Lokasabha election: ಪ್ರತಾಪ್ ಸಿಂಹ, ಯದುವೀರ್ ಬಿಟ್ಟು ಬೇರೆ ಅಭ್ಯರ್ಥಿಯತ್ತ ಗಮನ ಹರಿಸಿದ ಹೈಕಮಾಂಡ್!!
Lokasabha election ಗೆ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆ ಕಸರತ್ತು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಈ ನಡುವೆ ರಾಜ್ಯದ ಭಾರೀ ಪ್ರಮುಖ ಕ್ಷೇತ್ರವಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳು ನಡೆಯುತ್ತಿವೆ.
ಇದನ್ನೂ ಓದಿ: Sara Tendulkar: ಕಪ್ಪುವರ್ಣದ ಗೌನ್ ನಲ್ಲಿ ಮಿಂಚಿದ ಸಾರಾ ತೆಂಡೂಲ್ಕರ್
ಮೈಸೂರು-ಕೊಡಗು(Mysore-Kodagu)ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು ಮೈಸೂರು ಒಡೆಯ ಯದುವೀರ್ ಅವರಿಗೆ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ. ಆದರೆ ಈ ನಡುವೆ ಮತ್ತೊಂದು ಅಚ್ಚರಿ ಬೆಳವಣಿಗೆ ನಡೆದಿದ್ದು ಇಬ್ಬರಲ್ಲಿ ಯಾರಾ ಪಾಲಾಗುತ್ತದೆ ಎನ್ನುವ ಲೆಕ್ಕಚಾರದ ಮಧ್ಯೆ ಬಿಜೆಪಿ ಟಿಕೆಟ್ ಗೊಂದಲದಲ್ಲಿ ಮತ್ತೊಬ್ಬರ ಹೆಸರು ಪ್ರವೇಶವಾಗಿದೆ ಎನ್ನುವ ಇಂಟ್ರಸ್ಟಿಂಗ್ ವಿಚಾರ ಹೊರಬಿದ್ದಿದೆ.
ಹೌದು, ಪ್ರತಾಪ್ ಸಿಂಹಗೆ (Pratap Simha) ಟಿಕೆಟ್ ಅನುಮಾನ ಎನ್ನುತ್ತಿದ್ದಂತೆ ತಂತ್ರಗಳ ಮೇಲೆ ತಂತ್ರ ನಡೆಯುತ್ತಿದ್ದು, ಯದುವೀರ್ ಒಡೆಯರ್ (Yaduveer Wodeyar) ಒಪ್ಪದಿದ್ರೆ ಮತ್ಯಾರು? ಪ್ರತಾಪ್ ಸಿಂಹ ಬದಲಾವಣೆಯೋ? ಮತ್ತೊಬ್ಬರ ಅಚ್ಚರಿ ಎಂಟ್ರಿಯೋ ಎಂಬ ಚರ್ಚೆ ಶುರುವಾಗಿದೆ. ಮೈಸೂರು ಬಿಜೆಪಿ ಅಭ್ಯರ್ಥಿ ರೇಸ್‌ನಲ್ಲಿ ಬಿಜೆಪಿ ಹೈಕಮಾಂಡ್ (BJP High Command) ಮತ್ತೊಬ್ಬ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದು ಅಮಿತ್ ಶಾ (amit shah) ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಒಕ್ಕಲಿಗ ಸಮುದಾಯದ ಹಾಗೂ ಆರ್‌ಎಸ್‌ಎಸ್‌ನ ನಿಷ್ಠ ಅಭ್ಯರ್ಥಿ ಬಗ್ಗೆ ಒಂದೇ ದಿನದಲ್ಲಿ ಸರ್ವೇ ನಡೆಸಿ ವರದಿ ಕಲೆ ಹಾಕಿರುವ ಬಿಜೆಪಿ ಹೈಕಮಾಂಡ್ ಮೂರು ಹೆಸರುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಮೈಸೂರು ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಗಳಿಗೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.