Political News: ದೆಹಲಿಯಲ್ಲಿ ಸರ್ಕಾರ ನಡೆಸಿದ್ದಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು: ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದು, ಎರಡು ಸರ್ಕಾರಗಳ ನಡುವಿನ ಸಂಘರ್ಷದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರವನ್ನು ನಡೆಸಿದ್ದಕ್ಕಾಗಿ ತಮಗೆ “ನೊಬೆಲ್ ಪ್ರಶಸ್ತಿ” ಸಿಗಬೇಕು ಎಂದು ಹೇಳಿದ್ದಾರೆ.

 

ನೀರಿನ ಬಿಲ್ಗಳ ಕುರಿತ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, “ಬಿಜೆಪಿಯವರು ದೆಹಲಿಯಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣವನ್ನು ತಡೆಯಲು ಪ್ರಯತ್ನಿಸಿದರು. ಬಡವರು ಉತ್ತಮ ಶಿಕ್ಷಣ ಪಡೆಯುವುದನ್ನು ಅವರು ಬಯಸುವುದಿಲ್ಲ, ನನಗೆ ಗೊತ್ತು, ನಾನು ದೆಹಲಿಯಲ್ಲಿ ಸರ್ಕಾರವನ್ನು ಹೇಗೆ ನಡೆಸುತ್ತಿದ್ದೇನೆ ಎಂದು, ಇದಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು ” ಎಂದು ತಿಳಿಸಿದ್ದಾರೆ.

ಬಾಕಿ ಇರುವ ನೀರಿನ ಬಿಲ್ಗಳ ಒಂದು ಬಾರಿಯ ಇತ್ಯರ್ಥವನ್ನು ಅನುಷ್ಠಾನಗೊಳಿಸಲು ಎಎಪಿ ಸರ್ಕಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರಿ ಅಧಿಕಾರಿಗಳು ಕೇಂದ್ರದ ಬಗ್ಗೆ ಹೆದರುತ್ತಿದ್ದರಿಂದ ಎಎಪಿ ಸರ್ಕಾರದಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Leave A Reply

Your email address will not be published.