Karnataka Politics: ನಳಿನ್ ಕಟೀಲ್ ಔಟ್ ಆದ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ತರಾತುರಿಯಲ್ಲಿ ಬಿಜೆಪಿ ಸೇರಿದ್ದೇಕೆ? ಮಧ್ಯೆ ನಡೆದ ಆ ದೊಡ್ಡ ಡೀಲ್ ಏನು ?!
Karnatka Politics : ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಟೀಲ್ ರನ್ನು ರನೌಟ್ ಮಾಡಲಾಗಿದೆ. ಮಂಗಳೂರು ಲೋಕ ಕ್ಷೇತ್ರಕ್ಕೆ ಬಿಜೆಪಿ ಬ್ರಿಚೇಶ್ ಚೌಟರನ್ನು(Brijesh Chowta) ನಾಮಿನೇಟ್ ಮಾಡುತ್ತಿದ್ದಂತೆ ಕರಾವಳಿಯಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಬಿಜೆಪಿ ಸೇರಲು ನೂರಾರು ಅಡ್ಡಿ ಅಡಚಣೆ ಕಂಡೀಷನ್ ಇತ್ಯಾದಿಗಳನ್ನು ಇಡುತ್ತಿದ್ದ ಅಥವಾ ಇಡುವ ಹಾಗೆ ಕಾಣುತ್ತಿದ್ದ ಅರುಣ್ ಕುಮಾರ್ ಪುತ್ತಿಲ (Arun Kumar Puttila)ಸೈಲೆಂಟಾಗಿ ಸದ್ದು ಗದ್ದಲ, ಕಂಡೀಷನ್ ಗಳಿಲ್ಲದೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿಯಲ್ಲಿ ಪುತ್ತಿಲ ಪರಿವಾರ ವಿಲೀನವಾಗಿದೆ. ಹೀಗೆ ಏಕಾಏಕಿ ಆರ್ಭಟಿಸುತ್ತ ಹುಟ್ಟಿದ ಪರಿವಾರ ಸಡನ್ ಆಗಿ ಸೈಲೆಂಟ್ ಆದ ಹಿಂದೆ ನಡೆದ ಡೀಲ್ ನಡೆದಿದೆಯಾ? ಹಾಗಿದ್ರೆ ಏನದು ಎನ್ನುವುದೇ ಕುತೂಹಲ.
ಹೌದು, ದೊಡ್ಡ ಮಟ್ಟದಲ್ಲಿ ಪುತ್ತಿಲ ಮತ್ತು ಬಿಜೆಪಿ ನಾಯಕರುಗಳೊಂದಿಗೆ ಡೀಲ್ ನಡೆದಿದೆ. ಈ ಹಿಂದೆ ಮುಖ್ಯಮಂತ್ರಿ ಆಗಿ ಬಿಎಸ್ ಯಡಿಯೂರಪ್ಪನವರು ನಿರ್ಗಮಿಸಿದ ನಂತರ ಆ ಸ್ಥಾನಕ್ಕೆ ಬಸವರಾಜು ಬೊಮ್ಮಾಯಿ ಬಂದು ಕೂತಿದ್ದರು. ಆ ಸಂದರ್ಭ, “ಇನ್ನೂ ಎಲ್ಲವೂ ನನ್ನದೇ, ಎಲ್ಲವೂ ನಮ್ಮ ಕೈಯಲ್ಲಿ. ಇನ್ನು ನಾನು ಬಿಟ್ಟರೆ ಬೇರೆ ಯಾರೂ ಇಲ್ಲ” ಎನ್ನುವ ಡೈಲಾಗ್ ಹೊಡೆದಿದ್ದರು ನಳಿನ್ ಕುಮಾರ್ ಕಟೀಲ್. ಅದು ಯಡಿಯೂರಪ್ಪನವರನ್ನು ಉದ್ದೇಶಿಸಿ ಹೇಳಿದ್ದಾಗಿತ್ತು. ತದನಂತರ ಕಟೀಲ್ ರವರು ಯಡಿಯೂರಪ್ಪನವರಿಗೆ ಕ್ಯಾರೇ ಅನ್ನಲಿಲ್ಲ. ‘ಅಪ್ಪ’ನ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ತಾವೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ತೊಡಗಿದರು. ಆಗ ಉರಿದು ಹೋದರು ಅಪ್ಪ ಆಂಡ್ ಸನ್ಸ್ !
