Dakshina Kannada: ಅರುಣ್‌ ಕುಮಾರ್‌ ಪುತ್ತಿಲ ಬಂಡಾಯ ಸ್ಪರ್ಧೆ ಕುರಿತು ನಳಿನ್‌ ಕುಮಾರ್ ಪ್ರತಿಕ್ರಿಯೆ ಹೀಗಿದೆ

Nalin Kumar Kateel: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಸಂಘಟನೆ ಬಂಡಾಯ ಸ್ಪರ್ಧೆ ಘೋಷಣೆ ಮಾಡಿದ ಮೇಲೆ, ಈ ಕುರಿತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ತಿಲ ಪರಿವಾರ ಎಂಬುವುದು ಒಂದು ಸ್ವತಂತ್ರ ಸಂಸ್ಥೆ. ಆ ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ ಎಂದು ಕಟೀಲ್‌ ಹೇಳಿದ್ದಾರೆ.

ಬಿಜೆಪಿ ನಾಯಕರು ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಬಹಳ ವರ್ಷಗಳ ಹೋರಾಟದಿಂದ ಭಾರತೀಯ ಜನತಾ ಪಕ್ಷ ಈ ಸ್ಥಾನಕ್ಕೆ ಬಂದಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ್ನು ಎದುರಿಸಿ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಹೀಗಾಗಿ ಪಕ್ಷಕ್ಕೆ ಎದುರಾಳಿ ಎಂಬ ಪ್ರಶ್ನೆ ಇಲ್ಲ ಎಂದು ಕಟೀಲ್‌ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ಆಗಿನ ಸಮಸ್ಯೆಗಳೇ ಬೇರೆ. ಈಗಿನದ್ದೇ ಬೇರೆ. ಈ ಬಾರಿಯ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇನೆ. ಟಿಕೆಟ್‌ ಕೊಡುವುದು ಬಿಡುವುದು ರಾಷ್ಟ್ರೀಯ ನಾಯಕರ ತೀರ್ಮಾನ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

 

 

Leave A Reply

Your email address will not be published.