Flying Taxi: ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ದುಬೈನಲ್ಲಿ ಶೀಘ್ರ ಪ್ರಾರಂಭ – ಜಾಬಿ ಏವಿಯೇಷನ್ ಸಂಸ್ಥೆಯಿಂದ ಮಾಹಿತಿ !
Flying Taxi: ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ (Flying Taxi) ಸೇವೆಯನ್ನು ಆರಂಭಿಸಲು ಕಾಲ ಸನ್ನಿಹಿತವಾಗಿದೆ. ಜಟಕಾ ಗಾಡಿ ಆಯ್ತು, ತದನಂತರ ಆಟೋರಿಕ್ಷಾ ಬಂತು. ಮುಂದೆ ಓಲಾ ಉಬರ್ ಕಾರುಗಳ ಅಬ್ಬರ. ಈಗ ಅದೂ ಹಳೆಯದಾಗಿದೆ. ಇನ್ಮುಂದೆ ಏರ್ ಟ್ಯಾಕ್ಸಿ ಬರಲಿದೆ. ಯಾವುದೇ ಸ್ಟಾಪ್ ಇಲ್ಲ, ಸಿಗ್ನಲ್ ಟ್ರಾಫಿಕ್ ಸಮಸ್ಯೆ ಇರಲ್ಲ. ಕೆಲವೇ ನಿಮಿಷಗಳ ಪ್ರಯಾಣದಲ್ಲಿ ಗಮ್ಯವನ್ನು ಸುರಕ್ಷಿತವಾಗಿ ಸೇರಿಕೊಳ್ಳಬಹುದು. ಎಲ್ಲ ಅಂದುಕೊಂಡಂತೆ 2025ರ ವೇಳೆ ಏರ್ ಟ್ಯಾಕ್ಸಿ ಸೇವೆ ಆರಂಭವಾಗುತ್ತದೆ. ಆದರೆ ಇದು ಶುರುವಾಗುತ್ತಿರುವುದು ಭಾರತದಲ್ಲಿ ಅಲ್ಲ , ಬದಲಿಗೆ ತೈಲ ಸಂಪತ್ ಭರಿತ ರಾಷ್ಟ್ರ ದುಬೈನಲ್ಲಿ.
ಇದನ್ನೂ ಓದಿ: Cameron Diaz: ಖ್ಯಾತ ಹಾಲಿವುಡ್ ನಟಿ ಕ್ಯಾಮೆರಾನ್ ಡಿಯಾಜ್’ಗೆ 51 ರ ವಯಸ್ಸಿನಲ್ಲಿ ಗಂಡು ಮಗು !
ದುಬೈನಲ್ಲಿ, ಅಮೆರಿಕಾ ಮೂಲದ ಜಾಬಿ ಏವಿಷೇಯನ್ (Joby Aviation) ತನ್ನ ಸ್ವದೇಶಕ್ಕಿಂತ ಮೊದಲು ಅರಬ್ ರಾಷ್ಟ್ರದಲ್ಲಿ ಫ್ಲೈಯಿಂಗ್ ಟ್ಯಾಕ್ಸಿಯನ್ನು ಹಾರಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಗಲ್ಫ್ ಎಮಿರೇಟ್‌ನೊಂದಿಗೆ ಈ ವರ್ಷದ ಆರಂಭದಲ್ಲಿ ಶುರುವಾದ ಏರ್ ಟ್ಯಾಕ್ಸಿಯ ಕೆಲಸವು ವೇಗವಾಗಿ ಮುಂದುವರಿದಿದೆ ಎಂದು ಜಾಬಿ ಏವಿಯೇಷನ್ ಕಾರ್ಯಾಚರಣೆಗಳ ಅಧ್ಯಕ್ಷ ಬೊನ್ನಿ ಸಿಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೊದಲು ನಾವು ದುಬೈನಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
Interesting Fact: ಭಾರತದಲ್ಲಿ ಕಾರಿನ ಸ್ಟೇರಿಂಗ್ ಬಲ ಭಾಗದಲ್ಲಿರುತ್ತದೆ ಆದರೆ, ವಿದೇಶದಲ್ಲಿ ಎಡಭಾಗದಲ್ಲಿರುತ್ತದೆ ;…
ದುಬೈನಲ್ಲಿ 2025 ರ ವೇಳೆಗೆ ಆರಂಭಿಕ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. 2026 ರ ಆರಂಭದಲ್ಲಿ ಎಲೆಕ್ಟ್ರಿಕ್ ಏರ್-ಟ್ಯಾಕ್ಸಿ ಸೇವೆಗಳು ಮತ್ತು ವಾಣಿಜ್ಯ ಸೇವೆಗಳನ್ನು ನಿರ್ವಹಿಸಲು ‘ಆರು ವರ್ಷಗಳ ವಿಶೇಷ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಈ ಮೈಲಿಗಲ್ಲನ್ನು ಈಗ 2025 ರ ಅಂತ್ಯದ ವೇಳೆಗೆ ತಲುಪಬಹುದು ಎಂದು ಬೊನ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುಬೈ ಸರ್ಕಾರವು ಬೇಕಾದ ಎಲ್ಲಾ ಆರ್ಥಿಕ ಸಂಪನ್ಮೂಲವನ್ನು ಒದಗಿಸಿದೆ.