ಆಗಲೇ ತಂದೆ ಮತ್ತು ಮಕ್ಕಳು ಕಟೀಲ್ ಗೆ ಖೆಡ್ಡಾ ತೋಡಲು ಪಿಕಾಸಿ ಗುದ್ದಲಿ ಇತ್ಯಾದಿ ರೆಡಿ ಮಾಡಿಕೊಳ್ಳತೊಡಗಿದರು. ಆಗ ಅವರಿಗೆ ಸಿಕ್ಕ ಹೊಸ ಇನ್ನೊಂದು ಅಸ್ತ್ರ ಅರುಣ್ ಕುಮಾರ್ ಪುತ್ತಿಲ. ತದನಂತರ ಪುತ್ತೂರು ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದ ಪುತ್ತಿಲರಿಗೆ ಟಿಕೆಟ್ ಕೊಡಲಿಲ್ಲ ಬಿ ಎಲ್ ಸಂತೋಷ್. ಅಲ್ಲದೆ ಹಾಲಿ ಶಾಸಕರಿಗೂ ಟಿಕೆಟ್ ನೀಡದೆ, ಅದ್ಯಾರೋ ಮಧ್ಯವಯಸ್ಸು ದಾಟಿದ ಮಹಿಳೆಯನ್ನು ಎಲ್ಲಿಂದಲೋ ತಂದು ಪ್ರಯೋಗ ಮಾಡಲಾಯಿತು. ಆ ಮಹಿಳೆಯನ್ನು,” ಅಕ್ಕೆ ಬಂದ್ರು, ಅಕ್ಕೆ ಹೋದ್ರು ” ಅನ್ನುತ್ತಲೇ ತಮಾಷೆ ಮಾಡಿ ಸೋಲಿಸಿದ್ದು ಇದೇ ಬಿಜೆಪಿಯ ಕಟ್ಟರ್ ಕಾರ್ಯಕರ್ತರುಗಳು. ಬಂಡಾಯವಾಗಿ ಪುತ್ತಿಲ ಪರಿವಾರ ಹೆಸರಿನಲ್ಲಿ ಅರುಣ್ ಕುಮಾರ್ ಪುತ್ತಿಲರವರು ಸ್ಪರ್ಧೆಗೆ ನಿಂತರು. ಈ ಜಗ್ಗಾಟದಲ್ಲಿ ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ ಎಂ ಎಲ್ ಎ ಆಗಿಯೇ ಬಿಟ್ರು. ಪ್ರಬಲ ಪ್ರತಿಸ್ಪರ್ಧೆ ತೋರಿದ ಅರುಣ್ ಕುಮಾರ್ ಪುತ್ತಿಲ ರನ್ನರ್ ಅಪ್ ಆಗಿ ಬಿಜೆಪಿಯನ್ನು ಹೀನಾಯ ಮೂರನೇ ಸ್ಥಾನಕ್ಕೆ ತಳ್ಳಿದರು. ಪುತ್ತಿಲರ ಉತ್ಸಾಹ ಜಾಸ್ತಿಯಾಯಿತು. ಓಡಾಟ ಅಧಿಕವಾಯಿತು. ಜತೆಗೆ ಸೋಶಿಯಲ್ ಮೀಡಿಯಾದ ಸ್ಟ್ರಾಂಗ್ ಟೀಮ್ ಕಟ್ಟಿದರು ಪುತ್ತಿಲ. ಜತೆಗೆ ತಮ್ಮನ್ನು ತಾವು ಮುಂದಿನ ಎಂಪಿ ಚುನಾವಣೆಗೆ ಪ್ರೊಜೆಕ್ಟ್ ಮಾಡಿಕೊಳ್ಳತೊಡಗೊಡರು.
ಇದನ್ನೂ ಓದಿ: ಆಳ್ವಾಸ್ ಕಾಲೇಜಿನಲ್ಲಿ ಮುಂದುವರಿದ ಆತ್ಮಹತ್ಯೆ ಸರಪಳಿ, ಹಾಸ್ಟೆಲ್ ವಿದ್ಯಾರ್ಥಿ ಆತ್ಮಹತ್ಯೆ !
