Jio Network: ತಮ್ಮ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗಿದ್ದಕ್ಕೆ ಇಡೀ ದೇಶಕ್ಕೇ ಜಿಯೋ ನೀಡಿದ ಅಂಬಾನಿ !!

 

Jio Network: ಜಿಯೋ ಭಾರತದಲ್ಲಿ ನಂ.1 ನೆಟ್‌ವರ್ಕ್ ಆಗಿ ಹೊರಹೊಮ್ಮಿದೆ, 5G ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದಲ್ಲಿ ಏರ್‌ಟೆಲ್‌ಗಿಂತ ಮುಂದಿದೆ. ಅಷ್ಟೇ ಅಲ್ಲ ನೆಟ್ವರ್ಕ್ ಸೋಕದಿದ್ದ ಅನೇಕ ಹಳ್ಳಿಗಳಿಗೂ ಜಿಯೋ ಎಂಟ್ರಿ ನೀಡಿ ಜನರ ಬದುಕನ್ನು ಹಸನಾಗಿಸಿದೆ. ಅನೇಕ ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ವರದಾನವಾಗಿದೆ. ಇಷ್ಟೆಲ್ಲಾ ನೆರವಾಗೋ ಈ ಜಿಯೋ ನೆಟ್ವರ್ಕ್ ಹುಟ್ಟಿದ್ದೇ ಒಂದು ರೋಚಕ.

ಹೌದು, ಜಿಯೋ ನೆಟ್ವರ್ಕ್(Jio Network)ಹೇಗೆ ಹುಟ್ಟಿತು ಎಂಬುದರ ಬಗ್ಗೆ ಸ್ವತಃ ರಿಲಯನ್ಸ್(Reliance)ಮುಖ್ಯಸ್ಥ ಮುಖೇಶ್ ಅಂಬಾನಿ(Mukesh ambani)ಯವರೇ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಗಳಿಗೆ ನೆಟ್ವರ್ಕ್ ಕೊರತೆಯಾಯ್ತೆಂದು, ಇದನ್ನು ನೀಗಿಸಲೈ ಇಡೀ ದೇಶಕ್ಕೇ ನೆಟ್ವರ್ಕ್ ನೀಡಿರುವುದಾಗಿ ಅವರು ಹೇಳಿದ್ದಾರೆ. ಅಂದಹಾಗೆ ಅಲ್ಪ ಕಾಲದಲ್ಲೇ ದೈತ್ಯವಾಗಿ ಬೆಳೆದ ಜಿಯೋ ಮುಖ್ಯಸ್ಥ ಅಂಬಾನಿ 2018 ರಲ್ಲಿ ಲಂಡನ್‌ನಲ್ಲಿ ನಡೆದ ಫೈನಾನ್ಶಿಯಲ್ ಟೈಮ್ಸ್ ಆರ್ಸೆಲರ್ ಮಿತ್ತಲ್ ಬೋಲ್ಡ್‌ನೆಸ್ ಇನ್ ಬ್ಯುಸಿನೆಸ್ ಅವಾರ್ಡ್ಸ್‌ ಸಮಯದಲ್ಲಿ ತಮ್ಮ ಭಾಷಣದಲ್ಲಿ ಆಸಕ್ತಿದಾಯಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹಾಗಿದ್ರೆ ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.

ಅಂದಹಾಗೆ ‘2011ರಲ್ಲಿ ಜಿಯೋ(Jio) ಪ್ರಾರಂಭಿಸಲು ತಮ್ಮ ಮಗಳು ಇಶಾ ಕಾರಣ ಎಂದು ಅಂಬಾನಿ ಹೇಳಿದ್ದಾರೆ. ಇದು ಮಗಳು ಆಗ ಯೇಲೆ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದಳು ಮತ್ತು ರಜೆಗಾಗಿ ಮನೆಗೆ ಮರಳಿದ್ದಳು. ಆಗ ಮನೆಯಲ್ಲಿದ್ದ ಕಳಪೆ ನೆಟ್ವರ್ಕ್ ಆಕೆಯ ಹತಾಶೆಗೆ ಕಾರಣವಾಯ್ತು . ಮನೆಯಲ್ಲಿರುವ ಸಮಯದಲ್ಲಿ ಕೆಲ ಕೋರ್ಸ್‌ಗಳನ್ನು ಮುಗಿಸಿಕೊಳ್ಳಲು ಬಯಸಿದ್ದ ಇಶಾಗೆ ಇಂಟರ್ನೆಟ್ ಸಮಸ್ಯೆ ದೊಡ್ಡ ಸಮಸ್ಯೆಯಾಯಿತು. ಆಕೆ ಈ ವಿಷಯವನ್ನು ನನಗೆ ಹೇಳಿಕೊಂಡಳು. ಮಗಳ ಈ ಸಮಸ್ಯೆ ಕೇಳಿದ ನಾನು, ಕೇವಲ ಮಗಳಿಗಲ್ಲ, ಕೋಟ್ಯಂತರ ಭಾರತೀಯರಿಗೆ ಕೈಗೆಟುಕುವ, ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸಲು ಜಿಯೋ ಲಾಂಚ್ ಮಾಡಲು ಸಾಧ್ಯವಾಯಿತು ‘ ಎಂದು ಹೇಳಿದ್ದಾರೆ.

Leave A Reply

Your email address will not be published.