S. Somnath: ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೆ ಕ್ಯಾನ್ಸರ್ ಧೃಢ : ಕೀಮೋ ಥೆರಪಿಗೆ ಒಳಗಾದ ವಿಜ್ಞಾನಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO) ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೆ ಸೌರ ಮಿಷನ್ ಆದಿತ್ಯ-ಎಲ್ 1 ಉಡಾವಣೆಯ ದಿನದಂದು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Kadaba: ಕಡಬದಲ್ಲಿ ಆಸಿಡ್ ದಾಳಿ ಪ್ರಕರಣ; ಆರೋಪಿ ಪರೀಕ್ಷಾ ದಿನವನ್ನೇ ಆಯ್ಕೆ ಮಾಡಿದ್ದು ಏಕೆ?
ಮಲಯಾಳಂನ ತಾರ್ಮಕ್ ಮೀಡಿಯಾ ಹೌಸ್ಗೆ ನೀಡಿದ ಸಂದರ್ಶನದಲ್ಲಿ, “ಚಂದ್ರಯಾನ 3 ರ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು” ಆದರೆ, ನನಗೆ ಈ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇರಲಿಲ್ಲ “ಎಂದು ಹೇಳಿದ್ದಾರೆ
ಎರಡು ತಿಂಗಳ ನಂತರ, ಆದಿತ್ಯ-ಎಲ್1 ಉಡಾವಣೆಯಾದ ದಿನದಂದು ಕ್ಯಾನ್ಸರ್ ಇರುವುದು ತಿಳಿಯಿತು. ನಾನು ಆ ದಿನದ ಬೆಳಿಗ್ಗೆ ಸ್ಕ್ಯಾನ್ ಐ ಮಾಡಿಸಿದಾಗ, ನನ್ನ ಹೊಟ್ಟೆಯಲ್ಲಿ ಕ್ಯಾನ್ಸರ್ ಗೆಡ್ಡೆ ಇರುವುದಾಗಿ ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ.
ನಂತರ ಸಮಸ್ಯೆಯನ್ನು ಖಚಿತಪಡಿಸಲು ಅವರು ಕೇರಳದಲ್ಲಿ ಸ್ಕ್ಯಾನ್ ಮಾಡಿಸಿದ್ದು, ಸ್ಕ್ಯಾನಿಂಗ್ ನಲ್ಲಿ ಆನುವಂಶಿಕ ಕಾಯಿಲೆಯನ್ನು ದೃಢಪಡಿಸಿದ್ದು, ವೈದ್ಯರ ಸಲಹೆ ಮೇರೆಗೆ ನಂತರ ಶಸ್ತ್ರಚಿಕಿತ್ಸೆಗೆ ಒಳಗಾದೆ ಎಂದು ತಿಳಿಸಿದ್ದಾರೆ.
“ಆದಿತ್ಯ-ಎಲ್1 ನಂತರ, ನನಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು. ಅದರ ನಂತರ, ನಾನು ಕೀಮೋಥೆರಪಿಗೆ ಒಳಗಾದೆ “ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಕುಟುಂಬ ಸದಸ್ಯರಿಗೆ ಹೇಳಿದಾಗ ಅವರು ಹೆಚ್ಚು ಆಘಾತಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ. ಸದ್ಯಕ್ಕೆ ಈಗ ಚೇತರಿಸಿಕೊಂಡಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