ಅದನ್ನೇ ಸರಿಯಾದ ಅಪರ್ಚುನಿಟಿ ಎಂದು ಪರಿಗಣಿಸಿದ ಅಪ್ಪ ಆಂಡ್ ಸನ್ಸ್, ನಳಿನ್ ಕಟೀಲ್ ರನ್ನು ಅವರ ಸ್ವಕ್ಷೇತ್ರದಲ್ಲಿ ಹಣಿಯಲು ಅರುಣ್ ಕುಮಾರ್ ಪುತ್ತಿಲರನ್ನು ಬಳಸಿಕೊಂಡರು. ಆಗ ಬ್ರಿಜೇಶ್ ಚೌಟ ಕೂಡಾ ತಮ್ಮನ್ನು ತಾವು ಎಂ ಪಿ ಅಭ್ಯರ್ಥಿಯಾಗಿ ಪ್ರಾಜೆಕ್ಟ್ ಮಾಡಲು ಆರಂಭಿಸಿದರು. ಅವರ ಬೆಂಬಲ ಕೂಡಾ ಅರುಣ್ ಕುಮಾರ್ ಪುತ್ತಿಲರಿಗೆ ದೊರೆಯಿತು. ಒಟ್ಟಾರೆ ಅಪ್ಪ ಆಂಡ್ ಸನ್ಸ್ ಇಟ್ಟ ಕುದುರಿತು, ಅದರ ರಿಸಲ್ಟ್ ಈಗ ಬಂದಿದೆ: ‘ನಾನೇ ಅಧ್ಯಕ್ಷ, ನಾನೇ ಟಿಕೆಟ್ ಕೊಡೋದು, ಘೋಷಣೆ ಕೂಗಿದವರಿಗೆ ಟಿಕೆಟ್ ಇಲ್ಲ’ ಎಂದು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭ ಡೈಲಾಗ್ ಬೀಸಿದ್ದ ಕಟೀಲ್ ರವರೇ ಈ ಬಾರಿ ಟಿಕೆಟ್ ಇಲ್ಲದೆ ಕಂಗಾಲಾಗಿದ್ದಾರೆ. ನಳಿನ್ ಕಟೀಲ್ರನ್ನು ಹೊರಗೆ ಇಟ್ಟ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಗೆಲುವಿನ ನಗೆ ಬೀರಿದ್ದು, ಅದಕ್ಕೆ ಸಹಕರಿಸಿದ ಪುತ್ತಿಲರನ್ನು ತರಾತುರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಪುತ್ತಿಲ ಪರಿವಾರ ಬಿಜೆಪಿಯ ಜೊತೆಗೆ ವಿಲೀನಗೊಂಡಿದೆ. ಇಲ್ಲದೆ ಹೋದರೆ, ಇಷ್ಟು ದಿನ ಬಿಜೆಪಿಯನ್ನು ಕಾಡಿಸಿದ, ಯಾರಿಗೂ ಡೋಂಟ್ ಕೇರ್ ಎನ್ನುವ ಹಾಗೆ ಓಡಾಡುತ್ತಿದ್ದರು ಪುತ್ತಿಲರು. ಆದರೆ ಕಟೀಲ್ ಗೆ ಟಿಕೆಟ್ ಮಿಸ್ ಆದ ಎರಡು ದಿನದಲ್ಲಿ ಯಾವುದೇ ಜೊತೆ ಸದ್ದು ಗದ್ದಲವಿಲ್ಲದೆ, ಯಾವುದೇ ಕಂಡಿಷನ್ನು ಇಲ್ಲದೆ ಕಮಲ ಪಡೆ ಸೇರಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದರೆ ನಿಮಗೆ ಯಾರಿಗಾದರೂ ಇಲ್ಲಿ ಡೀಲ್ ನಡೆದಿಲ್ಲ ಅನ್ನಿಸುತ್ತಾ ?
ಇದನ್ನೂ ಓದಿ: ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನ, ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ !!
ಸದ್ಯಕ್ಕೆ ರಾಜ್ಯದಲ್ಲಿ ಒಂದು ಒಳ್ಳೆಯ ಜವಾಬ್ದಾರಿ ಪುತ್ತಿಲರಿಗೆ ಸಿಗಲಿದೆ. ಜತೆಗೆ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಪಟ್ಟ ಒಲಿಯಲಿದೆ. ಆ ಹುದ್ದೆಯನ್ನು ಈ ತನಕ ಭರ್ತಿ ಮಾಡದೆ ಖಾಲಿ ಇಟ್ಟದ್ದು ಅದೇ ಕಾರಣಕ್ಕೆ!
‘ನೀನು ಆತನನ್ನು ಮಲಗಿಸು, ನಾನು ನಿನ್ನನ್ನು ಎಬ್ಬಿಸುತ್ತೇನೆ ‘ ಎನ್ನುವುದೇ ಈ ದೊಡ್ಡ ಡೀಲ್. ಅದರಂತೆ ಕಟೀಲ್ ರನ್ನು ಯಶಸ್ವಿಯಾಗಿ ಮಲಗಿಸಲಾಗಿದೆ, ಪ್ರತಿಫಲವಾಗಿ ಅರುಣ್ ಕುಮಾರ್ ಪುತ್ತಿಲರಿಗೆ ಮಹತ್ವದ ಸ್ಥಾನಮಾನಗಳು ಲಭ್ಯವಾಗಲಿವೆ. ಕಳೆದ ಒಂದು ವರ್ಷದ ಉದ್ದಕ್ಕೂ ಪುತ್ತಿಲ ಪರಿವಾರ ಹಲವಾರು ಡೊನೇಷನ್ ಗಳನ್ನು ಮಾಡಿದೆ. ಅದರ ಹಿಂದಿನ ಪವರ್ ಯಾರು ಅನ್ನುವುದರ ಬಗ್ಗೆ ಕೊಂಚ ಯೋಚಿಸಿದರೆ ಅದು ಎಂಥ ದಡ್ಡನಿಗಾದರೂ ಅರ್ಥವಾಗದೆ ಇರದು.