Nivetha Pethuraj: ಖ್ಯಾತ ನಟಿಯ ಮೋಹ ಪಾಶದಲ್ಲಿದ್ದಾರೆಯೇ ಉದಯನಿಧಿ? ಸಂಚಲನ ಮೂಡಿಸಿದ ಹೇಳಿಕೆ

‘ಟಿಕ್ ಟಿಕ್ ಟಿಕ್’ ಮತ್ತು ‘ಸಂಗತಮಿಜಾನ್’ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ನಟಿ ನಿವೇತಾ ಪೇತುರಾಜ್ ಅವರ ವಿರುದ್ಧ ಬಂದಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿದೆ. ನಟಿ ತನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಜನಪ್ರಿಯ ಪತ್ರಕರ್ತ ಶಂಕರ್ ಅವರನ್ನು ಟೀಕಿಸಿದ್ದಾರೆ. ನಟ ಮತ್ತು ರಾಜಕಾರಣಿ ಉದಯನಿಧಿ ಹಾಗೂ ನಟಿ ನಿವೇತಾ ಪೇತುರಾಜ್ ಕುರಿತು ಹೇಳಿಕೆಯೊಂದನ್ನು ಕಿಡಿ ಹೊತ್ತಿದೆ.
ಇದನ್ನೂ ಓದಿ: Radhika Merchannt: ಡ್ಯಾನ್ಸ್ ಮಾಡುವಾಗ “ಎದೆ ಸೀಳು” ಕಾಣಿಸದಂತೆ ಜಾಕೆಟ್‌ನಿಂದ ಮರೆಮಾಚಿದ ರಾಧಿಕ; ವೀಡಿಯೋ ವೈರಲ್
ದುಬೈನಲ್ಲಿ 50 ಕೋಟಿ ರೂಪಾಯಿಗೆ ಮನೆಯೊಂದನ್ನು ನಟಿ ನಿವೇತಾ ಪೇತುರಾಜ್ ಅವರಿಗೆ ಖರೀದಿಸಿದ್ದಾರೆ. ಭಾರತದಲ್ಲಿ ಬಿಟ್ಟು ದುಬೈನಲ್ಲಿ ಮನೆ ಖರೀದಿ ಮಾಡಿದ್ದೇಕೆ? ನಿವೇತಾ ಮೇಲೆ ಉದಯನಿಧಿಗೆ ವ್ಯಾಮೋಹವಿದೆ. ಆಕೆ ಇಲ್ಲಿ ಇರುವುದು ಬೇಡ ಎಂಬ ಕಾರಣದಿಂದ ದುಬೈನಲ್ಲಿ ಮನೆ ಖರೀದಿ ಮಾಡಲಾಗಿದೆ. ಆಕೆ ತಮಿಳುನಾಡಿಗೆ ತಿಂಗಳಿಗೆ ಎರಡು ಬಾರಿ ಮಾತ್ರ ಬರುತ್ತಾಳೆ. ಕ್ರೀಡಾ ಸ್ಪರ್ಧೆಯೊಂದನ್ನು ಕೂಡಾ ಆಕೆಗೋಸ್ಕರ ತಮಿಳುನಾಡಿನಲ್ಲಿ ಮಾಡಲಾಗಿದೆ ಎಂದು ಶಂಕರ್ ಹೇಳಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದೆ.
https://twitter.com/i/status/1764837843309051957
ಇದಕ್ಕೆ ನಿವೇತಾ ತಿರುಗೇಟು ನೀಡಿದ್ದಾರೆ. ನನಗೋಸ್ಕರ ಖರ್ಚು ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ನಾನು ಬಹಳ ಗೌರವಾನ್ವಿತ ಕುಟುಂಬದಿಂದ ಬಂದಿದ್ದೇನೆ. ನನ್ನ ಕುಟುಂಬ ದುಬೈನಲ್ಲಿ ವಾಸಿಸುತ್ತಿದೆ. ನನಗೆ ಚಿತ್ರರಂಗದಲ್ಲಿ ಅವಕಾಶ ಕೊಡಿ ಎಂದು ನಾನು ಯಾವುದೇ ನಿರ್ಮಾಪಕ, ನಿರ್ದೇಶಕರ ಅಥವಾ ನಾಯಕನ ಬಳಿ ಕೇಳಿಲ್ಲ. ಅವಕಾಶಗಳು ನನ್ನನು ಅರಸಿ ಬಂದವು. ದುಬೈನಲ್ಲಿ ನಾವು 2002 ರಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನಾವು ಸರಳ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
Lately there has been false news circulating about money being lavishly spent on me. I kept quiet because I thought people who are speaking about this will have some humanity to verify the information they receive before mindlessly spoiling a girl’s life.
My family and I have…
— Nivetha Pethuraj (@Nivetha_Tweets) March 5, 2024