Soujanya Case: ಸಾಕ್ಷಿ ನಾಶ ಮಾಡಿದ ಅಧಿಕಾರಿಯ ಕರಾಳ ಮುಖ ಬಯಲಿಗೆ – ಗಿರೀಶ್ ಮಟ್ಟನ್ನನವರ್ ಸ್ಪೋಟಕ ಹೇಳಿಕೆ !
ಪುತ್ತೂರು ಸೌಜನ್ಯ ಹೊರಾಟದತ್ತ ಎಲ್ಲರ ಚಿತ್ತ
Soujanya Rape Case: ದಿನದಿಂದ ದಿನಕ್ಕೆ ಕಾಮಂದ ಧರ್ಮದರ್ಶಿಯ ಬಿಳಿಯ ಬಣ್ಣ ಕಳಚಿ ಬೀಳುತ್ತಿದೆ. ಮೊನ್ನೆ ದೆಹಲಿಯಲ್ಲಿ ಸೌಜನ್ಯ ಹೋರಾಟ ದೊಡ್ಡದಾಗಿ ನಡೆದು ಧಣಿಗಳ ಅಳಿದುಳಿದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಉದುರಿ ಬಿತ್ತು. ಇನ್ನು ಬರುವ ಭಾನುವಾರ ಮಾ.10 ರಂದು ದ.ಕ.ಜಿಲ್ಲೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಸೌಜನ್ಯ ಹೋರಾಟದ ರುವಾರಿಯಾದ ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ಬೃಹತ್ ನ್ಯಾಯಪರ ಸಭೆಯನ್ನು ಅಲ್ಲಿನ ಸ್ವಾಭಿಮಾನಿ ಹೋರಾಟ ಮಿತ್ರರು ಹಮ್ಮಿಕೊಂಡಿದ್ದಾರೆ.
ತಾಯಿ ಕುಸುಮಾವತಿ, ಸಂತೋಷ್ ರಾವ್ ಪರ ವಕೀಲರಾದ ಮೋಹಿತ್ ಕುಮಾರ್ ಅವರು ಕೂಡಾ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಶ್ರೀ ಗಿರೀಶ್ ಮಟ್ಟನ್ನ ನವರ್ ಸ್ಪೋಟಕ ಮಾಹಿತಿಗಳನ್ನು ಹೊರಹಾಕುವುದಾಗಿ ಹೇಳಿಕೆ ನೀಡಿದ್ದಾರೆ. ಸೌಜನ್ಯ ಪ್ರಕರಣ ಮುಚ್ಚಿ ಹಾಕಲು ನೇರವಾದ ಪ್ರಮುಖ ಸಾಕ್ಷಿ ಮಾಡಿದ ಅಧಿಕಾರಿಯ ಕರಾಳ ಮುಖ ಬಯಲು ಮಾಡುವುದಾಗಿ ಗಿರೀಶ್ ಮಟ್ಟನ್ನ ನವರ್ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಭಾನುವಾರದ ಸುಳ್ಯದ ಕೊಳ್ತಿಗೆಯ ಸೌಜನ್ಯ ಹೋರಾಟ ಭಾರೀ ಗಮನ ಸೆಳೆದಿದೆ.
ನಿರ್ಭಯಾ ಧರ್ಮಸ್ಥಳ ಅಂದರೆ ಸೌಜನ್ಯ ಪ್ರಕರಣ, ಅನೇಕ ಸರಣಿ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ದಾಖಲೆಗಳ ಸಮೇತ, ಸಚಿತ್ರ ಸಮೇತ, ಜನ ಸಾಮಾನ್ಯರ ಮುಂದೆ, ನಮ್ಮ ಕಾರ್ಯಾಂಗ, ಶಾಸಕಾಂಗ, ಮಾಧ್ಯಮ ವ್ಯವಸ್ಥೆಯ ಮುಂದೆ ಇಡುವಂತಹ ಕಾರ್ಯವನ್ನು ನಾವು ಮಾಡುತ್ತಿದ್ದೇವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಹೆಸರನ್ನು ಮುಂದಿಟ್ಟುಕೊಂಡು ಅನೇಕ ಕೊಲೆ, ಸುಲಿಗೆ, ದಬ್ಬಾಳಿಕೆ, ಸಾರ್ವಜನಿಕ ಭೂ ಕಬಳಿಕೆ, ಕಾನೂನು ಬಾಹಿರ ಅಕ್ರಮ ಬಡ್ಡಿ ದಂಧೆಯನ್ನು ದೇವಸ್ಥಾನದ ಪ್ರಮುಖ ಪ್ರಭಾವಿಗಳನ್ನು ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ನಿರಂತರ ಶೋಷಣೆಗೆ ತಾರ್ಕಿಕ ಅಂತ್ಯ ಹಾಕಬೇಕೆನ್ನುವುದು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಈ ಹೋರಾಟದ ಉದ್ದೇಶ.
