Yashwanth guruji: ಈ ಸಲ ಮೋದಿಗಿಲ್ಲ ಪ್ರಧಾನಿ ಪಟ್ಟ, ಈ ಮಹಿಳೆ ಕೈ ಸೇರಲಿದೆ ದೇಶದ ಅಧಿಕಾರ !! ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ

Yashwanth guruji: ಲೋಕಸಭಾ ಚುನಾವಣೆ(Lokasabha election)ಹತ್ತಿರಾಗುತ್ತಿದ್ದಂತೆ ಇಡೀ ದೇಶವೇ ಮೋದಿಯೇ ಪ್ರಧಾನಿ ಎಂದು ಹೇಳುತ್ತಿದೆ. ಅನೇಕ ಸಮೀಕ್ಷೆಗಳು ಕೂಡ ಬಿಜೆಪಿ ಹ್ಯಾಟ್ರಿಕ್ ಭಾರಿಸೋದು ಪಕ್ಕಾ ಎನ್ನುತ್ತಿವೆ. ಈ ನಡುವೆಯೇ ತುಮಕೂರಿನ ಯಶವಂತ್ ಗುರೂಜಿ ಅವರು ಸ್ಪೋಟಕ ಭವಿಷ್ಯ ನುಡಿದಿದ್ದು, ಮೋದಿ ಪ್ರಧಾನಿ(PM Modi) ಆಗಲು ಸಾಧ್ಯವಿಲ್ಲ. ಈ ಸಲ ಮಹಿಳೆ ಕೈಗೆ ದೇಶದ ಅಧಿಕಾರ ಹೋಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 

 

ಹೌದು, ತಿಪಟೂರು(Tipatiru) ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ (Yashwanth Guruji) ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ದೇಶದ ಚುಕ್ಕಾಣಿಯನ್ನು ಕಾಂಗ್ರೆಸ್ (Congress) ಪಕ್ಷ ಹಿಡಿಯಲಿದ್ದು ದೇಶದ ಪ್ರಧಾನಿ ಒಬ್ಬ ಮಹಿಳೆ ಆಗಲಿದ್ದಾರೆ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

 

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಕಾಲಜ್ಞಾನದ ಪ್ರಕಾರ ಪ್ರಧಾನಿಯಾಗೋ ಯೋಗ ಹೊಂದಿರೋದು ಪ್ರಿಯಾಂಕ ಗಾಂಧಿ(Priyanka gandhi) ಅವರು. ಬಳಿಕ ರಾಹುಲ್ ಗಾಂಧಿಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೇ ಮೋದಿ ಅವರಿಗೆ ಪ್ರಧಾನಿಯಾಗೋ ಯೋಗವಿತ್ತು. ಆದರೇ ಈಗ ಮೋದಿ ಅವರಿಗೆ ಆ ಯೋಗ ಇಲ್ಲ. ಅವರಿಗೆ ಅನಾರೋಗ್ಯ ಕಾಡಬಹುದು ಎಂದು ಅಚ್ಚರಿ ಮೂಡಿಸಿದ್ದಾರೆ.

 

ಇನ್ನು ಈ ಮೊದಲು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್(Congress)135 ಸೀಟು ಪಡೆಯಲಿದೆ ಎಂದು‌ ಯಶ್ವಂತ ಗುರೂಜಿ ನಿಖರ ಭವಿಷ್ಯ ನುಡಿದಿದ್ದರು. ಅಲ್ಲದೆ ಕೊರೊನಾ ಮಹಾಮಾರಿ ಬರುವ ಬಗ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದರು. ಸದ್ಯ ಈಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ :  ಬಾಲ ಮಂಜುನಾಥ ಸ್ವಾಮಿಯಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣಕ್ಕೆ ಸಾಕ್ತು ರೋಚಕ ಟ್ವಿಸ್ಟ್ !!

Leave A Reply

Your email address will not be published.