Home Breaking Entertainment News Kannada Bigg Boss: ಬಿಗ್‌ಬಾಸ್‌ ಒಟಿಟಿ ಯ ವಿನ್ನರನ್ನು ಅರೆಸ್ಟ್‌ ಮಾಡಿದ ಪೊಲೀಸರು; ಈತನ ಮೇಲಿರುವ ಆರೋಪಗಳೇನು?

Bigg Boss: ಬಿಗ್‌ಬಾಸ್‌ ಒಟಿಟಿ ಯ ವಿನ್ನರನ್ನು ಅರೆಸ್ಟ್‌ ಮಾಡಿದ ಪೊಲೀಸರು; ಈತನ ಮೇಲಿರುವ ಆರೋಪಗಳೇನು?

Bigg Boss

Hindu neighbor gifts plot of land

Hindu neighbour gifts land to Muslim journalist

Elwish Yadav: ಬಿಗ್ ಬಾಸ್ OTT 2 ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ಬಂಧಿಸಲಾಗಿದೆ. ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಪೂರೈಸಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಎಲ್ವಿಶ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ನೋಯ್ಡಾ ಪೊಲೀಸರು ಮಾರ್ಚ್ 17 ರಂದು ಎಲ್ವಿಶ್ ಯಾದವ್ ಅವರನ್ನು ಬಂಧನ ಮಾಡಿದ್ದರು.

ಇದನ್ನೂ ಓದಿ: Kolkata: ನಿರ್ಮಾಣ ಹಂತದ ಕಟ್ಟಡ ಕುಸಿತ : 10 ಜನರ ರಕ್ಷಣೆ : ಒಳಗೆ ಸಿಲುಕಿರುವವರಿಗಾಗಿ ಹುಡುಕಾಟ

ಎಲ್ವಿಶ್ ಯಾದವ್ ಪ್ರಕರಣದ ಕುರಿತು ಹೇಳುವುದಾದರೆ, ಬಿಗ್‌ಬಾಸ್‌ ಒಟಿಟಿ ವಿನ್ನರ್‌ ಮೇಲೆ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಸರಬರಾಜು ಮಾಡಿದ ಆರೋಪವಿದೆ. ಕೆಲ ತಿಂಗಳ ಹಿಂದೆ ಈತನ ತಂಡದ ಕೆಲವರನ್ನು ಬಂಧಿಸಲಾಗಿತ್ತು. ಪ್ರಸ್ತುತ, ಎಲ್ವಿಶ್ ಅವರನ್ನು ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಒಳಪಡಿಸಿದ ನಂತರ ಎಲ್ವಿಶ್ ತಪ್ಪಿತಸ್ಥನೆಂದು ಸಾಬೀತಾದರೆ, ಅವನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather: ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಎಲ್ವಿಶ್ ಯಾದವ್ ಮೇಲೆ ನೋಯ್ಡಾ ಪೊಲೀಸರು 29 ಎನ್‌ಡಿಪಿಎಸ್ ಕಾಯ್ದೆಯನ್ನು ವಿಧಿಸಿದ್ದಾರೆ. ಈ ಕಾಯ್ದೆಯ ಪ್ರಕಾರ ಯಾರಾದರೂ ಮಾದಕವಸ್ತು ಸಂಬಂಧಿತ ಪಿತೂರಿಯಲ್ಲಿ ತೊಡಗಿಸಿಕೊಂಡಾಗ NDPS ಕಾಯ್ದೆಯನ್ನು ವಿಧಿಸಲಾಗುತ್ತದೆ. ಈ ಕಾಯ್ದೆಯಡಿ ಜಾಮೀನು ಸುಲಭವಾಗಿ ಸಿಗುವುದಿಲ್ಲ.