Shivalinga: ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು? ಶಿವಲಿಂಗವನ್ನು ಮೊಟ್ಟಮೊದಲು ಪೂಜಿಸಿದವರು ಯಾರು?
ಶಿವನೆಂದರೆ ಹಿಂದೂ ಧರ್ಮದಲ್ಲಿ ಪ್ರಮುಖ ದೇವರು. ಪ್ರತಿ ವರ್ಷವೂ ಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಹಿಂದುಗಳು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸುತ್ತಾರೆ. ಈ ದಿನದಂದು ಉಪವಾಸ ಸಹ ಮಾಡುತ್ತಾರೆ.
ಇದನ್ನೂ ಓದಿ: Mangaluru Daivaradhane: ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ಪ್ರಶ್ನಾ ಚಿಂತನೆಯಲ್ಲಿ ದೊರೆತ ಉತ್ತರವೇನು?
ಈ ದಿನದಂದು ಲಿಂಗಕ್ಕೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ ಎಂಬ ಮಾತಿದೆ. ಮಹಾಶಿವರಾತ್ರಿಗೂ ಶಿವಲಿಂಗಕ್ಕೂ ಏನು ಸಂಬಂಧ ಎಂಬುವುದರ ಬಗ್ಗೆ ನೋಡೋಣ.
ಶಿವಲಿಂಗವನ್ನು ಶಿವನ ಪ್ರತಿರೂಪ ಎಂದು ಹೇಳುತ್ತಾರೆ. ಶಿವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಸಂಸ್ಕೃತದಲ್ಲಿ ಲಿಂಗಕ್ಕೆ ಚಿನ್ಹೆ ಎಂಬ ಅರ್ಥವಿದೆ. ಆದ್ದರಿಂದ ಲಿಂಗವು ಶಿವನ ರೂಪ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಶಿವರಾತ್ರಿಯ ದಿವಸ ಶಿವಲಿಂಗ ಜನಿಸಿತು ಎಂಬ ಕಥೆ ಇದೆ.
ಲಿಂಗವು ಮೂರು ಸೃಷ್ಟಿಗಳನ್ನು ಒಳಗೊಂಡಿದೆ. ಬ್ರಹ್ಮ ವಿಷ್ಣು ಸಹ ಶಿವರಾತ್ರಿಯ ದಿನ ಲಿಂಗವನ್ನು ಪೂಜೆ ಮಾಡುತ್ತಾರೆ. ಶಿವಲಿಂಗದ ಮಹಿಮೆಯನ್ನು ನಾವು ವೇದ ಪುರಾಣಗಳಲ್ಲಿ, ಶಿವ ಪುರಾಣ, ಸ್ಕಂದ ಪುರಾಣ ,ಕೂರ್ಮ ಪುರಾಣ, ವಾಯು ಪುರಾಣ ಲಿಂಗ ಪುರಾಣ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಈ ಬಗ್ಗೆ ಸಂಪೂರ್ಣವಾಗಿ ವಿವರ ನೀಡಲಾಗಿದೆ.
ಒಂದು ವೇಳೆ ಶಿವರಾತ್ರಿಯಲ್ಲಿ ನಾವು ಭಕ್ತಿಯಿಂದ ಲಿಂಗವನ್ನು ಪೂಜಿಸಿದರೆ ನಮ್ಮ ಎಲ್ಲಾ ಕಷ್ಟಗಳು ಮರೆಯಾಗುತ್ತವೆ. ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳುತ್ತಾರೆ.
ವಿಷ್ಣು ಮತ್ತು ಬ್ರಹ್ಮ ಶಿವಲಿಂಗವನ್ನು ಏಕೆ ಪೂಜಿಸುತ್ತಾರೆ.. ಈ ಕಥೆಯನ್ನು ಈಗ ತಿಳಿಯೋಣ.
ಒಂದು ಬಾರಿ ಬ್ರಹ್ಮದೇವ ಮತ್ತು ವಿಷ್ಣುದೇವನಿಗೆ ಘೋರ ಜಗಳವಾಗುತ್ತದೆ. ಆಯುಧವಿಡಿದು ಯುದ್ಧಕ್ಕೆ ನಿಲ್ಲುತ್ತಾರೆ. ದೇವತೆಗಳೆಲ್ಲರೂ ಯುದ್ಧವನ್ನು ತಡೆಯುವಂತೆ ಶಿವನ ಹತ್ತಿರ ಹೋಗುತ್ತಾರೆ. ಆಗ ಶಿವನು ಲಿಂಗವಾಗಿ ಪ್ರತ್ಯಕ್ಷವಾಗಿ ಅವರ ಜಗಳ ನಿಲ್ಲಿಸುತ್ತಾನೆ. ಆಗ ಬ್ರಹ್ಮ ವಿಷ್ಣು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ ಎಂಬ ಉಲ್ಲೇಖವಿದೆ.
.