Mangalore Lok sabha: ಮಂಗಳೂರು MP ಗೆ ಕಾಂಗ್ರೇಸ್ ಅಭ್ಯರ್ಥಿ ರೇಸಲ್ಲಿ ಉಳಿದವರು ಈ ಇಬ್ಬರೇ !! ವಿನಯ್ ಕುಮಾರ್ ಸೊರಕೆಗೆ ಸೀಟು ಸಿಕ್ರೆ ಗೆಲುವು ಕಷ್ಟ, ಕಾರಣ ಸೌಜನ್ಯ !!!

Mangalore Lok Sabha: ಮಂಗಳೂರು ಕಾಂಗ್ರೆಸ್ ನಲ್ಲಿ ಹಲವು ಪ್ರತಿ ಸ್ಪರ್ಧಿಗಳ ಮಧ್ಯೆ ಇದೀಗ ಕಾಂಗ್ರೆಸ್ (Congress) ನಿಂದ ಇಬ್ಬರು ಟಿಕೆಟ್ಗಾಗಿ ನೇರ ನೇರ ಸ್ಪರ್ಧೆಯಲ್ಲಿದ್ದಾರೆ. ಇದ್ದ ಐದಾರು ಅಭ್ಯರ್ಥಿಗಳ ಪೈಕಿ ಈಗ ಕಣದಲ್ಲಿ ಇಬ್ಬರು ಬಿ ಫಾರಂ ನ  ನಿರೀಕ್ಷೆಯಲ್ಲಿದ್ದಾರೆ. ರಮಾನಾಥ ರೈ,(Ramanatha Rai) ಕಿರಣ್ ಬುಡ್ಲೇಗುತ್ತು, ಮಿಥುನ್ ರೈ(Mithun Rai), ಪ್ರತಿಭಾ ಕುಳಾಯಿ (Pratibha Kulai) ಹೀಗೆ ಎಲ್ಲರೂ ಈಗ ತಮಗೆ ಟಿಕೆಟ್ ಸಿಗಲ್ಲ ಅನ್ನುವ ಬೇಸರದಲ್ಲಿರುವಾಗ 2 ಹೆಸರುಗಳು ಹೈಕಮಾoಡ್ ಅಂಗಳದಲ್ಲಿ ಭದ್ರವಾಗಿ ಕೂತು ಬಿಟ್ಟಿವೆ. ಅದು, ವಿನಯ್ ಕುಮಾರ್ ಸೊರಕೆ ಮತ್ತು ಪದ್ಮರಾಜ್ ! ಹೌದು ಈಗ ಕಾಂಗ್ರೆಸ್ಸಿನಿಂದ ಈ ಇಬ್ಬರು ಅಭ್ಯರ್ಥಿಗಳು ತೀವ್ರ ಹಣಾಹಣಿಯಿಂದ ಬಿ ಫಾರ್ಮ್ ಆಕಾಂಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Putturu Puttila Parivara: ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ನಿವೃತ್ತ, ಯಾವುದೇ ಸಂಘಟನೆ, ಪರಿವಾರದೊಂದಿಗೆ ನಾನಿಲ್ಲ- ರಾಜಾರಾಮ್‌ ಭಟ್‌ ಘೋಷಣೆ

ಈ ಸಾರಿ ಕರಾವಳಿಯಲ್ಲಿ ಬದಲಾದ ರಾಜಕೀಯ ಮತ್ತು ಸಾಮಾಜಿಕ ನಿತ್ಯಂತರಗಳ ಕಾರಣದಿಂದ ಕಾಂಗ್ರೆಸ್ ಜಯಗಳಿಸುವ ನಿಚ್ಚಳ ಸಾಧ್ಯತೆಗಳಿವೆ. ಮಂಗಳೂರಿನಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಇದ್ದರೂ ಕಾಂಗ್ರೆಸ್ ಈ ಬಾರಿ ಬಲ ಪಡೆದುಕೊಂಡಿದೆ. ಅದರಲ್ಲಿ, ಕಾಂಗ್ರೆಸ್ ನೀಡಿರುವ ಶ್ರೀ ಗ್ಯಾರಂಟಿ ಮಹಿಳೆಯರಿಗೆ ಕಾಂಗ್ರೆಸ್ ಕೊಟ್ಟಿರುವ ಸೌಲತ್ತುಗಳು ಮುಖ್ಯವಾದರೆ, ಇನ್ನೊಂದು ಸಾಮಾಜಿಕ ಪಿಡುಗಿನಂತೆ ಕರಾವಳಿಯನ್ನು ಕಾಡುತ್ತಿರುವ ವಿಷಯ ಇದೀಗ ಚುನಾವಣೆ ಸಬ್ಜೆಕ್ಟ್ ಆಗಿ ಹೊರಹೊಮ್ಮಿದೆ. ಅದುವೇ ಸೌಜನ್ಯ ಪ್ರಕರಣ.

