Mangaluru: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

Share the Article

Mangaluru: ಸುರತ್ಕಲ್‌ ವಿದ್ಯಾದಾಯಿನಿ ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಹಳೆಯಂಗಡಿ ಸಮೀಪದ ನಂದಿನಿ ನದಿಯಲ್ಲಿ ಮುಳುಗಿ ಮೃತಹೊಂದಿರುವ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: Rapido: ಬೆಂಗಳೂರಿನ ವ್ಯಕ್ತಿಯನ್ನು ಗಂಟೆಗಳ ಕಾಲ  ಒತ್ತೆಯಾಳಾಗಿಟ್ಟುಕೊಂಡ  ರ್ಯಾಪಿಡೋ ಚಾಲಕ

ಸುರತ್ಕಲ್‌ ಅಗರಮೇಲ್‌ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್‌ (15) ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್‌ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ (15) ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್‌ (15) ಮೃತ ಹೊಂದಿದ ಬಾಲಕರು.

ನಿನ್ನೆ ಮಧ್ಯಾಹ್ನ ಪ್ರಿಪರೇಟರಿ ಪರೀಕ್ಷೆ ಮುಗಿಸಿ ಮಕ್ಕಳು ಶಾಲೆಯಿಂದ ಮನೆಗೆ ಹೋಗದೇ ನಾಪತ್ತೆಯಾಗಿದ್ದರು. ಪೋಷಕರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರೂ ಸಂಜೆಯ ಸಮಯ ಸುರತ್ಕಲ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ, ಹಳೆಯಂಗಡಿ ರೈಲ್ವೇ ಸೇತುವೆ ಕೆಳಭಾಗದಲ್ಲಿ ವಿದ್ಯಾರ್ಥಿಗಳ ಶಾಲಾಬ್ಯಾಗ್‌, ಸಮವಸ್ತ್ರ ಪತ್ತೆಯಾಗಿತ್ತು. ನಂತರ ಸಂಶಯದಿಂದ ನಂದಿನಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.

ಪರೀಕ್ಷೆ ಮುಗಿದಿದ್ದರಿಂದ ಈಜಾಡಲೆಂದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ನೀರಿನ ಆಳ ತಿಳಿಯದ ಬಾಲಕರು ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply