Lokasabha election: ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ?

Lokasabha election ಗೆ ಕಾಂಗ್ರೆಸ್ 39 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ(Karnataka) 7 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಆಗಿದೆ. ಈ ಬೆನ್ನಲ್ಲೇ ಇನ್ನುಳಿದ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಅಲರ್ಟ್ ಆಗಿದ್ದಾರೆ. ಇದೀಗ ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರವಾದ ದ.ಕ(Dakshina kannada) ಲೋಕಸಭಾ(Lokasabha election) ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆ, ಕುತೂಹಲ ಎದುರಾಗಿದೆ.

ಹೌದು, ದಕ್ಷಿಣ ಕನ್ನಡ ಕಾಂಗ್ರೆಸ್‌ (Congress)ಪಾಳೆಯದಲ್ಲಿ ಈ ಬಾರಿ ತೀರ ಫೈಟ್‌ ಇಲ್ಲದಿದ್ದರೂ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಗರಿಗೆದರಿದೆ. ಮಾಜಿ ಸಚಿವ ರಮಾನಾಥ ರೈ (Ramanatha rai)ಹೆಸರು ಮುಂಚೂಣಿಯಲ್ಲಿದ್ದು, ಇನ್ನೋರ್ವ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ(Vinay kumar sorake), ಕಿರಣ್ ಗೌಡ ಬು ಡ್ಲೆಗುತ್ತು, ಯುವಕ ಪದ್ಮರಾಜ್‌ ಆರ್‌ (Padmaraj R) ಹೆಸರೂ ಕೇಳಿಬರುತ್ತಿದೆ. ಆರಂಭದಲ್ಲಿ ಯುವ ನಾಯಕ ಮಿಥುನ್ ರೈ ಹೆಸರು ಕೇಳಿ ಬಂದರೂ ವಿಧಾನಸಭೆ(Vidhanasabhe) ಚುನಾವಣೆ ಬಳಿಕ ಅವರ ಚಟುವಟಿಕೆಗಳು ಏನೂ ಇಲ್ಲದಾಗಿದೆ. ಹಾಗಿದ್ದರೆ ಕರಾವಳಿ ‘ಕೈ’ ಟಿಕೆಟ್ ಯಾರಿಗಿರಬಹುದು ನೋಡೋಣ ಬನ್ನಿ.

 

ಅಂದ ಹಾಗೆ ಇದೀಗ ಹೈಕಮಾಂಡ್‌ ಎದುರು ಈಗ ಮೂವರು ಮುಖಂಡರ ಹೆಸರು ಬಂದಿದೆ. ಅತಿ ಶೀಘ್ರದಲ್ಲಿ ಘೋಷಣೆಯಾಗುವ ನಿರೀಕ್ಷೆಯೂ ಇದೆ. ಅದುವೇ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ ಹಾಗೂ ಯುವ ನಾಯಕ ಪದ್ಮರಾಜ್‌ ಆರ್‌ ಅವರದ್ದು. ಅಂದರೆ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಚುನಾವಣಾ ವೀಕ್ಷಕ ಮಧು ಬಂಗಾರಪ್ಪ ಅವರು ಪಕ್ಷದ ಮುಖಂಡರು, ಮುಂಚೂಣಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದರು. ಈ ವೇಳೆ ಬಹುತೇಕ ಕಾರ್ಯಕರ್ತರು ರಮಾನಾಥ ರೈ ಅವರನ್ನು ಸೂಚಿಸಿದ್ದರು. ಉಳಿದಂತೆ ಸೊರಕೆ, ಹರೀಶ್‌ ಕುಮಾರ್‌, ಕಿರಣ್ಪ ಗೌಡ,  ಪದ್ಮರಾಜ್‌, ಇನಾಯತ್‌ ಆಲಿ, ಇಫ್ತೀಕರ್‌ ಅಲಿ, ವಿವೇಕ್‌ರಾಜ್‌ ಪೂಜಾರಿ ಹೆಸರನ್ನೂ ಬೆಂಬಲಿಗರು ಸೂಚಿಸಿದ್ದರು. ಇವರಲ್ಲಿ ಮೂವರ ಹೆಸರನ್ನು ಹೈಕಮಾಂಡ್ ಅಂಗಳಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

 

ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ-ಕಾಂಗ್ರೆಸ್ ಗೆ ಲಾಭ:

ಒಂದು ವೇಳೆ ಅರುಣ್ ಕುಮಾರ್ ಪುತ್ತಿಲರು ಪಕ್ಷೇತರವಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಗೆಲುವು 80% ನಿಶ್ಚಿತ. ಯಾಕೆಂದರೆ ಪುತ್ತಿಲರು ಕಟ್ಟಾ ಹಿಂದುತ್ವವಾದಿ. ಆ ಹಿನ್ನೆಲೆಯಲ್ಲಿ ಮತ ಕೇಳುತ್ತಾರೆ. ಬಿಜೆಪಿಯೂ ಹಿಂದುತ್ವದ ಆಧಾರದಲ್ಲಿ ರಾಜಕೀಯ ಮಾಡುತ್ತದೆ. ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಟ್ಟರೆ ಈ ಸಲ ಬಿಜೆಪಿ ಹೆಚ್ಚಿನ ಮತ ಕಳೆದುಕೊಳ್ಳಲಿದೆ. ಮೋದಿ ಹೆಸರಿನ ಮೇಲೆ ಸ್ವಲ್ಪ ವೋಟು ಬೀಳಬಹುದು. ಅದರೆ ಆಗ ಪುತ್ತಿಲ ಪರಿವಾರಕ್ಕೆ ಹಾಗೂ ಬಿಜೆಪಿಗೆ ವೋಟು ಚದುರಿ ಹೋಗುತ್ತವೆ. ಈ ಸಮಯದಲ್ಲಿ ಕಾಂಗ್ರೆಸ್ ಹೆಚ್ಚು ಲಾಭ ಪಡೆಯುತ್ತದೆ. ಯಾಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್‌ ಪುತ್ತಿಲ ಅವರ ಪಕ್ಷೇತರ ಸ್ಪರ್ಧೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಿಜೆಪಿ- ಪುತ್ತಿಲ ನಡುವಿನ ತಿಕ್ಕಾಟದಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಈಗ ಸೊರಕೆ ಮತ್ತು ಪದ್ಮರಾಜ್ ಮಧ್ಯೆ ಫೈಟ್ ಜೋರಾಗಿದೆ. ಅವರಿಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗೋದು ಖಚಿತ.

ಇದನ್ನೂ ಓದಿ : Satish jarkiholi: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್’ಗೆ ಬಿಗ್ ಶಾಕ್ ಕೊಟ್ಟ ಸತೀಶ್ ಜಾರಕಿಹೊಳಿ !!

Leave A Reply

Your email address will not be published.