Lok Sabha Elections:ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯೆಲ್ ಹಠಾತ್ ರಾಜೀನಾಮೆ : ಅಸಲಿಗೆ ಇದರ ಹಿಂದಿದೆಯ ರಾಜಕೀಯ ಕೈವಾಡ ?

Lok Sabha Elections:ಇನ್ನೇನು ಕೆಲವೇ ದಿನಗಳಲ್ಲಿ 2024ರ ಲೋಕಸಭಾ ಚುನಾವಣೆಯ(Lok Sabha Elections) ವೇಳಾಪಟ್ಟಿಯನ್ನು ಘೋಷಿಸುವ ಕೆಲವು ದಿನಗಳ ಮೊದಲೇ ಅರುಣ್ ಗೋಯೆಲ್ ಅವರು ಚುನಾವಣಾ ಆಯುಕ್ತರಾಗಿ ಹಠಾತ್ ರಾಜೀನಾಮೆ ನೀಡಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.

 

ಈ ನಡುವೆ ಗೋಯೆಲ್ ಅವರ ರಾಜೀನಾಮೆ ನೀಡಿರುವ ಕುರಿತು ಕಾಂಗ್ರೆಸ್ ಪಕ್ಷವು, ಬಿಜೆಪಿ ಸರ್ಕಾರವು “ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಎಂದಿಗೂ ಬಯಸುವುದಿಲ್ಲ ಎಂದು ಹೇಳಿಕೊಂಡಿದೆ.

 

ಅರುಣ್ ಗೋಯೆಲ್ ಅವರ ಅಧಿಕಾರಾವಧಿಯು 2027ರ ನವೆಂಬರ್ ವರೆಗೆ ಇತ್ತು ಮತ್ತು ಅವರು 2025ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗಬೇಕಿತ್ತು

 

ಚುನಾವಣಾ ಆಯುಕ್ತರಾಗಿದ್ದ ಅನುಪ್ ಚಂದ್ರ ಪಾಂಡೆ ಅವರು ಕಳೆದ ತಿಂಗಳು ಕಮಿಷನರ್ ಆಗಿ ನಿವೃತ್ತರಾಗಿದ್ದು, ಇದೀಗ ಗೋಯಲ್ ಅವರ ಪದ ತ್ಯಾಗದಿಂದಾಗಿ ಮೂರು ಸದಸ್ಯರ ಭಾರತೀಯ ಚುನಾವಣಾ ಆಯೋಗದಲ್ಲಿ ರಾಜೀವ್ ಕುಮಾರ್‌ ಒಬ್ಬರೇ ಉಳಿದುಕೊಂಡಂತಾಗಿದೆ.

 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುರಿತು ಪ್ರತಿಕ್ರಿಯಿಸಿದ್ದು, “ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗಳನ್ನು ಘೋಷಿಸಬೇಕಾಗಿದ್ದರೂ, ಭಾರತದಲ್ಲಿ ಈಗ ಕೇವಲ ಒಬ್ಬ ಚುನಾವಣಾ ಆಯುಕ್ತರಿದ್ದಾರೆ ಏಕೆ? ” ಇದು ನಮ್ಮ ಸ್ವತಂತ್ರ ಸಂಸ್ಥೆಗಳ ವ್ಯವಸ್ಥಿತ ನಾಶ” ಎಂದು ತಿಳಿಸಿದ್ದಾರೆ.

 

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ, ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸಮಿತಿಗೆ ಎರಡು ನೇಮಕಾತಿಗಳನ್ನು ಮಾಡುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.

 

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯನ್ನು ಉಲ್ಲೇಖಿಸಿದ ಅವರು, “ಮೋದಿ ಸರ್ಕಾರವು ಹೊಸ ಕಾನೂನನ್ನು ಪರಿಚಯಿಸಿದ್ದು, ಅಲ್ಲಿ ಈಗ ಪ್ರಧಾನಿ ಮೋದಿಯವರ ಬಹುಮತದೊಂದಿಗೆ ಮತ್ತು ಅವರು ಆಯ್ಕೆ ಮಾಡಿದ ಒಬ್ಬ ಸಚಿವರೊಂದಿಗೆ ಚುನಾವಣಾ ಆಯುಕ್ತರನ್ನು ನೇಮಿಸಲಾಗುತ್ತದೆ” ಎಂದು ಹೇಳಿದರು.

 

ಈ ಮುಂಚೆ ಚುನಾವಣಾ ಆಯುಕ್ತರಾಗಿ ಗೋಯೆಲ್ ಅವರ ನೇಮಕವೂ ವಿವಾದದಲ್ಲಿ ಸಿಲುಕಿತ್ತು. ಅವರು 2022ರ ನವೆಂಬರ್ 18ರಂದು ಭಾರತೀಯ ಆಡಳಿತಾತ್ಮಕ ಸೇವೆಗಳಿಂದ (ಐಎಎಸ್) ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದರು. ಅವರು 2022ರ ಡಿಸೆಂಬರ್ 31ರಂದು ನಿವೃತ್ತರಾಗಬೇಕಿತ್ತು. ಗೋಯೆಲ್ ಅವರು ನಿವೃತ್ತಿಯ ಸಮಯದಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

 

ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವುದು ಚುನಾವಣಾ ಆಯೋಗದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ :ಈ ಸಲ ಮೋದಿಗಿಲ್ಲ ಪ್ರಧಾನಿ ಪಟ್ಟ, ಈ ಮಹಿಳೆ ಕೈ ಸೇರಲಿದೆ ದೇಶದ ಅಧಿಕಾರ !! ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ

Leave A Reply

Your email address will not be published.