Karnataka Politics: 40 ಶಾಸಕರ ಜೊತೆಗೆ ಡಿ ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆಗೆ ರೆಡಿ – ಶಾಸಕ ಮುನಿರತ್ನ ಸ್ಪೋಟಕ ಹೇಳಿಕೆ
Karnataka Politics: ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ(BJP)ಯ ಕೆಲ ನಾಯಕರನ್ನು ಶಾಸಕ ಮುನಿರತ್ನ(MLA Muniratna) ಅವರು ಕಳುಹಿಸಿ ಕೊಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಮುನಿರತ್ನ ಅವರು ಡಿ ಕೆ ಶಿವಕುಮಾರ್(DK Shivkumar) ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಕೆಲ ನಾಯಕರನ್ನು ನಾನೇ ಕಾಂಗ್ರೆಸ್ ಗೆ ಕಳುಹಿಸಿ ಕೊಡುತ್ತಿದ್ದೇನೆ ಎಂಬ ಗಂಭೀರ ಆರೋಪವಿದೆ. ಆದರೆ ರಾಜ್ಯದ ಉಪಮುಖ್ಯಮಂತ್ರಿ(DCM) ಹಾಗೂ ಕಾಂಗ್ರೆಸ್(Congress)ಪ್ರಬಲ ನಾಯಕ ಡಿ ಕೆ ಶಿವಕುಮಾರ್ ಅವರು 40 ಶಾಸಕರೊಂದಿಗೆ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಡಿಕೆಶಿ ಅವರು 40 ಸಂಸದರನ್ನು ಇಟ್ಟುಕೊಂಡು ನಮ್ಮೊಂದಿಗೆ ಬರಲು ಕಾಯುತ್ತಿದ್ದಾರೆ. ನಾವು ಬಾಗಿಲು ತೆರೆದರೆ 40 ಜನರೊಂದಿಗೆ ಈಗಲೇ ಬಂದು ಬಿಡುತ್ತಾರೆ. ಆದರೆ ನಾವು ಬಾಗಿಲು ತೆಗೆಯೋದಿಲ್ಲ. ನಮ್ಮ ಪಕ್ಷದಿಂದ ಯಾರನ್ನೂ ಕಳಿಸುವುದೂ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಯಾಕೆ ಡಿಕೆಶಿ ಅವರು ಹೀಗೆ ಮಾಡುತ್ತಾರೆ, ಬಲವಾದ ಕಾರಣ ಏನು ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಅಲ್ಲಿ (ಕಾಂಗ್ರೆಸ್ ನಲ್ಲಿ) 4 ಉಪ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಹೀಗಾಗಿ ಅವರ ಮಧ್ಯೆ ಇರುವುದು ಬಿಟ್ಟು ನಮ್ಮೊಂದಿಗೆ ಇರೋದೇ ಬೆಸ್ಟ್ ಎಂದು ಬಿಜೆಪಿ ಸೇರಲು ತುದಿಗಾಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
Nimma over buildup nindale …niu makade malagiddu…nimma hanebarakke.