Namaz in Metro Station: ಮೆಟ್ರೋ ನಿಲ್ದಾಣದ ಬಳಿ ನಮಾಜ್ ಮಾಡುತ್ತಿದ್ದ ವರನ್ನು ಒದ್ದ ಪೊಲೀಸ್ ಅಮಾನತು

Namaz in Metro Station: ಮೆಟ್ರೋ ನಿಲ್ದಾಣದ ಬಳಿ ನಮಾಜ್ ಮಾಡುತ್ತಿದ್ದ ವರನ್ನು ಒದ್ದ ಪೋಲಿಸ್ ಅಮಾನತು

 

ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಪೊಲೀಸ್‌ ಅಧಿಕಾರಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ದೆಹಲಿಯ ಇಂದ್ರಲೋಕ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಅನುಚಿತ ವರ್ತನೆ ತೋರಿದರು ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರನ್ನು ಸರ್ಕಾರ ಅಮಾನತ್ತು ಮಾಡಿದೆ.

ದೆಹಲಿಯ ಇಂದ್ರಲೋಕ ಮೆಟ್ರೊ ನಿಲ್ದಾಣದ ಹತ್ತಿರ ಶುಕ್ರವಾರ ನಮಾಜ್ ಮಾಡುತ್ತಿದ್ದ ಕೆಲವರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಇಬ್ಬರಿಗೆ ಒದೆಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯ ನಂತರ ಮುಸ್ಲಿಂ ಗುಂಪು ಗದ್ದಲ ಸೃಷ್ಟಿಸಿ ರಸ್ತೆ ತಡೆ ಹಿಡಿದಿದ್ದಾರೆ. ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಘಟನೆ ನಡೆದ ಕೂಡಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಉತ್ತರ ಡಿಸಿಪಿ ಮನೋಜ್ ಮೀನಾ ಹೇಳಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಪೊಲೀಸರನ್ನು ಅಮಾನತು ಮಾಡಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.