Mangaluru: ಚಾರಣಕ್ಕೆ ನಿಷೇಧವಿದ್ದರೂ ಶಿಫಾರಸ್ಸಿನ ಮೂಲಕ ಚಾರಣಕ್ಕೆ ತೆರಳಿದ್ದ ಡಿವೈಎಸ್‌ಪಿ ಸಂಬಂಧಿ ಪತ್ತೆ
Mangaluru: ಡಿವೈಎಸ್‌ಪಿ ಸಂಬಂಧಿ ಧನುಷ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಚಾರ್ಮಾಡಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಇದೀಗ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಬಾಳುರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯದುರ್ಗ ಬಳಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: Mangaluru Student Missing Case: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ; ಮಹತ್ವದ ಮಾಹಿತಿ
ಡಿವೈಎಸ್‌ಪಿ ಶಿಫಾರಸ್ಸು ಬಳಿ ಬೆಂಗಳೂರು ಮೂಲಕ ಹತ್ತು ಜನ ವಿದ್ಯಾರ್ಥಿಗಳು ರವಿವಾರ (ಫೆ.25) ರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು. ಈ ತಂಡದಲ್ಲಿ ಡಿವೈಎಸ್‌ಪಿ ಸಂಬಂಧಿ ಧನುಷ್ ನಾಪತ್ತೆಯಾಗಿದ್ದ. ಈತ ದಟ್ಟಾರಣ್ಯದಲ್ಲಿ ಸುಮಾರು 700 ಅಡಿ ಕೆಳಗಿದ್ದ ಎನ್ನಲಾಗಿದೆ. ಧನುಷ್ ನಾಪತ್ತೆಯಾದ ಸುದ್ದಿ ಗೊತ್ತಾದಂತೆ ಈ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ನಂತರ ಪೊಲೀಸರು ಧರ್ಮಸ್ಥಳ, ಬೆಳ್ತಂಗಡಿ ಪೊಲೀಸರು, ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದು, ಈ ಸಂದರ್ಭ ನಾಪತ್ತೆಯಾಗಿದ್ದ ಯುವಕನ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಪತ್ತೆಯಾಗಿ, ನಂತರ ಕಡಿತಗೊಂಡಿತ್ತು. ಮಧ್ಯರಾತ್ರಿ ಧನುಷ್ ಪತ್ತೆಯಾಗಿದ್ದಾನೆ.