Holi colour to Muslim lady: ಮುಸ್ಲಿಂ ಮಹಿಳೆಗೆ ಹೋಳಿ ಬಣ್ಣ ಬಳಿದ ಹುಡುಗರು- ಮೈನರ್ ಹುಡುಗರ ಸಹಿತ ನಾಲ್ವರ ಬಂಧನ !

Share the Article

ಲಕ್ನೋದಲ್ಲಿ ಹೋಳಿ ಸಂಭ್ರಮಾಚರಣೆ (Holi Festival) ವೇಳೆ ಮುಸ್ಲಿಂ ಮಹಿಳೆಗೆ (Muslim Women) ಕಿರುಕುಳ ನೀಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ (Uttar Pradesh) ಬಿಜ್ನೋರ್‌ನ ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆಗೆ ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.


ಅಲ್ಲಿ ಮುಸ್ಲಿಂ ದಂಪತಿ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದ ಗುಂಪೊಂದು ದಂಪತಿಯನ್ನು ತಡೆದಿದ್ದಾರೆ. ಜತೆಗೆ ಹೋಳಿ ಗನ್ ಪೈಪ್‌ ಮೂಲಕ ಮಹಿಳೆ ಮೇಲೆ ನೀರು ಹರಿಸಿದ್ದಾರೆ. ಇದಕ್ಕೆ ಆ ಮಹಿಳೆ ವಿರೋಧಿಸಿದರೂ ಗುಂಪು ಕಿರುಕುಳ ಮುಂದುವರಿಸಿದೆ. ನಂತರ ಮುಸ್ಲಿಂ ಮಹಿಳೆಯ ಮುಖಕ್ಕೆ ಬಲವಂತವಾಗಿ ಬಣ್ಣ ಎಳೆದಿದ್ದಾರೆ. ಗುಂಪಿನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ವ್ಯಕ್ತಿ ವೇಗವಾಗಿ ಬೈಕ್‌ ಚಲಾಯಿಸಿದಾಗ ಹುಡುಗರ ಗುಂಪು ಧಾರ್ಮಿಕ ಘೋಷಣೆ ಕೂಗಿರುವ ದೃಶ್ಯ ಇದೀಗ ವೈರಲ್ ಆಗಿದೆ.

ಈ ಕಿರುಕುಳದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಧಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ವೈರಲ್ ವಿಡಿಯೋ ನೋಡಿ ಅದರಲ್ಲಿ ಭಾಗಿಯಾದವರನ್ನು ಗುರುತಿಸಿದ್ದಾರೆ. ಈ ಸಂಬಂಧ ಪೊಲೀಸರು ಅನಿರುದ್ಧ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳೆಯೊಬ್ಬರಿಗೆ ನೋವುಂಟು ಮಾಡುವುದು ಮತ್ತು ಹಲ್ಲೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಮೂವರು ಮೈನರ್ ಹುಡುಗರುಗಳನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.