Home Karnataka State Politics Updates B S Yadiyurappa: ಮಗನಿಗೆ ಟಿಕೆಟ್ ತಪ್ಪಿದ ನಿರಾಸೆಯಲ್ಲಿರುವ ಈಶ್ವರಪ್ಪಗೆ ಗುಡ್ ನ್ಯೂಸ್ ಕೊಟ್ಟ ಯಡಿಯೂರಪ್ಪ...

B S Yadiyurappa: ಮಗನಿಗೆ ಟಿಕೆಟ್ ತಪ್ಪಿದ ನಿರಾಸೆಯಲ್ಲಿರುವ ಈಶ್ವರಪ್ಪಗೆ ಗುಡ್ ನ್ಯೂಸ್ ಕೊಟ್ಟ ಯಡಿಯೂರಪ್ಪ !!

B S Yadiyurappa

Hindu neighbor gifts plot of land

Hindu neighbour gifts land to Muslim journalist

B S Yadiyurappa: ಲೋಕಸಭಾ ಚುನಾವಣೆಯ ಟಿಕೆಟ್ ವಂಚಿತರಾಗಿ ಭಾರೀ ನಿರಾಸೆಗೊಂಡಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರಿಗೆ ರಾಜ್ಯ ವರಿಷ್ಠ ಬಿ ಎಸ್ ಯಡಿಯೂರಪ್ಪರು(B S Yadiyurappa)ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: BS Yediyurappa: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಬಿಎಸ್‌ ಯಡಿಯೂರಪ್ಪ ವಿರುದ್ಧ ಕೇಸು ದಾಖಲು

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ(Vidhanasabhe election) ತನಗೆ ಟಿಕೆಟ್ ಮಿಸ್ ಆಯ್ತು, ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹಾವೇರಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ ಗೆ ಬಿಜೆಪಿ ಬಿಗ್ ಶಾಕ್ ನೀಡಿ ಹಾವೇರಿ ಟಿಕೆಟ್ ಅನ್ನು ಬೊಮ್ಮಾಯಿಗೆ ಕೊಟ್ಟಿತ್ತು. ಹೀಗಾಗಿ ಬಿಜೆಪಿ ವರಿಷ್ಠರು ಹಾಗೂ ಯಡಿಯೂರಪ್ಪನವರು ನನಗೆ ಮೋಸ ಮಾಡಿದರು ಎಂದು ಬೇಸರಪಟ್ಟುಕೊಂಡಿದ್ದ ಈಶ್ವರಪ್ಪನವರಿಗೆ ಇದೀಗ ದೋಸ್ತಿ ಯಡಿಯೂರಪ್ಪನವರು ಗುಡ್ ನ್ಯೂಸ್ ಕೊಟ್ಟಿದ್ದು, ಈಶ್ವರಪ್ಪನವರ ಪುತ್ರ ಕಾಂತೇಶ್ ನನ್ನು MLC ಮಾಡುವ ಸುಳಿವು ನೀಡಿದ್ದಾರೆ.

ಮಾಧ್ಯಮಗಳು ಈಶ್ವರಪ್ಪನವರ(K S Eshwarappa) ಆಕ್ರೋಶವನ್ನು ಯಡಿಯೂರಪ್ಪರ ಬಳಿ ಪ್ರಶ್ನಿಸಿದಾಗ ಅವರಿಗೆ ಮೋಸವಾಗಿಲ್ಲ, ದೆಹಲಿಯ ಹಿರಿಯರು ಅವರ ಮಗನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಲು ಚಿಂತನೆ ನಡೆಸಿದ್ದಾರೆ. ಎಲ್ಲದೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.