Basavaraj Bommai: ಬಿ ಸಿ ಪಾಟೀಲ್ ಕಾಲಿಗೆ ಬೀಳಲು ಹೋದ ಬೊಮ್ಮಾಯಿ – ಅರೆ ಇದೇನಿದು ಮಾಜಿ ಸಿಎಂ ವಿಚಿತ್ರ ನಡೆ ?!

Basavaraj Bommai: ಮುಖ್ಯಮಂತ್ರಿ ಅಂದ್ರೆ ಅದು ರಾಜ್ಯದ ಪರಮೋಚ್ಚ ಹುದ್ದೆ. ಅವರು ಮಾಜಿ ಆಗಲಿ, ಹಾಲಿ ಆಗಲಿ ಅಥವಾ ಭಾವಿ ಆಗಲಿ. ಆ ಹುದ್ದೆಯಲ್ಲಿರುವವರಿಗೆ, ಇದ್ದು ಬಂದವರಿಗೆ ಕೊನೇ ವರೆಗೂ ಅದೇ ಗೌರವ ಇರುತ್ತದೆ. ಹೀಗೆ ಮುಖ್ಯಮಂತ್ರಿಗಳಾಗಿದ್ದವರು ತಮ್ಮ ಅವಧಿಯಲ್ಲೇ ಮಂತ್ರಿಯಾಗಿದ್ದವರ ಕಾಲಿಗೆ ಬೀಳುವುದು ಎಂದರೆ ಏನು?

https://youtu.be/kUkLr4ANa7E?si=0GyTdAMWw2rq_N8d

ಇದನ್ನೂ ಓದಿ:Lok Sabha Election 2024: ಲೋಕಸಭೆ ಚುನಾವಣೆ 2024; ದಿನಾಂಕ, ವೇಳಾಪಟ್ಟಿ ಇಂದು ಘೋಷಣೆ ಕುರಿತು ಆಯೋಗದ ಸುದ್ದಿಗೋಷ್ಠಿಯ ನೇರ ಪ್ರಸಾರ ನೋಡಲು ಇಲ್ಲಿದೆ ಲಿಂಕ್‌

ಇಂತಹ ಒಂದು ವಿಚಿತ್ರ ನಡೆಯನ್ನು ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳೇ ಮಾಡಿದ್ದಾರೆ. ಹೌದು, ನಮ್ಮ ಬಿಜೆಪಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀಮಾನ್ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಾವು ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಬಿ ಸಿ ಪಾಟೀಲ್(B C Patil) ಅವರಿಗೆ ಕೈಮುಗಿದು ಕಾಲಿಗೆ ಬೀಳಲು ಹೋಗಿದ್ದಾರೆ. ಆಗ ತಕ್ಷಣವೇ ಪಾಟೀಲರು ತಡೆದು ಕೈಮುಗಿದಿದ್ದಾರೆ. ಮಾಜಿ ಸಿಎಂ ಅವರ ಈ ವಿಚಿತ್ರ ನಡೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಅಲ್ಲದೆ ಕಾಂಗ್ರೆಸ್ ಕೂಡ ಈ ವಿಡಿಯೋವನ್ನು ಹಂಚಿಕೊಂಡು ಲೇವಡಿ ಮಾಡಿದೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ(Vidhanasabhe election)ಹೀನಾಯವಾಗಿ ಸೋಲುಂಡ ಬಿ ಸಿ ಪಾಟೀಲ್ ಅವರು ಈ ಸಲ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಇದು ಬೇಡಿಕೆಯಲ್ಲ, ನನ್ನು ಡಿಮ್ಯಾಂಡ್ ಎಂದಿದ್ದರು. ಆದರೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಹಾವೇರಿ(Haveri) ಕ್ಷೇತ್ರ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪಾಲಾಯಿತು. ಹೀಗಾಗಿ ಇದರಿಂದ ಪಾಟೀಲ್ ಅವರು ಏನಾದರೂ ಬಂಡಾಯ ಎದ್ದರೆ ಏನು ಮಾಡುವುದೆಂದು ಮೊದಲೇ ಮುಂದಾಲೋಚನೆ ಮಾಡಿದ ಬೊಮ್ಮಾಯಿ ಅವರು ನೇರವಾಗಿ ಬಿ ಸಿ ಪಾಟೀಲ್ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇದೆಲ್ಲದೂ ಓಕೆ. ಆದರೆ ಕಾಲಿಗೆ ಬೀಳಲು ಮುಂದಾಗಿದ್ದು ಮಾತ್ರ ಖಂಡಿತಾ ತರವಲ್ಲ. ತಾನೊಬ್ಬ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂಬುದನ್ನೂ ಮರೆತು ಅವರು ಒಬ್ಬ ಮಾಜಿ ಮಂತ್ರಿಯ ಕಾಲಿಗೆ ಬೀಳಲು ಮುಂದಾಗಿದ್ದು, ಅವರ ಹಿರಿಮೆಗೇ ಅದು ಒಂದು ಅಗೌರವ!! ಅಲ್ಲದೆ ಅವರು ವಯಸ್ಸಿನಲ್ಲಿಯೂ ಬಹುಶಃ ಹಿರಿಯರು. ವಯಸ್ಸಿನ ಲೆಕ್ಕಾಚಾರ ಬಿಡಿ, ಸಣ್ಣವರಾದರೂ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡಬೇಕಿತ್ತು. ಒಟ್ಟಿನಲ್ಲಿ ಬೊಮ್ಮಾಯಿ ನಡೆ ನಿಜಕ್ಕೂ ಸಮಂಜಸವಲ್ಲ.

ಇದನ್ನೂ ಓದಿ: Political News: ಬಿಜೆಪಿಗೆ ಬಾಕಿ ಉಳಿಸಿಕೊಂಡಿರುವ ಈ 5 ಕ್ಷೇತ್ರಗಳು ಇದೀಗ ಮಗ್ಗಲ ಮುಳ್ಳಾಗಿ ಬಿಜೆಪಿಗೆ ಚುಚ್ಚುತ್ತಿವೆ

ಇನ್ನು ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಟ್ವೀಟ್ ಮಾಡಿ ‘ಛೇ ಇದೆಂತಹಾ ದುಸ್ಥಿತಿ @BSBommai ಅವರೇ, ಮಾಜಿ ಮುಖ್ಯಮಂತ್ರಿಯಾಗಿ, ವಯಸ್ಸಿನಲ್ಲಿ ಹಿರಿಯರಾಗಿ ಕಿರಿಯ ವಯಸ್ಸಿನ ಬಿ ಸಿ ಪಾಟೀಲ್ ಕಾಲಿಗೆ ಬೀಳುವುದೇ? ಗೋ ಬ್ಯಾಕ್ ಬೊಮ್ಮಯಿ“ ಅಭಿಯಾನ ಶುರುವಾಗದಿರಲಿ ಎಂದು ಅಂಟಿಸಿಪೇಟರಿ ಬೇಲ್ ತೆಗೆದುಕೊಳ್ಳುತ್ತಿರುವುದಾ ಅಥವಾ ಟಿಕೆಟ್ ವಂಚಿತ ಪಾಟೀಲರನ್ನು ಓಲೈಸಿಕೊಳ್ಳುತ್ತಿರುವುದಾ ಬೊಮ್ಮಯಿಯವರ ಇಂತಹ ಶರಣಾಗತಿಯ ಸ್ಥಿತಿ ದಯನಿಯವಾಗಿದೆ. ಎಂದು ಕುಟುಕಿದೆ.

Leave A Reply

Your email address will not be published.