ಇದನ್ನೂ ಓದಿ: CAA Rules: ಸಿಎಎ ಅನುಷ್ಠಾನಕ್ಕೆ ಬಂದ ಮರುದಿನವೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ IUML-DYFI ಸಂಘಟನೆ

ಎಲ್ಲರಿಗೂ ಗೊತ್ತಿದೆ: ಆಳುವ ಬಿಜೆಪಿ ಮತ್ತು ಕೆಲ ಹಿಂದೂ ಸಂಘಟನೆಗಳು ಅದ್ಯಾವ ರೀತಿ ಸೌಜನ್ಯ ಹೋರಾಟವನ್ನು ಒಂದಲ್ಲ ಒಂದು ರೀತಿಯಲ್ಲಿ ಹತ್ತಿಕ್ಕಲು ತುಳಿದು ಹಾಕಲು ಪ್ರಯತ್ನಿಸಿದೆ ಎಂದು. ಸೌಜನ್ಯ ವಿರೋಧಿ ಒಕ್ಕೂಟ ಹೋರಾಟದಲ್ಲಿ ಕಾಣಿಸಿಕೊಂಡಿರುವ ಬಿಜೆಪಿ ಮುಖಂಡರುಗಳು ಸೌಜನ್ಯ ಹೋರಾಟಗಾರರ ನೇರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೌಜನ್ಯಳಿಗೆ ನ್ಯಾಯ ಸಿಗಬೇಕು ಮತ್ತು ಧರ್ಮಸ್ಥಳ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ನೂರಾರು ಕೊಲೆಗಳಿಗೆ ಅಂತ್ಯ ಹಾಡಬೇಕು ಎಂದು ಕಂಕಣ ಬದ್ಧವಾಗಿ ಹೊರಟಿರುವ ಸೌಜನ್ಯ ಹೋರಾಟ ಬೆಂಬಲಿತ ಜನರ ಸಂಖ್ಯೆ ದೊಡ್ಡದಿದೆ. ಯಾವುದೇ ಹಳ್ಳಿ ಯಾವುದೇ ಊರು ಯಾವುದೇ ಗ್ರಾಮದಲ್ಲಿ ಒಂದು ಸಭೆ ನಡೆಯಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ. ಮುಖ್ಯವಾಗಿ ಮಹಿಳೆಯರು ಈ ಸಲ ಸೌಜನ್ಯಳಿಗೆ ನ್ಯಾಯ ಕೊಡಿಸಲೇಬೇಕೆಂದು ಹಠ ತೊಟ್ಟು ಕೂತಂತಿದೆ.

ಹಾಗಾಗಿ ಸೌಜನ್ಯ ಪ್ರಕರಣ ಕೂಡ ಈ ಸಲದ ಚುನಾವಣಾ ಸಬ್ಜೆಕ್ಟ್. ಕನಿಷ್ಠ ಪಕ್ಷ ಏಳು ಲಕ್ಷದಷ್ಟು ಜನರು ಸೌಜನ್ಯ ಪ್ರತಿಭಟನೆಗಳಲ್ಲಿ ಆಕ್ಟಿವ್ ಆಗಿ ಪಾಲ್ಗೊಂಡಿದ್ದಾರೆ. ಜನಮಾನಸದಲ್ಲಿ ಕೊಲೆಗಾರರು ಯಾರು ಅವರನ್ನು ರಕ್ಷಿಸುತ್ತಿರುವವರು ಯಾರು ಎನ್ನುವ ಬಗ್ಗೆ ಯಾವುದೇ ಅನುಮಾನಗಳಿಲ್ಲದೆ ಹೋರಾಟ ಪ್ರಕ್ರಿಯೆ ಸಾಗಿದೆ. ಇಂತಹ ಸಂದರ್ಭಗಳಲ್ಲಿ ಬಿಜೆಪಿಗೆ ಬದಲಿಯಾಗಿ ಒಂದು ಪಕ್ಷವನ್ನು ಅಥವಾ ಒಂದು ವ್ಯಕ್ತಿಯನ್ನು ಕರಾವಳಿ ಮಂಗಳೂರಿನ ಜನತೆ ಎದುರು ನೋಡುತ್ತಿದ್ದಾರೆ. ಆಗ ಕಂಡು ಬರುವ ಪಕ್ಷ ಕಾಂಗ್ರೆಸ್ ಮತ್ತು ಇದೀಗ ಅದರಲ್ಲಿ ಇರುವ ಎರಡು ಅಭ್ಯರ್ಥಿಗಳಾದ ವಿನಯ್ ಕುಮಾರ್ ಸೊರಕೆ ಮತ್ತು ಪದ್ಮರಾಜ್ !!