ಧರ್ಮದ ಮುಖವಾಡ ಹಾಕಿಕೊಂಡು ಧರ್ಮೋದ್ಯಮಿಗಳು ಕಾರ್ಯವನ್ನು ಕೃತ್ಯವನ್ನು ಮಾಡುತ್ತಿದ್ದರೋ, ಅವರ ಕಾರ್ಯವನ್ನು ನಾವು ಬೆತ್ತಲೆ ಮಾಡಿದ್ದೇವೆ. ಸೌಜನ್ಯ ಮತ್ತು ಅನೇಕ ಕೊಲೆ ಪ್ರಕರಣದಲ್ಲಿ ಇದ್ದಂತಹ ಕೊಲೆಗಡುಕರನ್ನು ರಕ್ಷಿಸುವಂತಹ ಅನೇಕ ಪ್ರಕರಣಗಳನ್ನು ನಾವು ಬಯಲಿಗೆಳಿದಿದ್ದೇವೆ.
ಈ ಪ್ರಕರಣವನ್ನು ತಿರುಚಿ, ಸಾಕ್ಷಿ ನಾಶ ಮಾಡಿದಂತಹ ಅಧಿಕಾರಿಯ ಕರಾಳ ಕರ್ಮಕಾಂಡವನ್ನು ನಾನು ಬಯಲು ಮಾಡುತ್ತಿದ್ದೇನೆ. ಹಾಗಾಗಿ ಜನರು ಪಾಲ್ಗೊಳ್ಳಬೇಕು. ದೊಡ್ಡ ದೊಡ್ಡ ಮಾಧ್ಯಮಗಳ ಬಾಯಿ ಮುಚ್ಚಿಟ್ಟಿಸಿದ್ದಾರೆ. ಇವರ ಒಂದು ಮುಖವಾಡ ಬಯಲಿಗೆ ಬರುತ್ತದೆಯೋ, ನಗ್ನ ಸತ್ಯ ಗೊತ್ತಾಗುತ್ತದೆಯೋ ಎಂಬ ಭಯದಿಂದ. ಆದರೆ ಅದಕ್ಕಿಂತ ಹೆಚ್ಚಾಗಿ ಯೂಟ್ಯೂಬ್ ಮಾಧ್ಯಮಗಳು ಕೆಲಸ ಮಾಡುತ್ತಿದೆ. ದೆಹಲಿಯಲ್ಲಿ ನಡೆದ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದೆ. ಅತ್ಯಾಚಾರಿಗಳ ಅಟ್ಟಹಾಸದ ಅಂತ್ಯಕ್ಕೆ ಕ್ಷಣಗಣನೆಗೆ ಬಂದಿದೆ. ತಾವೆಲ್ಲರೂ ಕೂಡಾ ಗಟ್ಟಿಯಾಗಿ ನಿಲ್ಲಬೇಕು, ಭಾಗವಹಿಸಬೇಕು ಎಂದು ಹೋರಾಟಗಾರ ಗಿರೀಶ್ ಮಟ್ಟನ್ನನವರ್ ಹೇಳಿದ್ದಾರೆ. ಭಾನುವಾರದ ಆ ಹೋರಾಟ ಸಭೆ ಕಿಕ್ಕಿರಿದು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.