Home News Bala manjunatha swamy: ಬಾಲ ಮಂಜುನಾಥ ಸ್ವಾಮಿಯಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣಕ್ಕೆ...

Bala manjunatha swamy: ಬಾಲ ಮಂಜುನಾಥ ಸ್ವಾಮಿಯಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್ !!

Hindu neighbor gifts plot of land

Hindu neighbour gifts land to Muslim journalist

Bala manjunatha swamy: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ(Bala manjunatha swamy) ಅವರನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

 

ಇಂತಹ ವಿಚಾರಗಳನ್ನು ಹೇಳಲು, ಸುದ್ದಿ ಮಾಡಲು ಕೂಡ ಬೇಸರವಾಗುತ್ತದೆ. ಸಮಾಜವನ್ನು ಕಾಯುವ, ರಕ್ಷಿಸುವ, ಎಲ್ಲರನ್ನು ಸಲಹುವ ಪೀಠಾಧಿಪತಿಗಳು ಇಂತಹ ನೀಚ ಕೃತ್ಯ ಮಾಡುತ್ತಾರೆಂದರೆ ಅದು ಇಡೀ ಸಮಾಜಕ್ಕೆ ನಾಚಿಕೆಗೇಡು. ಇರಲಿ, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವಾಮೀಜಿ ಏನೋ ಮಾಡಲು ಹೋಗಿ ಏನೇನೋ ಮಾಡಿಕೊಂಡುಬಿಟ್ಟಿದ್ದಾರೆ. ಅವರ ಜೊತೆಯಲ್ಲೇ ಇದ್ದವರು ಅವರ ಬಂಡವಾಳ ಬಯಲು ಮಾಡಿದ್ದಾರೆ.

 

ಹೌದು, ಚರ್ಮರೋಗಕ್ಕೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಿಡಿಯೊ ರೆಕಾರ್ಡ್ ಮಾಡಿ ಬ್ಲಾಕ್ ಮೇಲೆ ಮಾಡಿರುವುದಾಗಿ ಸ್ವಾಮೀಜಿ ಸೇವಕ ಅಭಿಷೇಕ್(Abhishek) ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಇದರ ಹಿಂದಿನ ವಿಚಾರವೇ ಬೇರೆ. ಒಂದೇ ಒಂದು ವಿಡಿಯೋ ಇವತ್ತು ಈ ಸ್ವಾಮೀಜಿಯನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಫೋಕ್ಸೋ ಕಾಯ್ದೆಯಡಿ ಸದ್ಯ ಬಾಲ ಮಂಜುನಾಥ ಸ್ವಾಮಿ ಮತ್ತು ಆತನ ಶಿಷ್ಯ ಅರೆಸ್ಟ್ ಆಗಿದ್ದಾರೆ.

 

ತಿರುಗು ಬಾಣವಾದ ದೂರು

ಬಾಲ ಮಂಜುನಾಥ ಸ್ವಾಮಿ ವಿಷಯದಲ್ಲಿಅವರೇ ಕೊಡಿಸಿದ್ದ ದೂರು ತಿರುಗುಬಾಣವಾಗಿ ಕಂಬಿ ಎಣಿಸುವಂತಾಗಿದೆ. ”ಗುಪ್ತಾಂಗದ ಚರ್ಮರೋಗದ ಬಗ್ಗೆ ತಿಳಿದು ಚಿಕಿತ್ಸೆ ನೀಡುವಂತೆ ವಿಡಿಯೋ, ಫೋಟೋ ಹಾಗೂ ವಿಡಿಯೋ ಕರೆಯ ರೆಕಾರ್ಡ್‌ ತರಿಸಿಕೊಂಡು ಸ್ವಾಮೀಜಿಯ ಮಾಜಿ ಆಪ್ತ ಸಹಾಯಕ ಎಚ್‌.ಎಸ್‌.ಅಭಿಷೇಕ್‌ ಮತ್ತು ಸಂಗಡಿಗರು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ” ಎಂದು ಸ್ವಾಮೀಜಿ ಪರವಾಗಿ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನದ ಟ್ರಸ್ಟಿ ಕೆ.ಅಭಿಲಾಷ್‌ ಫೆ.10ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿದೂರು ನೀಡಿದ್ದರು. ಅಭಿಷೇಕ್‌, ಬೆಂಗಳೂರಿನ ಓರ್ವ ಯುವತಿ, ರಾಜೇಶ್‌, ಚೇತನ್‌, ನಂದೀಶ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು.

