ಒಂದೇ ಒಂದು ಸಾರಿ ಬಟರ್ ಚಿಕನ್ ತಿಂದಿದ್ದಷ್ಟೇ ಸತ್ತೇ ಹೋದ

Single Bite Butter Chicken Curry: ಇಂಗ್ಲೆಂಡಿನ 27ರ ಹರೆಯದ ಯುವಕನೊಬ್ಬ ಬಟರ್ ಚಿಕನ್ ತಿನ್ನಲು ಇಷ್ಟಪಟ್ಟು, ಈ ಇಷ್ಟ ಆತನ ಅದಕ್ಕಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಮೂಲಕ ಬೆಲೆ ತೆರಬೇಕಾಯಿತು. ಬಟರ್‌ ಚಿಕನ್‌(Butter Chicken Curry) ತಿಂದು ವ್ಯಕ್ತಿ ಸತ್ತೇ ಹೋದ ಹೇಗೆ ಎಂದು ನಿಮಗೆ ಅನಿಸಬಹುದು. ಬನ್ನಿ ಈ ಘಟನೆಯ ಸಂಪೂರ್ಣ ಮಾಹಿತಿಯನ್ನು.

 

ವರದಿಗಳ ಪ್ರಕಾರ, ಬಟರ್ ಚಿಕನ್ ಅನ್ನು ತಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ. ವಾಸ್ತವವಾಗಿ, ಒಂದೇ ಒಂದು ಚಿಕನ್ ಪೀಸ್‌ ತಿಂದ ನಂತರ, ವ್ಯಕ್ತಿಗೆ ಹೃದಯ ಸ್ತಂಭನ ಉಂಟಾಗಿದೆ. ಬಟರ್‌ ಚಿಕನ್‌ ತಿಂದ ವ್ಯಕ್ತಿ ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ ಬರಿ ನಿವಾಸಿ ಜೋಸೆಫ್ ಹಿಗ್ಗಿನ್ಸನ್. ಈ ವ್ಯಕ್ತಿ ನಟ್ಸ್‌ ಮತ್ತು ಬಾದಾಮಿಯ ಸೇವೆಯ ಅಲರ್ಜಿಯನ್ನು ಹೊಂದಿದ್ದರು. ಇದನ್ನು ಅನಾಫಿಲ್ಯಾಕ್ಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿದ್ದರು. ಇಂತಹ ವ್ಯಕ್ತಿಗಳು ನಟ್ಸ್‌ ತಿನ್ನುವಂತಿಲ್ಲ.

 

ಹಿಗ್ಗಿನ್ಸನ್ ಮೆಕ್ಯಾನಿಕ್‌ ವೃತ್ತಿಯನ್ನು ಮಾಡುತ್ತಿದ್ದರು. ಈತ ರೆಸ್ಟೋರೆಂಟ್‌ಗೆ ಬಂದಿದ್ದು, ಆಸೆಯಿಂದ ಬಟರ್ ಚಿಕನ್ ಕರಿಯನ್ನು ಸೇವಿಸುತ್ತಿದ್ದು, ಆದರೆ ಅದರಲ್ಲಿ ಬಾದಾಮಿ ಇದೆ ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗಿತ್ತು

ಬಟರ್‌ ಚಿಕನ್‌ ಸೇವನೆಯಿಂದ ಅಲರ್ಜಿ ಉಂಟಾದ ಕೂಡಲೇ ವ್ಯಕ್ತಿ ಕೆಳಗೆ ಬಿದ್ದಿದ್ದು, ಕೂಡಲೇ ಆತನ ಕುಟುಂಬವು 999 ಅನ್ನು ಡಯಲ್ ಮಾಡಿದೆ. ರಾಯಲ್ ಬೋಲ್ಟನ್ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅಡ್ರಿನಾಲಿನ್ ಮತ್ತು ಸಿಪಿಆರ್ ನೀಡಲಾಯಿತು. ಈ ಪ್ರಯತ್ನಗಳ ಹೊರತಾಗಿಯೂ, ಖಾದ್ಯವನ್ನು ತಿಂದ ಏಳು ದಿನಗಳ ನಂತರ ವ್ಯಕ್ತಿ ಸಾವನ್ನಪ್ಪಿದ್ದಾನೆ

ಇದನ್ನೂ ಓದಿ : ಯಪ್ಪಾ.. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಇಷ್ಟೆಲ್ಲಾ ಲಾಭ ಇದೆ ಗೊತ್ತಾ?!

Leave A Reply

Your email address will not be published.