Home Karnataka State Politics Updates Hijab Raw: ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್‌ ವಿವಾದ; ಕಾಲೇಜಿಗೆ ಬುರ್ಖಾ ಹಾಕಿಕೊಂಡು ಬಂದ ವಿದ್ಯಾರ್ಥಿನಿ

Hijab Raw: ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್‌ ವಿವಾದ; ಕಾಲೇಜಿಗೆ ಬುರ್ಖಾ ಹಾಕಿಕೊಂಡು ಬಂದ ವಿದ್ಯಾರ್ಥಿನಿ

Hijab Raw

Hindu neighbor gifts plot of land

Hindu neighbour gifts land to Muslim journalist

Hijab Row: ಮುಸ್ಲಿಂ ಯುವತಿಯೋರ್ವಳು ಹಿಜಾಬ್‌ ಧರಿಸಿದ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಹಾಸನದ ಖಾಸಗಿ ಕಾಲೇಜಿನಲ್ಲಿ.

ಇದನ್ನೂ ಓದಿ: Crime News: ಚರ್ಮರೋಗಕ್ಕೆ ಚಿಕಿತ್ಸೆ ಕೊಡುವ ನೆಪ; ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ, ಬಾಲ ಮಂಜುನಾಥ ಸ್ವಾಮೀಜಿ ಅರೆಸ್ಟ್

ವಿದ್ಯಾಸೌಧ ಕಾಲೇಜಿನ ಪ್ರಾಂಶುಪಾಲ ರಂಗೇಗೌಡ ಅವರು ಹೇಳಿರುವ ಪ್ರಕಾರ, ಈ ಘಟನೆ ನಡೆದಿರುವುದು ಎರಡು ದಿನಗಳ ಹಿಂದೆ. ಅಧಿಕಾರಿಗಳು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದು, ಅವರು ಮತ್ತೆ ಹಿಜಾಬ್‌ ಧರಿಸದಿರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಅದು ಹಿಜಾಬ್‌ ಆಗಿರಲಿಲ್ಲ. ಹಿಜಾಬ್‌ ಅನ್ನು ಹೋಲುವ ಬಟ್ಟೆಯನ್ನು ಧರಿಸಲಾಗಿತ್ತು. ಅದನ್ನು ಧರಿಸಿದ ವಿದ್ಯಾರ್ಥಿನಿ ತನಗೆ ಕಿವಿ ಸಮಸ್ಯೆ ಇದೆ ಮತ್ತು ಅದ್ದರಿಂದ ಕಿವಿಯನ್ನು ಮುಚ್ಚಿಕೊಂಡಿರುವುದಾಗಿ ಹೇಳಿದ್ದಳು. ನಾವು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದಾಗಿ ಮತ್ತು ಅದನ್ನು ಪುನರಾವರ್ತನೆ ಮಾಡುವುದಿಲ್ಲ ಎಂದು ಹೇಳಿರುವುದಾಗಿ ಪ್ರಾಂಶುಪಾಲರು ಹೇಳಿದ್ದಾರೆ.