 

ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಸ್ವಾಮೀಜಿಯ ಅಸಲಿ ಮುಖದ ಪರಿಚಯವಾಗಿದ್ದು, ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿಪೋಕ್ಸೊ ಕಾಯಿದೆಯಡಿ ಪೊಲೀಸರು ಗುರುವಾರ ತಡರಾತ್ರಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ.

 

ನಿಜಾಂಶ ಏನು?

ಈ ಪ್ರಕರಣ ನಡೆದಿದ್ದು 2017ರಲ್ಲಿ. ಆದ್ರೆ ಈಗ ಬೆಳಕಿಗೆ ಬಂದಿದ್ದೇಗೆ ಅನ್ನೋದೇ ಯಕ್ಷ ಪ್ರಶ್ನೆ. ಆದರೆ ಇಲ್ಲಿ ಬಾಲ ಮಂಜುನಾಥ ಸ್ವಾಮಿ ತಾವಾಗೇ ಹೋಗಿ ಟ್ರ್ಯಾಪ್ ಆಗಿದ್ದಾರೆ. ತಮಗಿದ್ದ ಗುಪ್ತಾಂಗದ ರೋಗದ ಟ್ರೀಟ್‌ಮೆಂಟ್‌ಗಾಗಿ ವೈದ್ಯರನ್ನ ತಮ್ಮ ಪಿ.ಎ ಮೂಲಕ ಸಂಪರ್ಕಿಸಿದ್ರು. ಆದ್ರೆ ಈ ವೇಳೆ ಪಿ.ಎ ಡಾಕ್ಟರ್ ಜೊತೆ ಸೇರಿಕೊಂಡು ಸ್ವಾಮೀಜಿಯ ವಿಡಿಯೋವನ್ನ ರೆಕಾರ್ಡ್ ಮಾಡಿದ್ರು. ದುಡ್ಡಿಗೆ ಬೇಡಿಕೆ ಇಟ್ಟರು. ಆದ್ರೆ ಕೊಡುವಷ್ಟು ಕೊಟ್ಟಿದ್ದ ಸ್ವಾಮಿ ನಂತರ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದರು. ಆದ್ರೆ ಯಾವಾಗ ಬ್ಲ್ಯಾಕ್‌ಮೇಲರ್‌ಗಳನ್ನ ಎತ್ತಾಕೊಂಡು ಬಂದು ವರ್ಕ್ ಮಾಡಿದ್ರೋ ಸ್ವಾಮಿಯ ಕರ್ಮಕಾಂಡ ಕೂಡ ಬಯಲಿಗೆ ಬಂದಿತ್ತು. ಏನೆಂದರೆ ಪರಿಹಾರ ನೆಪದಲ್ಲಿ ಲೈಂಗಿಕ ದೌರ್ಜನ್ಯ ನೀಡಿದ್ದರು ಈ ಸ್ವಾಮಿ. ಇದೆಲ್ಲವೂ ಈಗ ಬಯಲಾಗಿದೆ.

ಇದನ್ನೂ ಓದಿ : Deadly Accident: ಮಗನಿಗೆ ಹುಡುಗಿ ನೋಡಲೆಂದು ಹೋದವರು ಮಸಣಕ್ಕೆ; ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ಡಿಕ್ಕಿ, ಒಂದೇ ಕುಟುಂಬದ ಆರು ಮಂದಿ ಸಾವು; ಮೂವರಿಗೆ ಗಂಭೀರ ಗಾಯ