Home Karnataka State Politics Updates D.V.Sadananda Gowda: ನಾಳೆ ಮಹತ್ವದ ಸುದ್ದಿಗೋಷ್ಠಿ ಕರೆದ ಡಿವಿಎಸ್‌; ಮಾಜಿ ಸಿಎಂ ಚಿತ್ತ ಕಾಂಗ್ರೆಸ್‌ನತ್ತ?

D.V.Sadananda Gowda: ನಾಳೆ ಮಹತ್ವದ ಸುದ್ದಿಗೋಷ್ಠಿ ಕರೆದ ಡಿವಿಎಸ್‌; ಮಾಜಿ ಸಿಎಂ ಚಿತ್ತ ಕಾಂಗ್ರೆಸ್‌ನತ್ತ?

D.V.Sadananda Gowda

Hindu neighbor gifts plot of land

Hindu neighbour gifts land to Muslim journalist

D.V.Sadananda Gowda: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ನಾಳೆ ಮಹತ್ವದ ಸುದ್ದಿಗೋಷ್ಠಿಯೊಂದನ್ನು ಕರೆದಿದ್ದು, ಬಹಳ ಕುತೂಹಲವನ್ನು ಉಂಟುಮಾಡಿದ್ದಾರೆ.

ಇದನ್ನೂ ಓದಿ: Physical Pleasure: ಲೈಂಗಿಕ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ 11 ಉಂಗುರ ಹಾಕಿದ ವ್ಯಕ್ತಿ; ಸೀದಾ ಆಸ್ಪತ್ರೆಗೆ ದಾಖಲು

ಲೋಕಸಭೆ ಚುನಾವಣೆ ಸಮಯಲ್ಲಿ ಡಿವಿ ಸದಾನಂದ ಗೌಡ ಅವರು ಸುದ್ದಿಗೋಷ್ಠಿಯನ್ನು ಕರೆದಿದ್ದು, ಇವರ ಮುಂದಿನ ನಡೆ ಏನು? ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದೆ ಎಂಬ ಕುತೂಹಲ ಮೂಡಿದೆ. ಅಂದಹಾಗೆ ನಾಳೆ ಬೆಳಗ್ಗೆ 10.30 ಕ್ಕೆ ಡಿವಿಎಸ್‌ ಸುದ್ದಿಗೋಷ್ಠಿ ಕರೆದಿದ್ದಾರೆ.

ಇದನ್ನೂ ಓದಿ: Russia: ರಷ್ಯಾ ಅಧ್ಯಕ್ಷೀಯ ಚುನಾವಣೆ : ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ ವ್ಲಾಡಿಮಿರ್ ಪುಟಿನ್

ಬಿಜೆಪಿ ಹೈಕಮಾಂಡ್‌ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಿದ್ದು, ಇತ್ತೀಚೆಗೆ ಶೋಭಾ ಅವರು ಡಿವಿಎಸ್‌ ಅವರ ಆಶೀರ್ವಾದ ಕೂಡಾ ಪಡೆದುಕೊಂಡಿದ್ದರು. ಅನಂತರ ಡಿವಿಎಸ್‌ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದವರಿಗೆ ಪೋಸ್ಟ್‌ವೊಂದನ್ನು ಮಾಡಿ, ಧನ್ಯವಾದ ಹೇಳಿಕೊಂಡಿದ್ದರು.

ಲೋಕಸಭಾ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ನಿನ್ನೆ ಬಂದು ಭೇಟಿ ಮಾಡಿದ್ದಾರೆ. ಚರ್ಚೆ ಮಾಡಿ ಆಫರ್‌ ಕೂಡಾ ನೀಡಿದ್ದಾರೆ. ಈ ಕುರಿತು ನನ್ನ ಮನೆಯವರೊಂದಿಗೆ ಮಾತನಾಡುವೆ. ನಂತರ ನಾಳೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸಂಸದ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಟಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ, ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ.. ತಿಳಿದೂ ಹೀಗೆ ಮಾಡಿರೋದು ಬೇಜಾರು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಸೋಮವಾರ (ಇಂದು) ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಹೇಳಿದರು.