Latest News: 35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ಭಾರತೀಯ ನೌಕಾಪಡೆ
ಇತ್ತೀಚೆಗೆ 35 ಸೊಮಾಲಿಯನ್ ಕಡಲ್ಗಳ್ಳರನ್ನು ಬಂಧಿಸಿದ್ದ ಭಾರತೀಯ ನೌಕಾಪಡೆಯು ಕಸ್ಟಮ್ಸ್ ಮತ್ತು ವಲಸೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಶನಿವಾರ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದೆ.
ಇದನ್ನೂ ಓದಿ: Uttara Pradesh: ತಂದೆಯ ತಂಗಿಯೊಂದಿಗೆ ಎಸ್ಕೇಪ್ ಆದ ಮಗ
ಇತ್ತೀಚೆಗೆ , ಭಾರತೀಯ ನೌಕಾಪಡೆಯು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಎಂ . ವಿ . ರುಯೆನ್ ಹಡಗಿನ 17 ಸಿಬ್ಬಂದಿಯನ್ನು ರಕ್ಷಿಸಿ, 35 ಸೊಮಾಲಿಯನ್ ಕಡಲ್ಗಳ್ಳರನ್ನು ಬಂಧಿಸಿತ್ತು. ಎರಡು ದಿನಗಳ ಕಾರ್ಯಾಚರಣೆಯಲ್ಲಿ ನೌಕಾಪಡೆಯ ವಿಧ್ವಂಸಕ ಹಡಗು , ಗಸ್ತು ನೌಕೆ , ಭಾರತೀಯ ವಾಯುಪಡೆಯ ಸಿ – 17 ಸಾಗಣೆದಾರ 1,500 ಮೈಲಿಗಳಿಗಿಂತ ಹೆಚ್ಚು ದೂರ ಸಾಗಿ, ಮರಿನ್ ಕಮಾಂಡಗಳು ಹಾಗೂ ವಿಮಾನಗಳನ್ನು ಬಳಸಲಾಗಿತ್ತು.
ಇದನ್ನೂ ಓದಿ: Dakshina Kananda (Mangaluru): ನಂತೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಸಂಪೂರ್ಣ ನಜ್ಜುಗುಜ್ಜು, ವ್ಯಕ್ತಿ ಸಾವು
ಕಳೆದ ವರ್ಷ ಡಿಸೆಂಬರ್ನಲ್ಲಿ ಸೋಮಾಲಿ ಕಡಲ್ಗಳ್ಳರು ಬಲ್ಗೇರಿಯನ್ ಹಡಗು ಎಂವಿ ರುಯೆನ್ ಅನ್ನು ವಶಪಡಿಸಿಕೊಂಡಿದ್ದರು. ಆದಾಗ್ಯೂ , ಕಳೆದ ವಾರ ಆಳವಾದ ಸಮುದ್ರಗಳಲ್ಲಿ ಕಡಲ್ಗಳ್ಳತನದ ಕೃತ್ಯಗಳನ್ನು ಮಾಡುವ ಉದ್ದೇಶದಿಂದ ರುಯೆನ್ ಸೊಮಾಲಿ ಜಲಪ್ರದೇಶದಿಂದ ಹೊರಬಂದಾಗ, ಭಾರತೀಯ ನೌಕಾಪಡೆಯು ಅದನ್ನು ಪಶಪಡಿಸಿಕೊಳ್ಳಲು ಮುಂದಾಯಿತು.
ಈ ವೇಳೆ ಭಾರತೀಯ ನೌಕಾಪಡೆಯು ಐ . ಎನ್ . ಎಸ್ . ಕೋಲ್ಕತ್ತಾಗೆ ಕಡಲುಗಳ್ಳರ ಹಡಗು ರುಯೆನ್ ಅನ್ನು ತಡೆಯಲು ನಿರ್ದೇಶಿಸಿತು. ನಂತರ ಮಾರ್ಚ್ 15ರಂದು , ಐ . ಎನ್ . ಎಸ್ ಕೋಲ್ಕತ್ತಾ ರುಯೆನ್ಅನ್ನು ತಡೆದು ಹಡಗಿನ ಸ್ಟೀರಿಂಗ್ ವ್ಯವಸ್ಥೆ ಮತ್ತು ನ್ಯಾವಿಗೇಷನಲ್ ಸಾಧನಗಳನ್ನು ನಿಷ್ಕ್ರಿಯಗೊಳಿಸಿತ್ತು. ಇದರಿಂದಾಗಿ ಪೈರೇಟ್ ಹಡಗನ್ನು ತಡೆ ಹಿಡಿದು ತದನಂತರ ಕಡಲಗಳ್ಳರನ್ನು ಬಂಧಿಸಲಾಯಿತು.