Different love story: ಬರ್ಗರ್ ಕೊಡಿಸಿ 20ರ ಯುವತಿಯನ್ನು ಮದುವೆಯಾದ ಆಸಾಮಿ !!

Share the Article

Different love story: ಪ್ರೀತಿಗೆ ಕಣ್ಣಿಲ್ಲ, ಅದು ಕುರುಡು ಎಂದು ಜನರು ಹೇಳುವುದಕ್ಕೆ ಮತ್ತೊಂದು ಸಾಕ್ಷಿ ದೊರೆತಿದ್ದು, ಖಾಲಿ ತನಗೆ ಬರ್ಗರ್‌ ತಂದುಕೊಟ್ಟ ವ್ಯಕ್ತಿಯೊಂದಿಗೆ 20ವರ್ಷದ ಯುವತಿಯೊಬ್ಬಳು ಪ್ರೀತಿಯಲ್ಲಿ ಬಿದ್ದ ಘಟನೆ ನಡೆದಿದೆ.

ಹೌದು, ಬರ್ಗರ್ ತಂದು ಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದು, ಪಾಕಿಸ್ತಾನದ(Pakisthan) ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹವಾಗಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಶಿಷ್ಟ ಪ್ರೇಮಕಥೆಯನ್ನು(Different love story) ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಈ ಒಂದು ವಿಚಿತ್ರ ಲವ್ಸ್ಟೋರಿ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸೋದರ ಸಂಬಂಧಿ ತಂದುಕೊಟ್ಟ ಬರ್ಗರ್ ತಿಂದು ಯುವತಿಯೊಬ್ಬಳಿಗೆ ಆತನ ಮೇಲೆ ಲವ್ ಆಗಿ ತನಗಿಂತ 20 ವರ್ಷ ದೊಡ್ಡವನಾದರೂ ಆತನನ್ನೇ ಮದುವೆಯಾಗಿದ್ದಾಳೆ. ಈ ಬರ್ಗರ್ ಪ್ರೇಮ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Leave A Reply