Rahul gandhi: ಲೋಕಸಭಾ ಚುನಾವಣೆಗೆ 5 ಹೊಸ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ!!

Rahul gandhi: ಲೋಕಸಭಾ ಚುನಾವಣೆ ಕಾವು ಸದ್ದಿಲ್ಲದೆ ಕಾವೇರುತ್ತಿದೆ. ಈಗಾಗಲೆ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ರಣಕಹಳೆ ಊದಿವೆ. ಸಮೀಕ್ಷೆಗಳೂ ಬಿಡುಗಡೆಯಾಗುತ್ತಿವೆ. ಈ ನಡುವೆ ಸಿಎಂ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ(Rahul Gandhi) ಅವರು 5 ಹೊಸ ಗ್ಯಾರಂಟಿ ಘೋಷಿಸಿದ್ದಾರೆ.

 

ಹೌದು, ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಡಿಪ್ಲೊಮಾ ಪದವೀಧರರಿಗೆ ಶಿಷ್ಯವೇತನ ಗಿಗ್‌ ಕಾರ್ಮಿಕರ ಭದ್ರತೆಗೆ ಕಾನೂನು ಸೇರಿದಂತೆ ವಿವಿಧ ಗ್ಯಾರಂಟಿಗಳನ್ನು ನೀಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ತಿಳಿಸಿದ್ದಾರೆ.

Leave A Reply

Your email address will not be published.