ಪದ್ಮರಾಜ್‌

 

ಆದರೆ ವಿನಯ್ ಕುಮಾರ್ ಸೊರಕೆ ಅವರು ಈಗಾಗಲೇ ಧರ್ಮಸ್ಥಳದ ವೇದಿಕೆಗಳಲ್ಲಿ ಕಾಣಿಸಿಕೊಂಡು ಸೌಜನ್ಯ ಹೋರಾಟಗಾರರ ಅವಕೃಪೆಗೆ ಪಾತ್ರರಾಗಿದ್ದಾರೆ.
ಅವತ್ತು, ಆಗಸ್ಟ್ 4, 2023 ರಂದು ಉಜಿರೆಯಲ್ಲಿ ಪಕ್ಷ ಭೇದ ಮರೆತು ರಾಜಕೀಯ ಪಕ್ಷದವರು ಹೀನ ಮಿಲನ ಆಗಿದ್ದರು. ಅವತ್ತು ”ಎಲ್ಲರೂ ಹೆಗ್ಗಡೆಯವರ ಜೊತೆಗಿದ್ದೇವೆ” ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಹೇಳಿದ್ದರು. ಅವರ ಈ ಸ್ಟೇಟ್ ಮೆಂಟ್ ಇದೀಗ ಸೊರಕೆಯವರಿಗೆ ಹಿನ್ನಡೆ ಆಗೋದು ಖಂಡಿತ.

ವೀ ಹೆಗ್ಗಡೆ ಬೆಂಬಲಿಸಿದ ಸಭೆಯಲ್ಲಿ ಸೊರಕೆ

 

ಇದೀಗ, ಸೌಜನ್ಯ ಹೋರಾಟದಲ್ಲಿ ಭಾಗವಹಿಸುತ್ತಿರುವ ಸಾಮಾನ್ಯ ಮತದಾರರು ಸೌಜನ್ಯ ಪ್ರಕರಣವನ್ನು ಬೆಂಬಲಿಸುವ ವ್ಯಕ್ತಿಯೊಬ್ಬರ ನಿರೀಕ್ಷೆಯಲ್ಲಿದ್ದಾರೆ. ಆ ಮುಖ ಬಿಜೆಪಿಯಲ್ಲಿ ಕಾಣುವುದು ಕನಸಿನ ಮಾತು. ಹಾಗಾಗಿ ಕಾಂಗ್ರೆಸ್ ನ ಕಡೆ ಆಸೆಯ ಕಣ್ಣುಗಳಿಂದ ಜನ ನೋಡುತ್ತಿದ್ದಾರೆ. ಆದರೆ ಸೊರಕೆ ಬಗ್ಗೆ ಜನರಿಗೆ ಅನುಮಾನ ಇರುವ ಕಾರಣದಿಂದ, ನ್ಯೂಟ್ರಲ್ ಆಗಿರುವ ಪದ್ಮರಾಜ್ ಒಳ್ಳೆಯ ಅಭ್ಯರ್ಥಿಯಾಗಬಲ್ಲರು. ಕಾಂಗ್ರೆಸ್ ಈ ಸಲ ವಿಶೇಷವಾಗಿ ಯೋಚಿಸಬೇಕು: ತನ್ನ ಸ್ಪರ್ಧಿಯನ್ನು ಸೋಲಿಸಲು ಮತ್ತು ಸೌಜನ್ಯ ಹೋರಾಟದ ಕಿಚ್ಚನ್ನು ಮತಗಳಾಗಿ ಕನ್ವರ್ಟ್ ಮಾಡುವ ಮನಸ್ಸು ಕಾಂಗ್ರೆಸ್ಸ್ ಗೆ ಇದ್ದರೆ, ಪದ್ಮರಾಜ್ ಉತ್ತಮ ಆಯ್ಕೆಯಾಗಬಲ್ಲರು. ನಮಗೆ ಬೇಕಿರುವುದು ಲೋಕಸಭೆಯಲ್ಲಿ ಸೌಜನ್ಯ ಪ್ರಕರಣವನ್ನು ಗಟ್ಟಿ ದನಿಯಲ್ಲಿ ಪ್ರಸ್ತಾಪಿಸುವ ಮುಖ. ಕಾಂಗ್ರೆಸ್ಸ್ ನಿಂದ ಅದು ಸಾಧ್ಯ ಆಗುತ್ತೆ ಅನ್ನೋ ಆಶಾಭಾವನೆ ಈ ಸಲ ಮಂಗಳೂರು ಲೋಕಸಭಾ ಮತದಾರರಲ್ಲಿದೆ. ಮುಂದೇನಾಗುತ್ತದೆ ಎಂದು ಹೆಚ್ಚು ದಿನ ಕಾದು ನೋಡಬೇಕಿಲ್ಲ. ಇನ್ನೆರಡು ದಿನಗಳಲ್ಲಿ ಟಿಕೆಟ್ ಹಂಚಿಕೆ ಬೆಳವಣಿಗೆ ನಡೆಯುವುದು ಪಕ್ಕಾ. ಬಡವರ ಪಕ್ಷ, ದಲಿತರ ಪಕ್ಷ, ನೊಂದವರ ಪಕ್ಷ ಅಂತ ಹೇಳಿ ಕೊಂಡು ಬರುತ್ತಿರುವ ಕಾಂಗ್ರೆಸ್ ಜ್ವಲಂತ ಸಮಸ್ಯೆಯೊಂದಕ್ಕೆ ತುರ್ತಾಗಿ ಸ್ಪಂದಿಸಬೇಕಿದೆ.

ಉಜಿರೆಯ ಆಗಸ್ಟ್ 4, 2023 ರ ಸಭಾ ಚಿತ್ರ

Leave A Reply

Your email address will not be published.