JC Madhuswamy: ತುಮಕೂರಿನಲ್ಲಿ ಹೊರಗಡೆಯಿಂದ ಬಂದು ಗೆದ್ದವರಿಲ್ಲ : ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ
ತುಮಕೂರು : ಜಿಲ್ಲೆಯಲ್ಲಿ ಹೊರಗಡೆಯಿಂದ ಬಂದು ಗೆದ್ದವರ ಇತಿಹಾಸವೇ ಇಲ್ಲ ಎಂದು ಮಾಜಿ ಸಚಿವ ಜೆ ಸಿ ಮಾಧುಸ್ವಾಮಿಯವರು ಮಾಜಿ ಸಚಿವ ವಿ ಸೋಮಣ್ಣಗೆ ಟಾಂಗ್ ನೀಡಿದ್ದಾರೆ.
ಹೊರಗಡೆಯವರು ಇಲ್ಲಿಗೆ ಬರಬೇಡಿ ಅಂತ ಹೇಳಿದ್ದೇನೆ. ಆದರೆ ಹೈಕಮಾಂಡ್ ಅಂತ ಹೇಳಿ ನಮ್ಮನ್ನೆಲ್ಲಾ ಗುಲಾಮರು ಅಂತ ಭಾವಿಸೋಕೆ ಆಗುತ್ತಾ? ಅಭ್ಯರ್ಥಿ ಆಯ್ಕೆಗೆ ಮುನ್ನ ನಮ್ಮ ಅಭಿಪ್ರಾಯವನ್ನು ಕೇಳಬೇಕಿತ್ತು. ನಾವ್ಯಾರು ಬಸವರಾಜುಗೆ ಜೀತದಾಳುಗಳಲ್ಲ, ಬಿಜೆಪಿ ಪಕ್ಷದವರಷ್ಟೇ, ಸಂಸದ ಬಸವರಾಜು ಮನೆ ಆಳುಗಳಲ್ಲ ಎಂದು ಸಂಸದ ಬಸವರಾಜು ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Priyanka Chopra: ‘ಬಾಲಿವುಡ್’ನ ಬುನಾದಿಯೇ ನಟಿಯರ ಹಿಂದು-ಮುಂದಿನ ಸೈಜ್’ ಎಂದ ಪ್ರಿಯಾಂಕ ಚೋಪ್ರಾ!!
ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಉದ್ದೇಶದಿಂದಲೇ ನನಗೆ ಟಿಕೆಟ್ ತಪ್ಪಿಸಲಾಗಿದೆ. ನನಗೆ ಟಿಕೆಟ್ ನೀಡಿದರೆ ಗೆಲುವು ಖಚಿತವಾಗುತ್ತದೆ ಎಂದು ಅರಿತವರು ಟಿಕೆಟ್ ಕೈತಪ್ಪಿಸಿ ಕಾಂಗ್ರೆಸ್ ಗೆಲ್ಲಿಸಲು ಹೊರಟಿದ್ದಾರೆ ಎಂದು ಹಾಲಿ ಸಂಸದ ಬಸವರಾಜ ವಿರುದ್ಧ ಜೆ ಸಿ ಮಾಧುಸ್ವಾಮಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಈ ಬಾರಿಯ ತುಮಕೂರಿನಿಂದ ಕಣಕ್ಕಿಳಿದಿರುವ ವಿ ಸೋಮಣ್ಣ ಮೊದಲ ದಿನವೇ ತುಮಕೂರು ನಗರದಾದ್ಯಂತ ಅಬ್ಬರದ ಪ್ರಚಾರ ಮಾಡಿದ್ದಾರೆ. ಇದರ ಜೊತೆಗೆ ಅನೇಕ ಮಠಾಧೀಶರನ್ನು ಭೇಟಿಯಾಗಿ ತಮಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದಾರೆ ಎಂದು ಸೋಮಣ್ಣ ಆಪ್ತರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ತುಮಕೂರು ಲೋಕಸಭಾ ರಣಕಣ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದ್ದು ಜೆ ಸಿ ಮಾಧುಸ್ವಾಮಿಯವರು ಈಶ್ವರಪ್ಪನವರಂತೆ ಪಕ್ಷದ ವಿರುದ್ಧ ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.