Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಾವು; ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ದುಷ್ಕರ್ಮಿಗಳು

Share the Article

Belthangady: ಮೂರು ಮಂದಿ ಬೆಳ್ತಂಗಡಿಯಿಂದ ಬಾಡಿಗೆ ಮಾಡಿಕೊಂಡು ಹೋಗಿದ್ದು, ಇವರಿದ್ದ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ರಫೀಕ್‌ ಎಂಬುವವರಿಗೆ ಸೇರಿದ ಕೆಎ43 ರಿಜಿಸ್ಟ್ರೇಷನ್‌ ನಂಬರಿನ ಎಸ್‌ಪ್ರೆಸ್‌ ಕಾರಿನಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಇಂದು (ಮಾ.22)  ಮೂವರ ಶವ ಪತ್ತೆಯಾಗಿದೆ. ಕಾರಿನಲ್ಲಿದ್ದವರು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್‌ ನಿವಾಸಿ ಆಟೋ ಚಾಲಕ ಸಾಹುಲ್‌ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್‌ (56), ಶಿರ್ಲಾಲ್‌ ಗ್ರಾಮದ ನಿವಾಸಿ ಇಮ್ತಿಯಾಜ್‌ (34) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Shani Dev: ಶನಿಯ ಚಲನೆಯಲ್ಲಿ ಬದಲಾವಣೆ; ಯಾವ ರಾಶಿಯವರಿಗೆ ಲಾಭ? ನಷ್ಟ

ಯಾವ ವಿಷಯಕ್ಕೆ ಸಂಬಂಧಪಟ್ಟಂತೆ ತುಮಕೂರು ಕಡೆಗೆ ಮೂವರು ಹೋಗಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ. ಐದು ಜನರು ಕಾರಿನಲ್ಲಿದ್ದು, ಇಬ್ಬರು ನಾಪತ್ತೆ ಎನ್ನಲಾಗಿದೆ. ಇದೀಗ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಕೋರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಅಶೋಕ್‌ ಕೆವಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ, ನವವಧು ನೇಣಿಗೆ ಶರಣು, ಡೆತ್‌ನೋಟ್‌ ಪತ್ತೆ

Leave A Reply