Rayachuru: ಲೇಡೀಸ್ ಹಾಸ್ಟೆಲ್ ನಲ್ಲಿ ಸೀನಿಯರ್ಸ್ ನಿಂದ ಜೂನಿಯರ್’ಗೆ ರ‍್ಯಾಗಿಂಗ್ – ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು !!
Rayachuru: ಲೇಡಿಸ್ ಹಾಸ್ಟೆಲ್ ನಲ್ಲಿ ಕುಡಿಯುವ ನೀರಿನ ವಿಚಾರಕ್ಕಾಗಿ ಸೀನಿಯರ್ಸ್ ಗ್ಯಾಂಗ್ ನಿಂದ ಜೂನಿಯರ್ ಹುಡುಗಿ ಮೇಲೆ ರ‍್ಯಾಗಿಂಗ್ ನಡೆದಿದ್ದು, ವಿದ್ಯಾರ್ಥಿನಿ ಒಬ್ಬಳನ್ನು ಆಸ್ಪತ್ರೆಗೆ ದಾಖಲಾಗಿದೆ.
ಹೌದು, ರಾಯಚೂರು(Rayachuru) ಜಿಲ್ಲೆ ಮಾನ್ವಿ ಸರಕಾರಿ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಸೀನಿಯರ್ಸ್ ಹುಡುಗಿಯರು ಪಿಯುಸಿ ಮಂಜುಳಾ ಎಂಬ ಹುಡುಗಿಯನ್ನು ರೂಮಿಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: 56 ವರ್ಷ ಹೊಟ್ಟೆಯಲ್ಲಿ ಕಲ್ಲಿನ ಮಗು ಹೊತ್ತಿದ್ದ ಮಹಿಳೆ ಶಸ್ತ್ರಚಿಕಿತ್ಸೆ ನಂತರ ಸಾವು
ಅಂದಹಾಗೆ ಪಿಯುಸಿ ವಿದ್ಯಾರ್ಥಿನಿ ಮಂಜುಳಾ(Mnajula) ಕುಡಿಯುವ ನೀರು ತುಂಬಿದ್ದ ಬಕೆಟ್ ನಲ್ಲಿ ಸೀನಿಯರರ್ಸ್ ಜಗ್ ಹಾಕಿದ್ದರು. ಜಗ್ ಹಾಕಬೇಡಿ ಎಂದು ಸೀನಿಯರರ್ಸ್ ಬಳಿ ಹೇಳಿದ್ದ ಮಂಜುಳಾ. ಇದರಿಂದ ಸೀನಿಯರ್‌ನನ್ನೇ ಪ್ರಶ್ನೆ ಮಾಡುತ್ತಿದ್ದೀಯಾ ಎಂದು ಮಂಜುಳಾ ವಿರುದ್ಧ ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ತಂಡದಿಂದ ವಿದ್ಯಾರ್ಥಿನಿ ಮಂಜುಳಾ ಮೇಲೆ ಹಲ್ಲೆ ನಡೆದಿದ್ದಾರೆ.
ಸದ್ಯ ಗಾಯಾಳು ವಿದ್ಯಾರ್ಥಿನಿಯನ್ನು ಮಾನ್ವಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಆರ್ಟಿಕಲ್ ನಲ್ಲಿ ತಪ್ಪುಗಳಿವೆ. ವ್ಯಾಕರಣ ಬಳಸಿಲ್ಲ. ಕೆಲವೊಂದು ವಾಕ್ಯ ಕೊನೆ ಗೊಳ್ಳುವಲ್ಲಿ ನಪುಂಸಕತ್ವ ಬಳಸಲಾಗಿದೆ.