Home Crime Trhipura: ಮಗನ ಶವದೊಂದಿಗೇ ತಾಯಿಯ ವಾಸ, ಅನುಮಾನಗೊಂಡು ಬಾಗಿಲು ಒಡೆದಾಗ ಬಯಲಾಯ್ತು ಬೆಚ್ಚಿಬೀಳೋ ಸಂಗತಿ !!

Trhipura: ಮಗನ ಶವದೊಂದಿಗೇ ತಾಯಿಯ ವಾಸ, ಅನುಮಾನಗೊಂಡು ಬಾಗಿಲು ಒಡೆದಾಗ ಬಯಲಾಯ್ತು ಬೆಚ್ಚಿಬೀಳೋ ಸಂಗತಿ !!

Trhipura

Hindu neighbor gifts plot of land

Hindu neighbour gifts land to Muslim journalist

Thripura: ತಾಯಿಯೊಬ್ಬರು ಮೃತ ಮಗನ ಶವವೊಂದಿಗೆ 8 ದಿನ ಕಳೆದಿದ್ದು, ಅನುಮಾನಗೊಂಡು ಬಾಗಿಲು ತೆರೆದಾಗ ಆಘಾತಕಾರಿ ಘಟನೆಯೊಂದು ಬಯಲಾಗಿದೆ.

ಇದನ್ನೂ ಓದಿ: Cigarette rule: ಸಿಗರೇಟ್ ಕೊಳ್ಳಲೂ ಬಂತು ಹೊಸ ರೂಲ್ಸ್, ಇನ್ಮುಂದೆ ಸಿಗೋದಿಲ್ಲ ಸಿಂಗಲ್ ಸಿಗರೇಟ್, ಸರ್ಕಾರದಿಂದ ಖಡಕ್ ಆದೇಶ!

ಹೌದು, ತ್ರಿಪುರ(Thripura) ರಾಜಧಾನಿ ಅಗರ್ತಲಾದಲ್ಲಿ ಹಾಸಿಗೆ ಹಿಡಿದ 82 ವರ್ಷದ ತಾಯಿಯೊಬ್ಬರು ಪಾ ತಮ್ಮ 56 ವರ್ಷದ ಮಗನೊಂದಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಮಗ ಸತ್ತುಹೋಗಿದ್ದಾರೆ. ಆದರೆ ಏಳಲು ಆಗದೆ, ಯಾರಿಗೂ ತಿಳಿಸಲೂ ಆಗದೆ ತಾಯಿ ಮಗನ ಶವದೊಂದಿಗೆ 8ದಿನ ಕಳೆದಿದ್ದಾರೆ.

ಮಗ ಸತ್ತು ವಾರವೇ ಕಳೆದಿರುವುದರಿಂದ ಮಗನ ದೇಹ ಕೊಳೆತು ಕೆಟ್ಟ ವಾಸನೆ ಬರಲು ಶುರುವಾಗಿದ್ದು, ಸಹಿಸಲಾಗದ ಕೆಟ್ಟ ವಾಸನೆಯ ಹಿನ್ನೆಲೆಯಲ್ಲಿ ನೆರೆಹೊರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮಗ ಸತ್ತು ಬಿದ್ದಿದ್ದು ತಾಯಿ ಹಾಸಿಗೆ ಹಿಡಿದಿರುವುದು ಗೊತ್ತಾಗಿದೆ. ಸ್ಥಳೀಯರಲ್ಲಿ ಭಾರೀ ಆತಂಕವನ್ನು ಸೃಷ್ಟಿಮಾಡಿದೆ.

ಅಂದಹಾಗೆ ಮೂರು ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆ ಮನೆ ಬಿಟ್ಟು ಹೋದ ನಂತರ ಕಲ್ಯಾಣಿ ಸುರ್ ಚೌಧರಿ ತನ್ನ ಮಗ ಸುಧೀರ್ (54) ಜತೆಯೇ ವಾಸಿಸುತ್ತಿದ್ದರು. ಆದರೆ, ಹಾಸಿಗೆ ಹಿಡಿದ ವೃದ್ಧೆಗೆ ಮಗನ ಬೆಳವಣಿಗೆ ಗಮನಿಸಲು ಅಸಾಧ್ಯವಾಗಿದೆ. ಪತ್ನಿಯೊಂದಿಗೆ ಉಂಟಾದ ಕಲಹದಿಂದ ಬೇಸತ್ತ ಸುಧೀರ್, ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಅಕ್ಕಪಕ್ಕದವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.