Congress: ಕಾಂಗ್ರೆಸ್ ಫೈನಲ್ ಪಟ್ಟಿ ಬಿಡುಗಡೆಗೆ ಅಂತಿಮ ಕ್ಷಣಗಣನೆ; ಯಾರಿಗೆಲ್ಲ ಟಿಕೆಟ್‌?

Congress Final List: ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಅಧಿಕೃತವಾಗಿ ಪಟ್ಟಿ ಬಿಡುಗಡೆ ಬಾಕಿಯಿದೆ. ದಿಲ್ಲಿಯಲ್ಲಿ ಸತತ ಎರಡು ದಿನ ಕಸರತ್ತು ನಡೆಸಿ ಪಟ್ಟಿ ಫೈನಲ್ ಮಾಡಿಸಿಕೊಳ್ಳುವಲ್ಲಿ ಸಿಎಂ, ಡಿಸಿಎಂ ಯಶಸ್ವಿಯಾಗಿದ್ದಾರೆ. ಈ ನಡುವೆಯೂ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರಗಳ ಉಮೇದುವಾರರ ಆಯ್ಕೆ ಬಾಕಿಯಿದೆ. ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು. ಈಗ 17 ಕ್ಷೇತ್ರಗಳನ್ನು ಒಳಗೊಂಡ ಎರಡನೇ ಪಟ್ಟಿ ಸಿದ್ದಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಿಡುಗಡೆಯಾವ ನಿರೀಕ್ಷೆಯಿದೆ.

ಇದನ್ನೂ ಓದಿ: Education Board: 5,8,9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ- ಮಹತ್ವದ ಮಾಹಿತಿ ಹಂಚಿಕೊಂಡ ಶಿಕ್ಷಣ ಇಲಾಖೆ

ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಹೆಚ್ಚಿನವರು ಹೊಸಬರು ಮತ್ತು ಯುವಕರು. ಜತೆಗೆ ರಾಜಕೀಯ ಕುಟುಂಬದ ಕುಡಿಗಳೂ ಇದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಂಡು ಬಳಿಕ ಎಐಸಿಸಿಗೆ ಮಾಹಿತಿ ತಲುಪಿಸಲಾಗುವುದು. ನಂತರ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Sugarcane Milk: ಇಂತವರು ಕಬ್ಬಿನ ಹಾಲು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!!

ಎರಡನೇ ಪಟ್ಟಿ: ಸಂಭಾವ್ಯ ಅಭ್ಯರ್ಥಿಗಳು

ಚಿತ್ರದುರ್ಗ – ಚಂದ್ರಪ್ಪ

ರಾಯಚೂರು – ಕುಮಾರ ನಾಯ್ಕ್

ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್

ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್

ಧಾರವಾಡ – ವಿನೋದ್ ಅಸೂಟಿ

ಕೊಪ್ಪಳ – ರಾಜಶೇಖರ ಹಿಟ್ನಾಳ್

ಕಲಬುರಗಿ – ರಾಧಾಕೃಷ್ಣ ದೊಡ್ಮನಿ

ಬೀದರ್ – ಸಾಗರ್ ಖಂಡ್ರೆ

ದಕ್ಷಿಣ ಕನ್ನಡ – ಪದ್ಮರಾಜ್

ಮೈಸೂರು – ಎಂ.ಲಕ್ಷ್ಮಣ

ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ

ಬೆಂಗಳೂರು ಕೇಂದ್ರ -ಮನ್ಸೂರ್ ಅಲಿ ಖಾನ್

ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ

ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್

ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್

ಅಂತಿಮವಾಗದ ಕ್ಷೇತ್ರಗಳಿವು

ಕೋಲಾರ

ಚಾಮರಾಜನಗರ

ಚಿಕ್ಕಬಳ್ಳಾಪುರ

ಬಳ್ಳಾರಿ

Leave A Reply

Your email address will not be published.