Third Party Car Insurance:ಥರ್ಡ್ ಪಾರ್ಟಿ ಇನ್ಶುರೆನ್ಸ್ ಅಂದ್ರೆ ಏನು, ಅದನ್ನು ಕಡ್ಡಾಯ ಮಾಡಿದ್ದು ಯಾಕೆ ? ನೀವು ತಿಳಿದಿರಲೇ ಬೇಕಾದ ಮಾಹಿತಿ !
Third Party Car Insurance:ನಿಮ್ಮ ಕಾರು ಅಪಘಾತ ಆಗಿ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಯಿಂದ ಮೂರನೇ ವ್ಯಕ್ತಿಯ ಕಾರು ವಿಮೆ (Third Party Insurance) ನಿಮ್ಮನ್ನು ರಕ್ಷಿಸುತ್ತದೆ. ಅದು ಸಾವು, ಅಂಗವೈಕಲ್ಯ, ಗಾಯ ಅಥವಾ ಮೂರನೇ ವ್ಯಕ್ತಿಯ ಆಸ್ತಿಗೆ ಗಣನೀಯ ಹಾನಿ ಇವುಗಳಲ್ಲಿ ಯಾವುದೇ ಒಂದು ಅಥವಾ ಹಲವು ಆಗಿದ್ದರೂ, ಅದಕ್ಕೆ ನಿಮ್ಮ ವಿಮಾ ಪಾಲಿಸಿ ಪರಿಹಾರ ನೀಡುತ್ತದೆ. ಒಂದು ವೇಳೆ ನಿಮ್ಮ ಕಾರಿಗೆ ಏನಾದರೂ ಡ್ಯಾಮೇಜ್ ಆದರೆ ಆಗ ಥರ್ಡ್ ಪಾರ್ಟಿ ಇನ್ಸೂರೆನ್ಸ್ ನಿಮಗೆ ಯಾವುದೇ ಪರಿಹಾರ ನೀಡಲಾರದು. ಅಂತಹ ಸಂದರ್ಭಗಳಲ್ಲಿ ನಿಮಗೆ ಬೇಕಾದದ್ದು Own damage insurance.
ಕಾರು ವಿಮೆಯಲ್ಲಿ, ವಿಮೆ ಮಾಡಿದ ವ್ಯಕ್ತಿಯನ್ನು ಮೊದಲ ವ್ಯಕ್ತಿ ಎಂದು ಕರೆಯಲಾಗುತ್ತದೆ, ಗಾಯಗೊಂಡ ವ್ಯಕ್ತಿಯನ್ನು ಮೂರನೇ ವ್ಯಕ್ತಿ ಎಂದು ಕರೆಯಲಾಗುತ್ತದೆ. ಮೋಟಾರು ವಾಹನಗಳ ಕಾಯಿದೆ, 1988 ರ ಪ್ರಕಾರ ಭಾರತೀಯ ರಸ್ತೆಗಳಿಗೆ ಮೂರನೇ ವ್ಯಕ್ತಿಯ ವಾಹನಗಳ ರಕ್ಷಣೆಯನ್ನು ಅಂದರೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ. ಮೂರನೇ ವ್ಯಕ್ತಿಯ ಕಾರು ವಿಮೆ ಇಲ್ಲದ ಕಾರನ್ನು (ಕಾರ್ without insurance is crime) ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ, ಅಂತಹಾ ವಾಹನ ರಸ್ತೆಗಿಳಿದರೂ ತಪ್ಪಾಗುತ್ತದೆ.
ಥರ್ಡ್ ಪಾರ್ಟಿ ಕಾರು ವಿಮೆಯಿಂದ ಏನು ಲಾಭ ?
*ಮೂರನೇ ವ್ಯಕ್ತಿಗೆ ಅಂದರೆ ನಿಮ್ಮ ಕಾರಿನಿಂದ ಯಾರಿಗೋ ಒಬ್ಬರಿಗೆ ಸಾವು ಅಥವಾ ಗಾಯದ ಸಂದರ್ಭದಲ್ಲಿ ಪರಿಹಾರ ದೊರೆಯುತ್ತದೆ.
*ಆಸ್ತಿ ಹಾನಿ: ಅಪಘಾತದಿಂದ ಯಾವುದೇ ಆಸ್ತಿ ಹಾನಿಯಾದರೆ, ಆಸ್ತಿ ನಷ್ಟಕ್ಕೆ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ವಿಮೆ ಆ ಮೊತ್ತವನ್ನು ಕಟ್ಟಿ ಕೊಡುತ್ತದೆ.
*ಚಾಲಕನಿಗೆ ವೈಯಕ್ತಿಕ ಅಪಘಾತ ಪರಿಹಾರ: ಅಪಘಾತದಲ್ಲಿ, ವಾಹನದ ಮಾಲೀಕ-ಚಾಲಕನ ಸಾವು ಅಥವಾ ಯಾವುದೇ ದೈಹಿಕ ಗಾಯವನ್ನು ಥರ್ಡ್-ಪಾರ್ಟಿ ಕಾರು ವಿಮೆ ಭರಿಸುತ್ತದೆ.
