CM Siddaramaiah: ಡಿ.ವಿ.ಎಸ್ ಕಾಂಗ್ರೆಸ್ ಸೇರ್ಪಡೆಗೆ `ನೋ` ಎಂದ ಸಿದ್ದರಾಮಯ್ಯ

ಬೆಂಗಳೂರು : ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಇರಲಿ. ಇನ್ನೊಮ್ಮೆ ಆ ರೀತಿಯ ತಪ್ಪು ಮಾಡಬಾರದು. ಯಾರೇ ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಬರಲಿ. ಆಗ ಸೇರ್ಪಡೆಯಾದರೆ ಅವರಿಗೆ ಏನಾದರೂ ವ್ಯವಸ್ಥೆ ಮಾಡೋಣಾ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ತಡೆಯೊಡ್ಡಿದ್ದಾರೆ.

ಇದನ್ನೂ ಓದಿ: D.V.Sadananda Gowda: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಸುದ್ದಿಗೋಷ್ಠಿ ಮುಂದೂಡಿಕೆ

ಮೈಸೂರು ಕ್ಷೇತ್ರದಿಂದ ಸದಾನಂದ ಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸುವ ವದಂತಿ ದಟ್ಟವಾಗಿ ಹರಡಿತ್ತು. ಈ ಪ್ರಸ್ತಾವಕ್ಕೆ ಒಂದೇ ಮಾತಿನಲ್ಲಿ ಸಿದ್ದರಾಮಯ್ಯ ಆಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ:  Bengaluru: ಬೆಳ್ಳಂದೂರು ಶಾಲೆಯ ಮುಂಭಾಗದ ಖಾಲಿ ಸ್ಥಳದಲ್ಲಿ ಸ್ಫೋಟಕ ಪತ್ತೆ : ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು ಸದಾನಂದ ಗೌಡರನ್ನು ಕಾಂಗ್ರೆಸ್‌ ಸೇರಿಸುವ ಪ್ರಯತ್ನ ನಡೆಸಿದ್ದರು. ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸದಾನಂದ ಗೌಡರನ್ನು ಕಣಕ್ಕೆ ಇಳಿಸೋಣ. ನಾನು ಮಾತನಾಡಿದ್ದು ಅವರು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. ನೀವು ಅನುಮತಿ ನೀಡಿದರೆ ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದ್ದರು.

ಆದರೆ ಆಪರೇಷನ್‌ಗೆ ಒಪ್ಪದ ಸಿದ್ದರಾಮಯ್ಯ ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಕೇಸ್‌ನಿಂದ ನಾವು ಪಾಠ ಕಲಿತ್ತಿದ್ದೇವೆ ಎಂದು ಹೇಳಿದ್ದಾರೆ.

Leave A Reply

Your email address will not be published.