Puttur: ಕಬಕದಲ್ಲಿ ನಾಲ್ಕು ಗೋವುಗಳ ಸಾಗಾಣೆ; ಬಜರಂಗದಳ ಕಾರ್ಯಕರ್ತರಿಂದ ತಡೆ

Puttur: ಕಬಕ ಅಡ್ಯಲಾಯ ದೈವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಸ್ವಿಫ್ಟ್‌ ಕಾರಿನಲ್ಲಿ ದನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರು ತಡೆದ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Ananth Kumar Hegde: ಟಿಕೆಟ್‌ ಮಿಸ್‌!!! ಅನಂತ್‌ ಕುಮಾರ್‌ ಹೆಗ್ಡೆ ಬರೆದ ಪತ್ರ ಸಖತ್‌ ವೈರಲ್

Puttur

ನಾಲ್ಕು ಗೋವುಗಳು ಕಾರಿನಲ್ಲಿ ಪತ್ತೆಯಾಗಿತ್ತು. ಗೋವುಗಳನ್ನು ಬಿಟ್ಟು ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಬಜರಂಗದಳ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನ ಮಾಡಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದು ಜಖಂ ಗೊಂಡಿದೆ.

ಇದನ್ನೂ ಓದಿ: Ayodhya: ಬಾಲಕ ರಾಮನಿಗೆ ಮೊದಲ ಹೋಳಿಯ ಸಂಭ್ರಮ

ಎರಡು ದಿನ, ಎರಡು ಕರು ಪತ್ತೆಯಾಗಿದ್ದು, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಕೊಂಡೊಯ್ಯಲಾಗುತ್ತಿತ್ತು. ಕಾರು ಚಾಲಕ ಪರಾರಿಯಾಗಲು ಪ್ರಯತ್ನ ಪಟ್ಟ ಕಾರಣ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದಿದೆ. ಪುತ್ತೂರು ನಗರ ಠಾಣಾ ಪೊಲೀಸ್‌ ಅಧಿಕಾರಿಗಳು ನಾಲ್ಕು ಗೋವುಗಳನ್ನು ಹಾಗೂ ವಾಹನವನ್ನು ಪುತ್ತೂರು ನಗರ ಠಾಣೆಗೆ ಸಾಗಿಸಿದ್ದು, ಗೋವುಗಳಿಗೆ ನೀರು, ಮತ್ತು ಮೇವಿನ ವ್ಯವಸ್ಥೆಯನ್ನು ಬಜರಂಗದಳ ಕಾರ್ಯಕರ್ತರು ಮಾಡಿದ್ದಾರೆ.

Leave A Reply

Your email address will not be published.