್ ನಲ್ಲಿ ಇ- ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಟ್ಟುಕೊಂಡು ವಾಹನ ಚಾಲಕರು ಅಧಿಕಾರಿಗಳು ಕೇಳಿದಾಗ ಇದನ್ನ ತೋರಿಸಿದರೆ ಸಾಕು ಎನ್ನಲಾಗಿದೆ.

ಇನ್ನು ಈ ಹೊಸ ನಿಯಮವು ಸದ್ಯದಲ್ಲೇ ಕರ್ನಾಟಕದಲ್ಲೂ ಜಾರಿಗೆ ಬರಲಿದೆ ಎನ್ನಲಾಗಿದೆ. ಈ ಹೊಸ ನಿಯಮದ ಬಗ್ಗೆ ಕೇಳಿ ತಿಳಿದ ರಾಜ್ಯದ ಜನರು ನಮ್ಮ ರಾಜ್ಯದಲ್ಲೂ ಈ ರೂಲ್ಸ್ ಆದಷ್ಟು ಬೇಗ ಬರಲಿ, ನಮ್ಮ ಸಮಯ ಕೂಡ ಉಳಿತಾಯ ಆಗಲಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ : ಐವರು ಚೀನಾ ಪ್ರಜೆಗಳು ಸೇರಿ ಓರ್ವ ಪಾಕಿಸ್ತಾನಿ ಸೈನಿಕ ಸಾವು

Leave A Reply

Your email address will not be published.