Dakshina Kannada: ಬಿಜೆಪಿ ಸೇರುತ್ತಿದ್ದಂತೆ ಪುತ್ತಿಲ ಪರಿವಾರದ ಕಾರ್ಯಕರ್ತನಿಂದ ಮಾಧ್ಯಮಗಳ ಮೇಲೆ ಗೂಂಡಾಗಿರಿ ?!
Dakshina Kannada: ಲೋಕಸಭಾ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟರಿಗೆ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಸದ್ದಿಲ್ಲದೆ ಬೆಂಗಳೂರಿಗೆ ಹೋಗಿ ಬಿಜೆಪಿ ಸೇರ್ಪಡೆಗೊಂಡ ಅರುಣ್ ಕುಮಾರ್ ಪುತ್ತಿಲರು ತಮ್ಮ ಪರಿವಾರದೊಂದಿಗೆ ಬಿಜೆಪಿ ಸೇರಿದರು. ಆದರೆ ಹೀಗೆ ಬಿಜೆಪಿ(BJP) ಸೇರ್ಪಡೆ ಬೆನ್ನಲ್ಲೇ ಪುತ್ತಿಲ ಪರಿವಾರಕ್ಕೆ ಮಾಧ್ಯಮಗಳೇ ಬೇಡವಾಗಿದೆ. ಅವರ ಮೇಲೆ ಗೂಂಡಗಿರಿ ಮಾಡುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ.
ಇದನ್ನೂ ಓದಿ: Bengaluru: ಬೆಂಗಳೂರು ನೀರು ಬಿಕ್ಕಟ್ಟು : ನೀರಿನ ಕೊರತೆಯ ನಡುವೆಯೂ ಎಸಿ ನೀರಿನ ಕೊಯ್ಲಿಗೆ ಆನಂದ್ ಮಹೀಂದ್ರಾ ಸಲಹೆ
ಹೌದು, ಅರುಣ್ ಕುಮಾರ್ ಪುತ್ತಿಲ(Arun kumar puttila) ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಶನಿವಾರ ದಕ್ಷಿಣ ಕನ್ನಡ(Dakshina kannada) ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ನಡೆದಿದೆ. ಈ ವೇಳೆ ಪರಿವಾರ ಕಾರ್ಯಕರ್ತನೊಂಬ ಪತ್ರಕರ್ತರ ಮೇಲೆ ಗೂಂಡಾಗಿರಿ ಎಸಗಿದ ಆರೋಪ ಕೇಳಿ ಬಂದಿದೆ. ಬಂಡಾಯ ಎದ್ದು ಆರ್ಭಟಿಸುವಾಗ ಮಾಧ್ಯಮಗಳು ಬೇಕಾಗಿದ್ದ ಪುತ್ತಿಲ ಪರಿವಾರಕ್ಕೆ ಇದೀಗ ಮತ್ತೆ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಮಾಧ್ಯಮಗಳು ಬೇಡವಾಗಿ ಅವರ ವಿರುದ್ದವೇ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Shivmoga: ಬಸವಣ್ಣನವರ ಹೆಸರಿನಲ್ಲಿ ಜನರ ಬೆಂಬಲ ಪಡೆಯುತ್ತೇನೆ : ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ
ಅಂದಹಾಗೆ ಕಾರ್ಯಕ್ರಮದ ವರದಿ ಮಾಡಲು ಹೋದ ಮಾಧ್ಯಮದವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತ ಸಂದೀಪ್ ಉಪ್ಪಿನಂಗಡಿ ಎಂಬಾತ ತಳ್ಳಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿ, “ಮಾಧ್ಯಮದವರು ಇಲ್ಲಿ ಯಾಕೆ ಬರುವುದು? ನಮಗೆ ಮಾಧ್ಯಮದವರ ಅಗತ್ಯವಿಲ್ಲ. ನಾವು ಈಗ(ಪುತ್ತಿಲ ಪರಿವಾರ ಮತ್ತು ಬಿಜೆಪಿ) ಒಂದಾಗಿ ಆಯಿತು’ ಎಂದು ಸಂದೀಪ್ ಉಪ್ಪಿನಂಗಡಿ ಹೇಳಿಕೊಂಡಿದ್ದಾನೆ’ ಎಂದು ಪತ್ರಕರ್ತರು ಆರೋಪಿಸಿದ್ದಾರೆ.