Rahul Gandhi: ಶೇಕ್‌ಹ್ಯಾಂಡ್‌ ಮಾಡಲು ಬಂದ ರಾಹುಲ್‌ ಗಾಂಧಿಗೆ ಆಲೂಗಡ್ಡೆ ಕೊಟ್ಟು, ಚಿನ್ನ ಕೊಡಿ ಎಂದ ಬಿಜೆಪಿ ಕಾರ್ಯಕರ್ತರು

Rahul Gandhi: ರಾಹುಲ್‌ ಗಾಂಧಿ ಒಡಿಶಾ ಪ್ರವಾಸದ ಸಂದರ್ಭ ಒಂದು ವಿಚಿತ್ರ ಘಟನೆಯೊಂದು ನಡೆದಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವರು ತೆರೆದ ವಾಹನದಲ್ಲಿ ಪ್ರಚಾರ ಮಾಡುವ ಸಂದರ್ಭಲ್ಲಿ, ಎದುರಾದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದ್ದು, ಕೂಡಲೇ ವಾಹನ ನಿಲ್ಲಿಸುವಂತೆ ಹೇಳಿದ ರಾಹುಲ್‌ ಗಾಂಧಿ ವಾಹನದಿಂದ ಇಳಿದು ನೇರವಾಗಿ ಬಿಜೆಪಿ ಕಾರ್ಯಕರ್ತರಿದ್ದಲ್ಲಿಗೆ ಹೋಗಿದ್ದಾರೆ.

 

ಈ ವೇಳೆ ಕಾರ್ಯಕರ್ತರು ಜೈ ಶ್ರೀರಾಮ್‌, ಜೈ ಶ್ರೀರಾಮ್‌, ಮೋದಿ ಮೋದಿ ಎಂದು ಘೋಷಣೆ ಕೂಗಿದರು. ರಾಹುಲ್‌ ಗಾಂಧಿ ಅವರು ಅಲ್ಲಿಗೆ ಬಂದು ಬಿಜೆಪಿ ಕಾರ್ಯಕರ್ತರಿಗೆ ಹಸ್ತಲಾಘವ ಮಾಡಿದ್ದು, ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿಗೆ ಚಿನ್ನ ತಯಾರಿಸಲು ಆಲೂಗಡ್ಡೆಯನ್ನು ನೀಡಿರುವ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತರ ಬಳಿ ಬಂದು ಹಸ್ತಲಾಘವ ಮಾಡಿದ ರಾಹುಲ್‌ ಗಾಂಧಿಗೆ ಆಲೂಗಡ್ಡೆಯನ್ನು ಕಾರ್ಯಕರ್ತರು ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿಗೆ ನೀಡಲು ಆಲೂಗಡ್ಡೆ ತಂದಿದ್ದರು ಮತ್ತು ಪ್ರತಿಯಾಗಿ ಚಿನ್ನವನ್ನು ಕೇಳಲು ಪ್ರಾರಂಭಿಸಿದರು. ಇದಕ್ಕೆ ಮುಗುಳ್ನಕ್ಕು ರಾಹುಲ್ ಗಾಂಧಿ ಬಿಜೆಪಿ ಕಾರ್ಯಕರ್ತರ ಈ ಬೇಡಿಕೆಗೆ ಫ್ಲೈಯಿಂಗ್‌ ಕಿಸ್‌ಗಳನ್ನು ನೀಡಿದರು. ನಂತರ ಮತ್ತೆ ತಮ್ಮ ಜೀಪ್ ಹತ್ತಿದರು.

Leave A Reply

Your email address will not be published.