*ಕಾರು ಮಾಲೀಕನಿಗೆ ಕಾನೂನು ರಕ್ಷಣೆ ಮತ್ತು ಹಣಕಾಸಿನ ನೆರವು ನೀಡುತ್ತದೆ – ಮೂರನೇ ವ್ಯಕ್ತಿಗೆ ಹಾನಿ ಉಂಟುಮಾಡುವ ಅಪಘಾತದ ಸಂದರ್ಭದಲ್ಲಿ ಹಣಕಾಸಿನ ಜವಾಬ್ದಾರಿಗೆ ಕಾರಣವಾಗಿದೆ.
* ಇದೊಂದು ಥರ ಮನಸ್ಸಿನ ಶಾಂತಿಯನ್ನು ನೀಡಿದ ಹಾಗೆ. ನಿಮ್ಮ ಕಾರು ಅಥವಾ ಯಾವುದೇ ವಾಹನ ಅಪಘಾತ ಆಗಿ ಆಲ್ಲಿ ಬಾಧಿತ ಮೂರನೇ ವ್ಯಕ್ತಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಕಾರು ಮಾಲೀಕರಾದ ನಿಮಗೆ ಸಾಧ್ಯವಾಗದೆ ಇರಬಹುದು. ಅದು ತೀವ್ರ ಮಾನಸಿಕ ಒತ್ತಡವನ್ನು ಉಂಟು ಮಾಡಬಹುದು. ಅದಕ್ಕೆ ಪರಿಹಾರ ವಿಮೆ ಪಡೆದುಕೊಂಡು ನೆಮ್ಮದಿಯಾಗಿ ಇರುವುದು.
*ವೈದ್ಯಕೀಯ ಚಿಕಿತ್ಸೆ, ಆಸ್ತಿ ಹಾನಿ ಅಥವಾ ಮೂರನೇ ವ್ಯಕ್ತಿಯ ಅಂತ್ಯದಿಂದ ಉಂಟಾಗುವ ಹಣಕಾಸಿನ ನಷ್ಟದಿಂದ ಉಂಟಾಗುವ ಅನಗತ್ಯ ವೆಚ್ಚಗಳ ವಿರುದ್ಧ ಸರಿಯಾದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಕಾರು ಮಾಲೀಕರು ಮೂರನೇ ವ್ಯಕ್ತಿಯ ಕಾರು ವಿಮೆಯನ್ನು ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಯೋಜನೆಯು ಮೂರನೇ ವ್ಯಕ್ತಿಗೆ ಅಪಘಾತದಲ್ಲಿ ವಿಮೆ ಮಾಡಿದ ವಾಹನದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ (ನಷ್ಟವು ಆಸ್ತಿ, ಸಾವು ಮತ್ತು ಗಾಯಕ್ಕೆ ಹಾನಿಯನ್ನು ಒಳಗೊಂಡಿರುತ್ತದೆ) ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಣೆಗಾರಿಕೆ ವಿಮೆಯು ದೇಶದ ಎಲ್ಲಾ ಕಾರು ವಿಮೆಗಳ ಕಡ್ಡಾಯ ಭಾಗ.
*ಥರ್ಡ್-ಪಾರ್ಟಿ ಕಾರು ವಿಮೆ ಯಾವ ಸಂದರ್ಭದಲ್ಲಿ ದೊರೆಯುವುದಿಲ್ಲ ?*
ಸಾಮಾನ್ಯ ಕಾರು ವಿಮಾ ಪಾಲಿಸಿಯಂತೆ, ಕೆಲವು ಸಂದರ್ಭಗಳಲ್ಲಿ, ಪ್ರಮಾಣಿತ ಮೂರನೇ ವ್ಯಕ್ತಿಯ ವಿಮೆ ಅನ್ವಯಿಸುವುದಿಲ್ಲ. ಯಾರೋ ಅಪರಿಚಿತನ ಕೈಗೆ ಅಥವಾ ಡ್ರೈವರ್ ಅಲ್ಲದವರ ಕೈಗೆ ವಾಹನ ಕೊಟ್ಟು ಆಗ ಹಾನಿ ಸಂಭವಿಸಿದಲ್ಲಿ ಆಗ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಅನ್ವಯ ಆಗುವುದಿಲ್ಲ. Third party ಯ ಕಾರಣದಿಂದ ಅಪಘಾತ ಉಂಟಾದಲ್ಲಿ, ಆಗ ಸದರಿ ವಿಮೆ ದೊರೆಯುವುದಿಲ್ಲ. ಅಣುಬಾಂಬ್, ಯುದ್ದ, ದೇಶ ದೇಶಗಳ ಮಧ್ಯದ ಕದನ ಮುಂತಾದ ಕಾರಣದಿಂದ ಹಾನಿ ಸಂಭವಿಸಿದರೆ ಕೂಡಾ ಥರ್ಡ್ ಪಾರ್ಟಿ ಇನ್ಶುರೆನ್ಸ್ ದೊರೆಯುವುದಿಲ್ಲ.
ಇದನ್ನೂ ಓದಿ : Gobi manchuri ban: ರಾಜ್ಯದಲ್ಲಿ ಗೋಬಿ ಮಂಚೂರಿ ಬ್ಯಾನ್ ?!