ಫ್ಲೈಯಿಂಗ್ ಟ್ಯಾಕ್ಸಿ ಹಾರಾಟಕ್ಕೆ ಸಿದ್ಧತೆಗಳು ಏನೇನು ಬೇಕು?
ಆರಂಭದಲ್ಲಿ ತನ್ನ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗಾಗಿ ದುಬೈನಾದ್ಯಂತ ಸ್ಥಾಪಿಸಲು ನಾಲ್ಕು ವರ್ಟಿಪೋರ್ಟ್‌ಗಳನ್ನು ಸ್ಥಾಪಿಸಲು ಜಾಬಿ ಏವಿಯೇಷನ್ ಸಂಸ್ಥೆ ಯೋಜಿಸಿದೆ. ಉಡಾವಣಾ ತಾಣಗಳಲ್ಲಿ ವಿಮಾನ ಪ್ರಯಾಣದ ಜಾಗತಿಕ ಕೇಂದ್ರವಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದ್ದು, ಜತೆಗೆ ಮಾನವ ನಿರ್ಮಿತ ದ್ವೀಪಗಳಾದ ಪಾಮ್ ಜುಮೇರಾ ಮತ್ತು ಬುರ್ಜ್ ಖಲೀಫಾ ಗೋಪುರದ ಬಳಿಯ ದುಬೈ ಡೌನ್ಟೌನ್ ಹಾಗೂ ದುಬೈನ ಮರೀನಾದಲ್ಲಿ ಉಡಾವಣಾ ತಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಗಾಲಿ ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್
ಜಾಬಿ ಎವಿಯೇಷನ್ ಸಂಸ್ಥೆ ಮಾತ್ರವಲ್ಲ ಇಂತಹ ಏರ್ ಟ್ಯಾಕ್ಸಿ ಯನ್ನು ದುಬೈನಲ್ಲಿ ಪ್ರಾರಂಭಿಸುತ್ತಿರುವುದು. ಅದರ ಪ್ರತಿಸ್ಪರ್ಧಿ ಆರ್ಚರ್ ಏವಿಯೇಷನ್ ಇಂಕ್ ಕಳೆದ ವರ್ಷ ಅಬುಧಾಬಿ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, 2026ರ ವೇಳೆಗೆ ಏರ್ ಟ್ಯಾಕ್ಸಿಗಳನ್ನು ಉತ್ಪಾದನೆ ಮತ್ತು ಉಡಾವಣಾ ಗುರಿ ಇಟ್ಟುಕೊಂಡಿದೆ.
ಈಗ eVTOL ಮಾರುಕಟ್ಟೆ ಆಕಾಂಕ್ಷಿಗಳು ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಗಳತ್ತ ಧಾವಿಸುತ್ತಿದ್ದಾರೆ. ಲಿಲಿಯಂ ಎನ್ವಿ, ಎಂಬ್ರೇರ್ ಎಸ್ಎಯ ಈವ್ ಏರ್ ಮೊಬಿಲಿಟಿ ಮತ್ತು ವೊಲೊಕಾಪ್ಟರ್ ಜಿಎಂಬಿಎಚ್ ಎಲ್ಲವೂ ಸೌದಿ ಅರೇಬಿಯಾ, ಯುಎಇ ಸರ್ಕಾರಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿವೆ. ಇನ್ನೊಂದೇ ವರ್ಷದಲ್ಲಿ ಸಿಟಿ ಟ್ಯಾಕ್ಸಿಗಳ ಹಾಗೆ ಏರ್ ಟ್ಯಾಕ್ಸಿ ದುಬೈ ನಗರದಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಿಸಲಿದ್ದು ಅದು ಮುಂದುವರಿದ ಮತ್ತು ಮುಂದುವರಿಯುತ್ತಿರುವ ಭಾರತದಂತಹ ರಾಷ್ಟ್ರಗಳಿಗೂ ಬಹುಬೇಗನೆ ವ್ಯಾಪಿಸಲಿದೆ ಎನ್ನಲಾಗಿದೆ.
brqglz